ಕರ್ನಾಟಕ

karnataka

ETV Bharat / entertainment

ತಮಟೆ ಬಾರಿಸಿಕೊಂಡು 'ಗರಡಿ' ಪ್ರಚಾರ ಮಾಡಿದರು ಯೋಗರಾಜ್​ ಭಟ್ರು.. - ಬಿ ಸಿ‌ ಪಾಟೀಲ್ ಅಭಿನಯ

ನಿರ್ದೇಶಕ ಯೋಗರಾಜ್​ ಭಟ್​ ತಮಟೆ ಬಾರಿಸುವ ಮೂಲಕ 'ಗರಡಿ' ಪತ್ರಿಕಾಗೋಷ್ಠಿಗೆ ಆಗಮಿಸಿ ಗಮನ ಸೆಳೆದರು.

Yogaraj Bhat
ಯೋಗರಾಜ್​ ಭಟ್ರು

By

Published : Jun 14, 2023, 2:12 PM IST

Updated : Jun 14, 2023, 3:05 PM IST

ತಮಟೆ ಬಾರಿಸಿಕೊಂಡು 'ಗರಡಿ' ಪ್ರಚಾರ ಮಾಡಿದ ಯೋಗರಾಜ್​ ಭಟ್ರು

ನಿರ್ದೇಶಕ ಯೋಗರಾಜ್​ ಭಟ್​ಗೂ ತಮಟೆಗೂ ಒಂಥರಾ ಅವಿನಾಭಾವ ಸಂಬಂಧವಿದೆ. ಭಟ್ಟರ ನಿರ್ದೇಶನದ ಪದವಿ ಪೂರ್ವ ಕಾಲೇಜು ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಅವರು ಥಿಯೇಟರ್​ ಮುಂದೆ ನಿಂತು ತಮಟೆ ಹಿಡಿದು ಎರಡು ಏಟು ಹಾಕಿದ್ರೋ, ಅಲ್ಲಿಂದ ಅವರು ತಮಟೆನ ಬಿಟ್ರೂ, ತಮಟೆ ಮಾತ್ರ ಅವ್ರನ್ನ ಬಿಡ್ತಿಲ್ಲ. ಇದೀಗ ಯೋಗರಾಜ್ ಭಟ್ ನಿರ್ದೇಶನದ ಯಶಸ್ ಸೂರ್ಯ ಹಾಗೂ ಕೌರವ ಖ್ಯಾತಿಯ ಬಿ ಸಿ‌ ಪಾಟೀಲ್ ಅಭಿನಯದ 'ಗರಡಿ' ಸಿನಿಮಾಕ್ಕಾಗಿ ಭಟ್ರು ಮತ್ತೆ ತಮಟೆಯನ್ನು ಕೈಯಲ್ಲಿ ಹಿಡಿದಿದ್ದಾರೆ‌.

ಹೌದು, ನಿರ್ದೇಶಕ ಯೋಗರಾಜ್ ಭಟ್ರ ಗರಡಿ ಸಿನಿಮಾ ಶೂಟಿಂಗ್​ ಮುಗಿಸಿ ಬಿಡುಗಡೆಗೂ ಸಿದ್ಧವಾಗಿದೆ. ಅದಕ್ಕೂ ಮುನ್ನ ಚಿತ್ರತಂಡ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಈ ವೇಳೆ, ಯೋಗರಾಜ್​ ಭಟ್ರು ತಮಟೆ ಬಾರಿಸುವ ಮೂಲಕ ಪತ್ರಿಕಾಗೋಷ್ಠಿಗೆ ಆಗಮಿಸಿ ಗಮನ ಸೆಳೆದರು. ನಟ ಹಾಗೂ ಚಿತ್ರದ ನಿರ್ಮಾಪಕ ಬಿ‌.ಸಿ ಪಾಟೀಲ್ ಸಮ್ಮುಖದಲ್ಲಿ ಯೋಗರಾಜ್ ಭಟ್ ತಮಟೆ ಹೊಡೆಯುವ ಮುಖಾಂತರ ಗರಡಿ ಸಿನಿಮಾದ ಬಗ್ಗೆ ವಿಭಿನ್ನವಾಗಿ ಪ್ರಚಾರ ಮಾಡಿದರು.

ಇದನ್ನೂ ಓದಿ:ಶುರುವಾಯಿತು 'ಆದಿಪುರುಷ್'​ ಸಿನಿಮಾ ಕ್ರೇಜ್​: ಪ್ರಮುಖ ನಗರಗಳಲ್ಲಿ 2 ಸಾವಿರ ರೂಗೆ ಟಿಕೆಟ್​ ಮಾರಾಟ

'ಗರಡಿ' ಚಿತ್ರದ ಹೆಸರು ಹೇಳುವ ಹಾಗೇ ಗರಡಿ ಪೈಲ್ವಾನ್​ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ, ತಿಳಿದುಕೊಂಡು ನಂತರ ಮಾಡಿದ ಸಿನಿಮಾ. ಈ ಚಿತ್ರದಲ್ಲಿ ನಟ‌ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ಕೌರವ ಬಿ ಸಿ ಪಾಟೀಲ್ ಅಲ್ಲದೇ, ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್ ಹೀಗೆ ದೊಡ್ಡ ತಾರಾ ಬಳಗವೇ ಇದೆ. ಸಿನಿಮಾದ ವಿಶೇಷ ಎಂದರೆ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗರಡಿ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ. ಸಿನಿಮಾವನ್ನು ವನಜಾ ಪಾಟೀಲ್ ನಿರ್ಮಾಣ ಮಾಡುತ್ತಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಗರಡಿ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದು, ಸದ್ಯದಲ್ಲೇ ಟ್ರೇಲರ್​ ಬಿಡುಗಡೆಗೊಳಿಸಲು ಪ್ಲಾನ್​ ಮಾಡಿದೆ.

ಇದನ್ನೂ ಓದಿ:Sushant Singh: ಸುಶಾಂತ್ ಸಿಂಗ್​ ಮೂರನೇ ಪುಣ್ಯಸ್ಮರಣೆ..​ ಸಹೋದರಿಯಿಂದ ಹೃದಯಸ್ಪರ್ಶಿ ಅಕ್ಷರ ನಮನ

ಯೋಗರಾಜ್​ ಭಟ್ರು ಈಗಾಗಲೇ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ಚಿತ್ರ 'ಕರಟಕ ದಮನಕ'. ಈ ಸಿನಿಮಾದಲ್ಲಿ ಮಲ್ಟಿ ಸ್ಟಾರ್​ಗಳಿದ್ದು, ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್ ಮತ್ತು ಬಹುಭಾಷಾ ನಟ ಪ್ರಭುದೇವ ನಾಯಕರಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಯೋಗರಾಜ್​ ಭಟ್ರು ಕೂಡ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.​

Last Updated : Jun 14, 2023, 3:05 PM IST

ABOUT THE AUTHOR

...view details