ಕರ್ನಾಟಕ

karnataka

ETV Bharat / entertainment

ಹಿನ್ನೋಟ: 2023ರ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದ ಚಿತ್ರಗಳೆಷ್ಟು ಗೊತ್ತಾ? - ಡುಂಕಿ

2023 ವರ್ಷದಲ್ಲಿ ಸಿನಿ ಜಗತ್ತಿನಲ್ಲಿ ತೆರೆ ಕಂಡ ಚಿತ್ರಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. ಗದರ್ 2, OMG 2, ಜೈಲರ್, ಸ್ಯಾಮ್ ಬಹದ್ದೂರ್, ಅನಿಮಲ್, ಡಂಕಿ ಮತ್ತು ಸಲಾರ್ ಸೇರಿದಂತೆ ಹಲವಾರು ದೊಡ್ಡ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ತುಂಬಾ ಸದ್ದು ಮಾಡಿವೆ. ಈ ವರ್ಷ ದೊಡ್ಡ ಪರದೆಯ ಮೇಲೆ ಪ್ರೇಕ್ಷಕರ ಗಮನ ಸೆಳೆಯಲು ಸ್ಪರ್ಧಿಸಿದ ಚಲನಚಿತ್ರಗಳ ಬಗ್ಗೆ ನೋಡೋಣ ಬನ್ನಿ.

2023ರ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದ ಸಿನಿಮಾಗಳು
2023ರ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದ ಸಿನಿಮಾಗಳು

By ETV Bharat Karnataka Team

Published : Dec 28, 2023, 7:57 AM IST

ಹೈದರಾಬಾದ್: ಈ ವರ್ಷದಲ್ಲಿ ಬಿಡುಗಡೆಯಾದ ಬಾಲಿವುಡ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿವೆ. ಈ ಚಲನಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯುವುದರೊಂದಿಗೆ ಗಳಿಕೆಯಲ್ಲೂ ಯಶಸ್ಸನ್ನು ಸಾಧಿಸಿವೆ. ಕೆಲವು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸಲು ವಾರ್​ ಕೂಡ ಕಂಡುಬಂದಿತ್ತು.

ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ವಾರ್​ಗೆ ಕಾರಣವಾದ ಕೆಲವು ಪ್ರಮುಖ ಚಲನಚಿತ್ರಗಳೆಂದರೆ, OMG 2, ಗದರ್ 2 ಮತ್ತು ಜೈಲರ್; ಅನಿಮಲ್​ ಮತ್ತು ಸ್ಯಾಮ್ ಬಹದ್ದೂರ್; ಚಂದ್ರಮುಖಿ 2, ಫುಕ್ರೆ 3 ಮತ್ತು ವ್ಯಾಕ್ಸಿನ್ ವಾರ್; ತೇಜಸ್ ಮತ್ತು 12ನೇ ಫೇಲ್; ಡಂಕಿ ಮತ್ತು ಸಲಾರ್. ಪ್ರೇಕ್ಷಕರಿಗೆ ವೈವಿಧ್ಯಮಯ ಆಯ್ಕೆಗಳನ್ನು ಒದಗಿಸಿದ ಕೆಲವು ಚಲನಚಿತ್ರಗಳು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಾವ ಚಿತ್ರವು ಎಷ್ಟು ಗಳಿಕೆ ಮಾಡಿದೆ ಎಂಬುದನ್ನು ಗಮನಿಸಿಸೋಣ.

1. ಗದರ್ 2, OMG 2, ಜೈಲರ್;ಗದರ್ 2, ಸನ್ನಿ ಡಿಯೋಲ್ ಅವರ ಪುನರಾಗಮನವನ್ನು ಗುರುತಿಸುತ್ತದೆ. ಅವರ 2001ರ ಬ್ಲಾಕ್‌ಬಸ್ಟರ್ ಚಿತ್ರ ಗದರ್: ಏಕ್ ಪ್ರೇಮ್ ಕಥಾದ ಮುಂದುವರಿದ ಭಾಗವಾಗಿ ತೆರೆ ಕಂಡಿತ್ತು. ಗದರ್ 2 2023ರಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಮಾತ್ರವಲ್ಲದೆ, ದಶಕದ ಸಿನಿಮೀಯ ಹೈಲೈಟ್‌ಗಳಲ್ಲಿ ಈ ಚಿತ್ರ ಒಂದಾಗಿದೆ. ಗದರ್ 2 ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವ ಉದ್ದೇಶ ಹೊಂದಲಾಗಿತ್ತು. ಭಾರತದಲ್ಲಿ 40.1 ಕೋಟಿ ವೆಚ್ಚದಲ್ಲಿ ತೆರೆಕಂಡ ಈ ಚಿತ್ರವು, ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 525.7 ಕೋಟಿ ರೂಪಾಯಿ ಗಳಿಸಿದೆ.

ಮತ್ತೊಂದೆಡೆ, ಭಾರತದಲ್ಲಿ 10.26 ಕೋಟಿ ರೂ.ನಲ್ಲಿ ಥಿಯೇಟರ್‌ಗಳಲ್ಲಿ ತೆರೆಕಂಡ OMG 2, ಈ ಚಲನಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಎರಡು ಚಿತ್ರಗಳ ನಡುವಿನ ಘರ್ಷಣೆಯನ್ನು ಗಮನಿಸಿದರೆ, ಗದರ್ 2 ವಿಶ್ವಾದ್ಯಂತ 686 ಕೋಟಿ ರೂಪಾಯಿ ಗಳಿಸಿದರೆ, OMG 2 ಚಿತ್ರ 221.75 ಕೋಟಿ ರೂ.ಗೆ ಗಳಿಕೆ ಮಾಡಿ ಹಿಂದುಳಿದಿದೆ. ಅದೇ ಸಮಯದಲ್ಲಿ ಬಿಡುಗಡೆಯಾದ ರಜನಿಕಾಂತ್ ಅಭಿನಯದ ಜೈಲರ್ ಚಿತ್ರವು, ಭಾರತದಲ್ಲಿ 56.6 ಕೋಟಿ ಗಳಿಸಿತ್ತು. ಜನಮನ ಮೆಚ್ಚಿಸುವಲ್ಲಿ ಯಶಸ್ವಿಯಾಯಿತು. ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು.

ವರದಿಯಾದ 200 ಕೋಟಿ ರೂ. ಬಜೆಟ್‌ನ ಚಿತ್ರ ಜೈಲರ್ ಜಾಗತಿಕವಾಗಿ 604.5 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಏತನ್ಮಧ್ಯೆ, ಕಾಫಿ ವಿತ್ ಕರಣ್ ಸೀಸನ್ 8 ರ ಎರಡನೇ ಸಂಚಿಕೆಯಲ್ಲಿ, ಗದರ್ 2 ಮತ್ತು OMG 2 ನಡುವಿನ ಘರ್ಷಣೆಯ ಕುರಿತು ಸನ್ನಿ ಮಾತನಾಡಿದ್ದಾರೆ. ಅವರು ತಮ್ಮ ಚಲನಚಿತ್ರಗಳ ಬಿಡುಗಡೆಯ ಮೊದಲು ಅಕ್ಷಯ್ ಅವರೊಂದಿಗೆ ಚರ್ಚಿಸಿದ್ದಾರೆಂದು ಪ್ರಸ್ತಾಪಿಸಿದರು. ಘರ್ಷಣೆಯನ್ನು ತಪ್ಪಿಸಲು OMG 2 ರ ದಿನಾಂಕವನ್ನು ಬದಲಾಯಿಸಲು ವಿನಂತಿಸಿದರು. ಆದರೆ, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಕ್ಷಯ್ ಹೇಳಿದ್ದರು.

2. ಸ್ಯಾಮ್ ಬಹದ್ದೂರ್ Vs ಅನಿಮಲ್;ಆಕ್ಷನ್-ಪ್ಯಾಕ್ಡ್ ಡ್ರಾಮಾ ಚಿತ್ರ ಅನಿಮಲ್. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಸೇರಿದಂತೆ ಸ್ಟಾರ್-ಸ್ಟಡ್ಡ್ ತಾರಾಗಣ ಚಿತ್ರದಲ್ಲಿದೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅತ್ಯುತ್ತಮ ಗಳಿಕೆ ಮೂಲಕ ಬೆಳ್ಳಿ ಪರದೆಯ ಮೇಲೆ ಪ್ರಾಬಲ್ಯ ಸಾಧಿಸಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಈ ಚಿತ್ರವು ಭಾರತದಲ್ಲಿ 63.8 ಕೋಟಿ ರೂ. ವೆಚ್ಚದಲ್ಲಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟಿತ್ತು. ಬಿಡುಗಡೆಯಾದ ಕೇವಲ ಮೂರು ವಾರಗಳಲ್ಲಿ 800 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಜಾಗತಿಕವಾಗಿ ಕಲೆಕ್ಷನ್​ ಮಾಡಲು ಯಶಸ್ವಿಯಾಗಿದೆ. ಎ ರೇಟಿಂಗ್ ಮತ್ತು ಸುದೀರ್ಘ ಅವಧಿಯ ಹೊರತಾಗಿಯೂ, ಅನಿಮಲ್ ನಿರೀಕ್ಷೆಗಳನ್ನು ಮೀರಿಸಿತು ಮತ್ತು ವ್ಯಾಪಕ ಶ್ರೇಣಿಯ ಪ್ರೇಕ್ಷಕರನ್ನು ತನ್ನತ್ತ ಸೆಳೆಯಿತು. ಆದ್ರೂ ಅನಿಮಲ್​ ಚಿತ್ರವು ವಿಷಕಾರಿ ಪುರುಷತ್ವದ ಚಿತ್ರಣ ಮತ್ತು ಸ್ತ್ರೀದ್ವೇಷದ ವರ್ತನೆಯ ವೈಭವೀಕರಣಕ್ಕಾಗಿ ಟೀಕೆಗಳನ್ನು ಎದುರಿಸಿತು.

ಮತ್ತೊಂದೆಡೆ, ಸ್ಯಾಮ್ ಬಹದ್ದೂರ್, ವಿಕ್ಕಿ ಕೌಶಲ್, ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಒಳಗೊಂಡ ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರ ಜೀವನಚರಿತ್ರೆಯ ಆಧಾರಿತ ಚಿತ್ರವು, ಅನಿಮಲ್​ ನಡುವೆ ತೀವ್ರ ಸ್ಪರ್ಧೆ ಕಂಡುಬಂದಿತ್ತು. ಆದರೆ, ಸ್ಯಾಮ್ ಬಹದ್ದೂರ್ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಹೆಣಗಾಡಿತು. ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರವು ಭಾರತದಲ್ಲಿ ಆರಂಭಿಕ ದಿನದಲ್ಲಿ 6.25 ಕೋಟಿ ರೂ. ಗಳಿಸುತ್ತು. ಬಿಡುಗಡೆಯಾದಾಗಿನಿಂದ 114.25 ಕೋಟಿ ರೂ. ಜಾಗತಿಕವಾಗಿ ಕಲೆಕ್ಷನ್​ ಮಾಡಿತ್ತು.

3. ಫುಕ್ರೆ 3, ದಿ ವ್ಯಾಕ್ಸಿನ್ ವಾರ್, ಚಂದ್ರಮುಖಿ 2 ನಡುವೆ ಪೈಪೋಟಿ;ಸೆಪ್ಟೆಂಬರ್ 28 ರಂದು ಬಿಡುಗಡೆಯಾದ ಫುಕ್ರೆ 3, ದಿ ವ್ಯಾಕ್ಸಿನ್ ವಾರ್ ಮತ್ತು ಚಂದ್ರಮುಖಿ 2 ಬೆಳ್ಳಿತೆರೆಯಲ್ಲಿ ತೀವ್ರ ಪೈಪೋಟಿ ಕಂಡಬಂದಿತ್ತು. ಅಂತಿಮವಾಗಿ, ಪುಲ್ಕಿತ್ ಶರ್ಮಾ, ವರುಣ್ ಶರ್ಮಾ, ರಿಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ಒಳಗೊಂಡ ಹಾಸ್ಯ ಫ್ರಾಂಚೈಸ್‌ನ ಮೂರನೇ ಸರಣಿಯಾಗಿರುವ ಫುಕ್ರೆ 3 ಚಿತ್ರವು ಬಾಕ್ಸ್ ಆಫೀಸ್ ವಾರ್​ನಲ್ಲಿ ವಿಜಯಶಾಲಿಯಾಯಿತು. ನಗು ತುಂಬಿದ ಈ ಚಿತ್ರವು ಮೊದಲ ದಿನ ಭಾರತದಲ್ಲಿ 8.82 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ವಿಶ್ವದಾದ್ಯಂತ ಒಟ್ಟು 127.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ಕಂಗನಾ ರಣಾವತ್ ಮತ್ತು ರಾಘವ ಲಾರೆನ್ಸ್ ನಟಿಸಿದ ಚಂದ್ರಮುಖಿ- 2 ಚಿತ್ರ 9.7 ಕೋಟಿ ರೂಪಾಯಿ ವೆಚ್ಚದಲ್ಲಿ ತೆರೆಕಂಡಿತ್ತು. ಜಾಗತಿಕವಾಗಿ ಕೇವಲ 54.1 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ರಜನಿಕಾಂತ್ ಹಾಗೂ ಜ್ಯೋತಿಕಾ ನಟಿಸಿದ ಮೂಲ ಚಂದ್ರಮುಖಿ (2005)ಯ ಯಶಸ್ಸು ಗಳಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಚಂದ್ರಮುಖಿ 2 ಸರಳವಾಗಿ ರನ್-ಆಫ್-ಮಿಲ್ ಹಾರರ್-ಕಾಮಿಡಿ ಚಲನಚಿತ್ರದ ವಿಭಾಗಕ್ಕೆ ಸೇರುತ್ತದೆ.

ವಿವೇಕ್ ಅಗ್ನಿಹೋತ್ರಿಯವರ ದಿ ವ್ಯಾಕ್ಸಿನ್ ವಾರ್ ಚಿತ್ರವು ವೀಕ್ಷಕರು ಮತ್ತು ವಿಮರ್ಶಕರನ್ನು ಒಂದೇ ರೀತಿ ಸೆರೆಹಿಡಿಯಲು ವಿಫಲವಾಗಿದೆ. ಮೊದಲ ದಿನದಲ್ಲಿ ಈ ಚಿತ್ರ ಕೇವಲ 0.85 ರೂ ಕಲೆಕ್ಷನ್ ಮಾಡಿತ್ತು. ಕೋವಿಡ್​-19 ವಿರುದ್ಧದ ಭಾರತದ ಸ್ಥಳೀಯ ಲಸಿಕೆಯಾದ ಕೋವಾಕ್ಸಿನ್ ಕಥೆಯ ಸುತ್ತ ಕೇಂದ್ರೀಕೃತವಾಗಿರುವ ಈ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ 14.7 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

4. ತೇಜಸ್ Vs 12ನೇ ಫೇಲ್;ಕಂಗನಾ ರಣಾವತ್ ತೇಜಸ್ ಚಿತ್ರ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಕನಿಷ್ಠ ಪ್ರಚಾರದೊಂದಿಗೆ ಬಿಡುಗಡೆಯಾದ ವೈಮಾನಿಕ ಆ್ಯಕ್ಷನ್ ಚಲನಚಿತ್ರವು ಪ್ರೇಕ್ಷಕರಲ್ಲಿ ಗಣನೀಯವಾದ ಉತ್ಸಾಹ ಗಳಿಸುವಲ್ಲಿ ವಿಫಲವಾಗಿದೆ. ಬಿಡುಗಡೆಯ ದಿನದಂದು ಕೇವಲ 1.25 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಪರಿಣಾಮವಾಗಿ, ಕಂಗನಾ ರನೌತ್ ಅಭಿನಯದ ಈ ಚಿತ್ರವು ವೈಮಾನಿಕ ಆ್ಯಕ್ಷನ್ ಚಿತ್ರ ನಿರಾಶೆಯನ್ನುಂಟು ಮಾಡಿದೆ. ವಿಶ್ವಾದ್ಯಂತ ಕೇವಲ 8.05 ಕೋಟಿ ಗಳಿಸಿತ್ತು. ಆರ್‌ಎಸ್‌ವಿಪಿ ಮೂವೀಸ್, ರೋನಿ ಸ್ಕ್ರೂವಾಲಾ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ಸರ್ವೇಶ್ ಮೇವಾರಾ ನಿರ್ದೇಶಿಸಿದ್ದಾರೆ. ತೇಜಸ್ ಅನ್ನು 60 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು.

ಮತ್ತೊಂದೆಡೆ, 12 ನೇ ಫೇಲ್ ಚಿತ್ರವು ವಿಕ್ರಾಂತ್ ಮಾಸ್ಸೆಯನ್ನು ಒಳಗೊಂಡಿದ್ದು, ಇಬ್ಬರು ನಾಗರಿಕ ಸೇವಕರ ಸ್ಫೂರ್ತಿದಾಯಕ ನಿರೂಪಣೆಯೊಂದಿಗೆ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿತು. ಚಿತ್ರವು ಮೊದಲ ದಿನ, 1.11 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ, ಮೊದಲ ವಾರದಲ್ಲಿ ಸಿನಿಮಾ ಬಲವಾದ ಪ್ರದರ್ಶನ ನೀಡುವ ಮೂಲಕ 13.04 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಅಂತಿಮವಾಗಿ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 66.5 ಕೋಟಿ ರೂ. ಗಳಿಸಿತ್ತು.

5. ಡಂಕಿ Vs ಸಲಾರ್;2023ರಲ್ಲಿ ಚಿತ್ರಗಳ ಬಹು ನಿರೀಕ್ಷಿತ ಘರ್ಷಣೆಯು ಡಂಕಿ ಹಾಗೂ ಸಲಾರ್ ನಡುವೆ ಕಂಡುಬಂದಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಮತ್ತು ಶಾರುಖ್ ಖಾನ್, ತಾಪ್ಸಿ ಪನ್ನು, ಬೊಮನ್ ಇರಾನಿ ಮತ್ತು ವಿಕ್ಕಿ ಕೌಶಲ್ ವಿಶೇಷ ಪಾತ್ರದಲ್ಲಿ ನಟಿಸಿರುವ ಡಂಕಿ ಮೊದಲ ದಿನದಲ್ಲಿ 29.2 ಕೋಟಿ ರೂ. ಗಲ್ಲಾಪೆಟ್ಟಿಯಲ್ಲಿ ಗಳಿಸಿತ್ತು. ಈ ಚಿತ್ರವು ಈವರೆಗೆ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 128.13 ಕೋಟಿ ರೂ. ಗಳಿಕೆ ಮಾಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ, ಪ್ರಭಾಸ್​, ಪೃಥ್ವಿರಾಜ್ ಸುಕುಮಾರ್ನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ದಿನ ಭಾರತದಲ್ಲಿ 90.7 ಕೋಟಿ ರೂಪಾಯಿಗಳ ಮೊತ್ತವನ್ನು ಗಳಿಸಿತ್ತು. ಬಿಡುಗಡೆಯಾದ ಕೇವಲ ಐದು ದಿನಗಳಲ್ಲಿ 200 ಕೋಟಿ ರೂ. ಮೈಲಿಗಲ್ಲನ್ನು ಮೀರಿಸಿದೆ. ಬಾಹುಬಲಿಯ ಯಶಸ್ಸಿನ ನಂತರ ಪ್ರಭಾಸ್​ಗೆ ಸಲಾರ್​ ಚಿತ್ರ ಬಿಗ್​ ಹಿಟ್​ ನೀಡಿದೆ. ಶಾರುಖ್​ ಖಾನ್​ ಸತತ ಎರಡು ಬ್ಲಾಕ್ಬಸ್ಟರ್​ಗಳಾದ ಪಠಾನ್ ಮತ್ತು ಜವಾನ್ಗಳ ವಿಜಯವನ್ನು ಆನಂದಿಸುತ್ತಿದ್ದಾರೆ. ಪ್ರತಿಯೊಂದೂ ಗಳಿಕೆಯಲ್ಲಿ 1,000 ಕೋಟಿ ರೂ. ಗಡಿಯನ್ನು ದಾಟಿದೆ.

ಇದನ್ನೂ ಓದಿ:ಮಾಜಿ ಪತಿ ಮದುವೆ ಬೆನ್ನಲ್ಲೇ ಮಲೈಕಾ ಅರೋರಾ 'ಲವ್​​' ಸ್ಟೋರಿ

ABOUT THE AUTHOR

...view details