ಕರ್ನಾಟಕ

karnataka

ETV Bharat / entertainment

ಯುವ ರಾಜ್​​ಕುಮಾರ್ ಚೊಚ್ಚಲ ಸಿನಿಮಾ ಶೂಟಿಂಗ್​ಗೆ ಮುಹೂರ್ತ ಫಿಕ್ಸ್ - ಫೆಬ್ರವರಿ 18ರಿಂದ ಶೂಟಿಂಗ್ ಶುರು

ಸಂಕ್ರಾತಿ ಬಳಿಕ ಯುವ ರಾಜ್​ಕುಮಾರ್ ಮೊದಲ ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಫೆಬ್ರವರಿ 18ರಿಂದ ಶೂಟಿಂಗ್ ಶುರುವಾಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

Yuva Rajkumar debut movie
ಯುವ ರಾಜ್​​ಕುಮಾರ್ ಚೊಚ್ಚಲ ಸಿನಿಮಾ

By

Published : Jan 6, 2023, 8:01 PM IST

ದೊಡ್ಮನೆ ಕುಡಿ ಯುವ ರಾಜ್​ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಎಲ್ಲಾ ಸಿದ್ಧತೆ ನಡೆದಿದೆ​. ಹೊಂಬಾಳೆ ಫಿಲ್ಮ್ಸ್ ಯುವ ರಾಜ್​ಕುಮಾರ್ ಅವರ ಖಡಕ್ ಲುಕ್ ಫೋಟೋಶೂಟ್ ಮಾಡಿ ಮೊದಲ ಸಿನಿಮಾ ಅನೌನ್ಸ್ ಮಾಡಿತ್ತು. ಸಿನಿಮಾ ಘೋಷಣೆಯಾಗಿ​ ಬಹು ದಿನಗಳಾಗಿದ್ದು, ಚಿತ್ರದ ಟೈಟಲ್​ ಏನು? ಯಾವಾಗ ಶೂಟಿಂಗ್ ಶುರು? ಯಾವ ನಟಿ ಅಭಿನಯಿಸಲಿದ್ದಾರೆ? ಹೀಗೆ ಹತ್ತು ಹಲವು ಪ್ರಶ್ನೆಗಳು ದೊಡ್ಮನೆ ಅಭಿಮಾನಿಗಳಲ್ಲಿದೆ. ಈ ಬಗ್ಗೆ ಹೊಸ ಸುದ್ದಿಯೊಂದು ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ಯುವ ರಾಜ್​​ಕುಮಾರ್ - ಕಲ್ಯಾಣಿ ಪ್ರಿಯದರ್ಶನ್

ಯುವ ರಾಜ್​ಕುಮಾರ್ ಮೊದಲ ಸಿನಿಮಾ:ದೇವರ ಆಟ ಬಲ್ಲವರು ಯಾರು ಎಂಬ ಪ್ರಸಿದ್ಧ ಹಾಡು ಎಲ್ಲರ ಜೀವನಕ್ಕೆ ಅನ್ವಯ ಆಗುತ್ತದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಲ್ಲ ಎಂಬ ಬೇಸರ ಅಭಿಮಾನಿ ದೇವರುಗಳಲ್ಲಿದೆ. ಈಗ ಯುವ ರಾಜ್​ಕುಮಾರ್ ಅವರಲ್ಲಿ ಅಪ್ಪು ಅವರನ್ನು ಕಾಣಲಾಗುತ್ತಿದೆ. ಅಪ್ಪುಗಾಗಿ ಸಿದ್ಧವಾಗಿದ್ದ ಸ್ಕ್ರಿಪ್ಟ್​ಗೆ ಯುವ ರಾಜ್​​ಕುಮಾರ್ ನಟಿಸಲು ವೇದಿಕೆ ಸಿದ್ಧವಾಗಿದೆ. ಪವರ್ ​ಸ್ಟಾರ್​ಗಾಗಿ ಕನಸು ಕಂಡಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಕನಸನ್ನು ಯುವ ರಾಜ್​ಕುಮಾರ್​ ಮೂಲಕ ನನಸು ಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಂತೋಷ್ ಆನಂದ್ ರಾಮ್ - ಯುವ ರಾಜ್​​ಕುಮಾರ್

ಯುವ ರಾಜ್​​ಕುಮಾರ್ ಮೇಲೆ ಭಾರೀ ನಿರೀಕ್ಷೆ:ಅಪ್ಪು ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅಭಿಮಾನಿಗಳು ಅಪ್ಪು ಅವರಿಗೆ ತೋರಿದ್ದ ಅಭಿಮಾನದ ಪ್ರೀತಿಯನ್ನು ಈಗ ಯುವ ರಾಜ್​​ಕುಮಾರ್ ಮೇಲೆ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಅವರ ಮೊದಲ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ದೊಡ್ಮನೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು.

ಇದನ್ನೂ ಓದಿ:ಗಡಿ ವಿಚಾರ: 'ರಾಜಕಾರಣಿಗಳು ದೊಡ್ಡ ಮನಸ್ಸು ಮಾಡಿ ವ್ಯವಸ್ಥೆ ಸರಿಪಡಿಸಬೇಕು'- ಶಿವಣ್ಣ

ಸಂಕ್ರಾತಿ ಬಳಿಕ ಸಿನಿಮಾದ ಮುಹೂರ್ತ ಕಾರ್ಯಕ್ರಮ: ಯುವ ರಾಜ್​ಕುಮಾರ್​ ಮೊದಲ ಸಿನಿಮಾ ಅನೌನ್ಸ್ ಆದ ಮೇಲೆ ಶೂಟಿಂಗ್ ಅಪ್ಡೇಟ್ ಆಗಲಿ, ಟೈಟಲ್ ಬಗ್ಗೆಯಾಗಲಿ ಹೊಂಬಾಳೆ ಸಂಸ್ಥೆ ಹಾಗೂ ಸಂತೋಷ್ ಆನಂದ್ ​ರಾಮ್ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಯುವ ರಾಜ್​ಕುಮಾರ್​ ಅವರ ಮೊದಲ ಸಿನಿಮಾ ಶೂಟಿಂಗ್ ಅಡ್ಡಕ್ಕೆ ಯಾವಾಗ ಎಂಟ್ರಿ ಕೊಡ್ತಾರೆ ಅನ್ನೋ ಮಾಹಿತಿ ಬಲ್ಲ ಮೂಲಗಳಿಂದ ಸಿಕ್ಕಿದೆ.

ಸಿಂಪಲ್ ಆಗಿ ಸಿನಿಮಾ ಅನೌನ್ಸ್ ಮಾಡಿರುವ ಹೊಂಬಾಳೆ ಸಂಸ್ಥೆ ಯುವ ರಾಜ್​ಕುಮಾರ್ ಮೊದಲ ಸಿನಿಮಾದ ಮುಹೂರ್ತವನ್ನು ಧನುರ್ಮಾಸ ಮುಗಿಯುತ್ತಿದಂತೆ ಸಂಕ್ರಾತಿಗೆ ಮಾಡಲು ಸಜ್ಜಾಗಿದೆ. ಜನವರಿ ಕೊನೆ ವಾರದಲ್ಲಿ ಯುವ ರಾಜ್​ಕುಮಾರ್ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಫೆಬ್ರವರಿ 18ರಿಂದ ಶೂಟಿಂಗ್ ಶುರು ಮಾಡಲು ಸಂತೋಷ್ ಆನಂದ್ ರಾಮ್ ಸಿದ್ಧತೆ ಮಾಡಿಕೊಂಡಿದ್ದಾರೆ ಅಂತಾ ಯುವ ರಾಜ್​ಕುಮಾರ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:ಸ್ಯಾಂಡಲ್​​ವುಡ್ ಸಿನಿ ಸುಗ್ಗಿ: 8 ಸಿನಿಮಾಗಳು ತೆರೆಗೆ-ಬಾಕ್ಸ್​ ಆಫೀಸ್​ನಲ್ಲಿ ಯಾರಿಗೆ 'ಶುಕ್ರ'ದೆಸೆ?

ತಂದೆ ಮಗನ ವಾತ್ಸಲ್ಯದ ಕಥೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಮಾಡಿದ್ದಾರೆ. ಯುವ ರಾಜ್​ಕುಮಾರ್​ಗಾಗಿ ತಂದೆ ಮಗನ ವಾತ್ಸಲ್ಯದ ಕಥೆ ರೆಡಿ ಮಾಡಿರುವ ಸಂತೊಷ್ ಚಿತ್ರದ ಟೈಟಲ್ ಅನ್ನು​ ಕೂಡ ಫೈನಲ್​ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಯುವ ಅವರ ಮೊದಲ ಚಿತ್ರಕ್ಕೆ ಪವರ್​ಫುಲ್ ಟೈಟಲ್​ ಫಿಕ್ಸ್​ ಆಗಿದೆ. ಜೊತೆಗೆ ಯುವ ರಾಜ್​ಕುಮಾರ್​ ಕೂಡ ತಮ್ಮ ಮೊದಲ ಚಿತ್ರಕ್ಕೆ ಮೇಕ್​ಒವರ್ ಆಗಿದ್ದಾರೆ. ಚಿತ್ರದಲ್ಲಿ ಯುವ 2 ಶೇಡ್​ಗಳಲ್ಲಿ ಕಾಣಿಸಲಿದ್ದು, ಚಿತ್ರಕ್ಕೆ ಮಲೆಯಾಳಂ ಬೆಡಗಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿ ಎಂಬುದು ಬಹುತೇಕ ಫೈನಲ್ ಆಗಿದೆ.

ABOUT THE AUTHOR

...view details