ಕರ್ನಾಟಕ

karnataka

ETV Bharat / entertainment

ಅಣ್ಣಾವ್ರ ಮೊಮ್ಮಗ ಯುವ ರಾಜ್​ಕುಮಾರ್​ ಚಿತ್ರಕ್ಕೆ ನಾಳೆಯೇ ಮುಹೂರ್ತ - Yuva Rajkumar movie

ದಿ.ಡಾ. ರಾಜ್​ಕುಮಾರ್​ ಮೊಮ್ಮಗ ಯುವ ರಾಜ್​ಕುಮಾರ್​ ಅವರನ್ನು ನಟನಾಗಿ ಲಾಂಚ್ ಮಾಡಲು ಮುಹೂರ್ತ ನಿಗದಿ ಆಗಿದೆ.

Yuva Rajkumar first film
ಯುವ ರಾಜ್​ಕುಮಾರ್ ಚೊಚ್ಚಲ​ ಚಿತ್ರ

By

Published : Mar 2, 2023, 3:55 PM IST

ದೊಡ್ಮನೆ ಅಭಿಮಾನಿಗಳ ಕನಸು ನನಸಾಗುವ ಸಮಯ ಬಂದಿದೆ. ಪವರ್ ಸ್ಟಾರ್ ಅನ್ನು ಪವರ್​ಫುಲ್​ ಆಗಿ ಬೆಳ್ಳೆತೆರೆ ಮೇಲೆ ತೋರಿಸಲು ರೆಡಿಯಾಗಿದ್ದ ಕಥೆಗೆ ದೊಡ್ಮನೆ ಕುಡಿ ಜೀವ ತುಂಬಲಿದ್ದಾರೆ. ಹೊಂಬಾಳೆ ಬಳಗ ಇದಕ್ಕೆ ಬೇಕಾದ ಸಕಲ ಸಿದ್ಧತೆ ನಡೆಸಿದೆ. ಯುವ ರಾಜ್​ಕುಮಾರ್​ ಅವರನ್ನು ಹೀರೋ ಆಗಿ ಲಾಂಚ್ ಮಾಡಲು ಭರ್ಜರಿ ತಯಾರಿ ನಡೆದಿದೆ.

ಪುನೀತ್ ರಾಜ್‍ಕುಮಾರ್ ಎಂಬ ಜೀವ ನಮ್ಮೊಂದಿಗಿದ್ದಿದ್ದರೆ ಅವರ ನೆರಳಲ್ಲೇ ರಾಘವೇಂದ್ರ ರಾಜ್‌ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್​ಕುಮಾರ್​​ ನಾಯಕ ನಟನಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದರು. ಆದ್ರೆ ವಿಧಿಯಾಟವೇ ಬೇರೆ. ಈ ಹಿನ್ನೆಲೆ, ಯುವ ನಾಯಕನಾಗಿ ನಟಿಸೋದು ಕೊಂಚ ತಡವಾಗಿದೆ. ಪಿಅರ್​ಕೆ ಪ್ರೊಡಕ್ಷನ್​​ನಲ್ಲಿ ಯುವನನ್ನು ನಟನಾಗಿ ಲಾಂಚ್ ಮಾಡಲು ಅಪ್ಪು ಕನಸು ಕಂಡಿದ್ರು. ಅದ್ರೇ ಆ ಕನಸು ಈಗ ಹೊಂಬಾಳೆ ಬಳಗದಿಂದ ನನಸಾಗುತ್ತಿದೆ. ಅಪ್ಪು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ರೆ ಏನಂತೆ ಅವ್ರು ನಾವು ಮಾಡುವ ಪ್ರತೀ ಕೆಲಸದಲ್ಲೂ ನಮ್ಮ ಜೊತೆ ಇರುತ್ತಾರೆ ಎನ್ನುವ ಹೊಂಬಾಳೆ ಫಿಲ್ಮ್ಸ್​​​ ಅಪ್ಪು ಕನಸನ್ನು ನನಸು ಮಾಡಲು ಸಜ್ಜಾಗಿದೆ.

ಅಪ್ಪು ಜೊತೆ ಯುವ ರಾಜ್​ಕುಮಾರ್

ದಿ. ಪುನೀತ್​ ರಾಜ್​ಕುಮಾರ್​​​ ಅವರಿಗಾಗಿ ಹೆಣೆದಿದ್ದ ಕಥೆ ಮೂಲಕ ಯುವ ರಾಜ್​​ಕುಮಾರ್​ ಅವರನ್ನು ಸ್ಯಾಂಡಲ್​​ವುಡ್​ಗೆ ಕರೆತರೋದಾಗಿ ಘೋಷಿಸಿತ್ತು. ಆದ್ರೆ ಶೂಟಿಂಗ್​​ ಬಗ್ಗೆ ಈವರೆಗೆ ಯಾವುದೇ ಅಪ್​ಡೇಟ್​ ಇರಲಿಲ್ಲ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬರಲಿರುವ ಯುವ ರಾಜ್​ಕುಮಾರ್​​ ಮೊದಲ ಚಿತ್ರಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ಯುವ ರಾಜ್​ಕುಮಾರ್

ಹೌದು, ಪುನೀತ್ ರಾಜ್​ಕುಮಾರ್​ ಅಗಲಿಕೆ ನೋವಲ್ಲಿದ್ದ ಪವರ್ ಫ್ಯಾನ್ಸ್​​ ಅಂಗಳದಲ್ಲಿ ಭರವಸೆ ಮೂಡಿಸಿದ್ದ ಯುವ ರಾಜ್​ಕುಮಾರ್​ ಅವರ ಮೊದಲ ಚಿತ್ರ ಪವರ್ ಸ್ಟಾರ್​ ಹುಟ್ಟಿದ ತಿಂಗಳಾದ ಈ ಮಾರ್ಚ್​ನಲ್ಲೇ ಸೆಟ್ಟೇರಲಿದೆ‌. ಮಾರ್ಚ್ 3ರಂದು ಅಂದರೆ ನಾಳೆ ದೊಡ್ಮನೆ ಮಂದಿಯ ಸಮ್ಮುಖದಲ್ಲಿ ಅಶೋಕ ಹೋಟೆಲ್​​ನಲ್ಲಿ ಯುವ ಅವರ ಮೊದಲ ಚಿತ್ರ ಅದ್ಧೂರಿಯಾಗಿ ಸೆಟ್ಟೇರಲಿದೆ. ವಿಶೇಷ ಅಂದ್ರೆ, ನಾಳೆಯೇ ಚಿತ್ರದ ಟೈಟಲ್ ಟೀಸರ್ ಲಾಂಚ್ ಮಾಡಿ ದೊಡ್ಮನೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಸಂತೋಷ್ ಆನಂದ್ ರಾಮ್ ಸಿದ್ಧತೆ ಮಾಡಿಕೊಂಡಿದ್ದಾರೆ.

ನಿರ್ದೇಶಕರ ಜೊತೆ ಯುವ ರಾಜ್​ಕುಮಾರ್

ಈಗಾಗಲೇ ಸಖತ್ ಎಫರ್ಟ್ ಹಾಕಿ ನಗರದ ಮಿನರ್ವ ಮಿಲ್​​ನಲ್ಲಿ ಒ‌ಂದು ವಾರಕ್ಕೂ ಹೆಚ್ಚು ಕಾಲ ಟೈಟಲ್ ಟೀಸರ್ ಶೂಟ್ ಮಾಡಿರುವ ಸಂತೋಷ್ ಆನಂದ್ ರಾಮ್ ಸದ್ಯ ಅದನ್ನು ಎಡಿಟ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ನಾಳೆ ಚಿತ್ರದ ಮುಹೂರ್ತ ಮುಗಿಸಿ, ನಂತರ ಟೀಸರ್ ಅನ್ನು ಅಭಿಮಾನಿಗಳಿಗೆ ಅರ್ಪಿಸಲಿದ್ದಾರೆ.

ಇದನ್ನೂ ಓದಿ:ಯುವ ರಾಜ್​ಕುಮಾರ್ ಚೊಚ್ಚಲ ಸಿನಿಮಾಗೆ ಸಿಕ್ಕಳು ಕನ್ನಡತಿ

ಪುನೀತ್​​ ರಾಜ್​ಕುಮಾರ್​ ಅನುಪಸ್ಥಿತಿಯಲ್ಲಿ ಯುವ ರಾಜ್​ಕುಮಾರ್​ ಮೊದಲ ಚಿತ್ರಕ್ಕೆ ಶಿವಣ್ಣ ಹಾಗೂ ಅಶ್ವಿನಿ ಪುನೀತ್ ರಾಜ್​​ಕುಮಾರ್ ಚಾಲನೆ ಕೊಡಲಿದ್ದಾರೆ. ಪವರ್ ಸ್ಟಾರ್ ಹುಟ್ಟುಹಬ್ಬದಂದು ಚಿತ್ರದ ಶೂಟಿಂಗ್ ಶುರು ಮಾಡಲು ಸಂತೋಷ್ ಆನಂದ್ ರಾಮ್ ಈಗಾಗಲೇ ಶೆಡ್ಯೂಲ್ ಫಿಕ್ಸ್ ಮಾಡಿದ್ದಾರೆ.

ಇದನ್ನೂ ಓದಿ:ಕಾಂತಾರ 2 ಕಥೆ ಕೆಲಸ ಚುರುಕು.. ಫೋನ್ ಸ್ವಿಚ್​​ ಆಫ್ ಮಾಡಿಕೊಂಡ ಡಿವೈನ್ ಸ್ಟಾರ್

ಇನ್ನೂ ಕನ್ನಡದ ಹುಡುಗಿ ರುಕ್ಮಿಣಿ ವಸಂತ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಈ ತಂಡದ ಜೊತೆ ಕೈ ಜೋಡಿಸಲಿದ್ದಾರೆ. ಇದೇ ವರ್ಷ ಯುವನ ಚಿತ್ರವನ್ನು ಅದ್ಧೂರಿಯಾಗಿ ರಿಲೀಸ್ ಮಾಡುವ ಅಲೋಚನೆಯಲ್ಲಿದೆ ಹೊಂಬಾಳೆ ಬಳಗ.

ABOUT THE AUTHOR

...view details