ಹೈದರಾಬಾದ್: ಜನಪ್ರಿಯ ಧಾರವಾಹಿಯಾದ ''ಯೇ ಹೇ ಮೊಹಬ್ಬತೇ ಪಾತ್ರಧಾರಿ ಆಲಿಯಾಗೆ ಇಂದು ವೈವಾಹಿಕ ಜೀವನಕ್ಕೆ ಒಳಗಾಗಿದ್ದಾರೆ. ಆಲಿಯಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ನಟಿ ಕೃಷ್ಣ ಮುಖರ್ಜಿ ಅವರು ಬೆಂಗಾಲಿ ಸಂಪ್ರದಾಯದಂತೆ ಇಂದು ಚಿರಾಗ್ ಬಟಿವಾಲಾ ಅವರ ಕೈ ಹಿಡಿದಿದ್ದಾರೆ. ಗೋವಾದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಈ ವಿವಾಹ ಶಾಸ್ತ್ರ ನೆರವೇರಿದೆ. ಗೋವಾದ ಪ್ರಕೃತಿ ಮಡಿಲಿನಲ್ಲಿ ಸೂರ್ಯಾಸ್ತದ ಸಮಯದಲ್ಲಿ ಅದ್ದೂರಿಯಾಗಿ ಈ ವಿವಾಹ ಕಾರ್ಯ ನಡೆದಿದ್ದು, ಈ ಚಿತ್ರಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಮದುವೆ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ನಟಿ, ಪಾರ್ಸಿ ಸೈಲರ್ ಜೊತೆಗೆ ಬೆಂಗಾಳಿ ನಟಿ ಮೂರು ಗಂಟಿನ ಬೆಸುಗೆಗೆ ಒಳಗಾಗಿದ್ದಾಳೆ. ಈ ಅದ್ಭುತ ದಿನಕ್ಕೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಬೇಡುತ್ತೇವೆ ಎಂಬ ಕ್ಯಾಪ್ಶನ್ನಲ್ಲಿ ಈ ಚಿತ್ರವನ್ನು ಫೋಸ್ಟ್ ಮಾಡಿದ್ದಾರೆ. ಮಂಟಪದಲ್ಲಿ ಚಿರಾಗ್ ಗಲ್ಲ ಹಿಡಿದಿರುವ ಫೋಟೋ, ಇಬ್ಬರು ಒಬ್ಬರನ್ನು ಒಬ್ಬರು ನೋಡುತ್ತಿರುವ ಸ್ಟನ್ನಿಂಗ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬೆಂಗಾಳಿ ಸಾಂಪ್ರದಾಯಿಕ ಉಡುಪಿನಲ್ಲಿ, ಕಡಲ ತೀರದ ಮಂಟಪದಲ್ಲಿ ಮದುವೆಯಾಗಿರುವ ಸೆಟ್ಟಿಗೆ ಅನೇಕ ಅಭಿಮಾನಿಗಳು ಕೂಡ ಮನಸೋತಿದ್ದಾರೆ.
ನಟಿ ತಮ್ಮ ಮದುವೆ ಫೋಟೋಗಳನ್ನು ಹಂಚಿಕೊಳ್ಳಿತ್ತಿದ್ದಂತೆ, ನೂತನ ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕಿರುತೆರೆ ನಟಿ ಶರನು ಪಾರಿಖ್, ಅಭಿನಂದನೆಗಳು, ನಿಮ್ಮ ಹೊಸ ಪಯಣಕ್ಕೆ ಶುಭಾಶಯಗಳು ಎಂದು ಬರೆದಿದ್ದಾರೆ. ಮತ್ತೊಬ್ಬ ಕಿರುತೆರೆ ನಟಿ ನೀನಾ ಕುಲಕರ್ಣಿ, ಅಭಿನಂದನೆಗಳು ಕಿಶು, ಎಷ್ಟು ಹ್ಯಾಂಡ್ಸಮ್ ಪತಿಯನ್ನು ಪಡೆದಿದ್ದೀಯಾ , ನಿಮ್ಮಿಬ್ಬರದು ಚೆಂದ ಜೋಡಿ, ಪ್ರೀತಿ ತುಂಬಿದ ಶುಭಾಶಯ ಮತ್ತು ಆಶೀರ್ವಾದ ಎಂದು ಬರೆದಿದ್ದಾರೆ. ಇದರ ಹೊರತಾಗಿ ಸುರಭಿ ಜ್ಯೋತಿ, ರಕ್ಷಾಂದ್ ಖಾನ್ ಮತ್ತಿತ್ತರ ನಟ- ನಟಿಯರು ಕೂಡ ಶುಭಾಶಯಗಳ ಹೂಮಳೆ ಸುರಿಸಿದ್ದಾರೆ.