ಕರ್ನಾಟಕ

karnataka

ETV Bharat / entertainment

ಮಹಿಳೆಯೊಂದಿಗೆ ನಟಿ ರೇಖಾ ಲಿವ್-ಇನ್​ ರಿಲೇಶನ್​ಶಿಪ್​​ ವದಂತಿ: ಬಯೋಗ್ರಫಿ ಲೇಖಕ ಯಾಸರ್ ಉಸ್ಮಾನ್ ಆಕ್ರೋಶ

ಮ್ಯಾನೇಜರ್ ಫರ್ಜಾನಾ ಜೊತೆ ನಟಿ ರೇಖಾ ಲಿವ್-ಇನ್​ ರಿಲೇಶನ್​ಶಿಪ್​ನಲ್ಲಿದ್ದರು ಎಂಬ ವದಂತಿಗಳು ಹರಡಿವೆ.

Rekha
ನಟಿ ರೇಖಾ

By

Published : Jul 23, 2023, 1:27 PM IST

ರೇಖಾ. ಬಾಲಿವುಡ್​ನ ಅತ್ಯಂತ ಸುಂದರ, ಹೆಸರಾಂತ ನಟಿ. 68ರ ಹರೆಯದಲ್ಲೂ ಯುವತಿಯರು ಕೂಡಾ ನಾಚವಂತಹ ಸೌಂದರ್ಯ ಇವರದ್ದು. ನಟಿಯ ವೈಯಕ್ತಿಕ ವಿಚಾರಗಳು ಸದಾ ಸುದ್ದಿಯಲ್ಲಿರುತ್ತವೆ. ಇತ್ತೀಚೆಗೆ ಮಹಿಳೆಯೊಂದಿಗೆ ರೇಖಾ ಲಿವಿಂಗ್​​ ಟುಗೆದರ್​​ ರಿಲೇಶನ್​ಶಿಪ್​​ನಲ್ಲಿದ್ದರು ಎಂಬುದಾಗಿ ಕೆಲ ವರದಿಗಳು ಹರಡಿದ್ದು, ಸಂಚಲನ ಸೃಷ್ಟಿಸಿದೆ. ಈ ವದಂತಿಗಳನ್ನು ರೇಖಾ ಅವರ ಬಯೋಗ್ರಫಿ ಲೇಖಕ ಯಾಸರ್ ಉಸ್ಮಾನ್ (Yasser Usman) ಅಲ್ಲಗೆಳೆದಿದ್ದಾರೆ.

ಇಂಡಿಯನ್​ ಐಕಾನ್ ರೇಖಾ ಮತ್ತು ಅವರ ಮ್ಯಾನೇಜರ್ ಫರ್ಜಾನಾ ನಡುವೆ ಲಿವ್-ಇನ್ ಸಂಬಂಧವಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ವಿಚಾರವನ್ನು 2016ರಲ್ಲಿ 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ' ಬಯೋಗ್ರಫಿ ಬರೆದ ಲೇಖಕ ಯಾಸರ್ ಉಸ್ಮಾನ್ ತಳ್ಳಿಹಾಕಿದ್ದಾರೆ.

ಯಾಸರ್ ಉಸ್ಮಾನ್ ಕಿಡಿ: ಸಾಮಾಜಿಕ ಮಾಧ್ಯಮದಲ್ಲಿ ಲೇಖಕ ಯಾಸರ್ ಉಸ್ಮಾನ್ ಈ ಸಂಗತಿ ಉಲ್ಲೇಖಿಸಿ, ತಾನು ಬರೆದ ಬಯೋಗ್ರಫಿ ಸಂಬಂಧಿಸಿದ ಉಲ್ಲೇಖಗಳು ಸಂಪೂರ್ಣ ಕಟ್ಟುಕಥೆ ಮತ್ತು ಸುಳ್ಳು ಎಂದು ತಿಳಿಸಿದರು. ತಮ್ಮ ಕೃತಿಯಲ್ಲಿ ಈ ರೀತಿಯ ಯಾವುದೇ ವಿಷಯಗಳಿಲ್ಲ. "ಕೆಲವರುಸತ್ಯಗಳನ್ನು ಪರಿಶೀಲಿಸುವಲ್ಲಿ ತಿರಸ್ಕಾರ ಭಾವನೆ ಹೊಂದಿದ್ದಾರೆ. ಹೆಚ್ಚಾಗಿ ಅವರು ಮಹಿಳೆಯರನ್ನೇ ಗುರಿಯಾಗಿಸುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಆಧಾರರಹಿತ ವದಂತಿಗಳು ಎಂದೂ ಸ್ಪಷ್ಟಪಡಿಸಿದ್ದಾರೆ.

ಯಾಸರ್ ಉಸ್ಮಾನ್ ತಮ್ಮ ಹೇಳಿಕೆಯಲ್ಲಿ, "ಲಿವ್-ಇನ್ ಸಂಬಂಧ" ಎಂಬ ಪದವನ್ನು ನನ್ನ ಈ ಸಂಪೂರ್ಣ ಬಯೋಗ್ರಫಿಯಲ್ಲಿ ಎಲ್ಲಿಯೂ ಬಳಸಿಲ್ಲ ಎಂದಿದ್ದಾರೆ. ಅಂತಹ ವಿಷಯಗಳನ್ನು ಬೆಂಬಲಿಸುವ ವರದಿಗಳನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಇದೇ ವೇಳೆ, ಈ ತಪ್ಪು ಮಾಹಿತಿಯು ಕಳಪೆ ಪತ್ರಿಕೋದ್ಯಮದಿಂದ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ:ತನಗೆ ಅಥವಾ ತನ್ನ ಪುಸ್ತಕಕ್ಕೆ ಸಂಬಂಧಿಸಿದಂತೆ ಹರಡಿರುವ ತಪ್ಪು ಉಲ್ಲೇಖಗಳನ್ನು ತಕ್ಷಣವೇ ಸರಿಪಡಿಸದಿದ್ದರೆ, ಇಂತಹ ತಪ್ಪು ಹೇಳಿಕೆಗಳನ್ನು ಹರಡುವ ಜವಾಬ್ದಾರಿಯುತ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಸಹ ಲೇಖಕರು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ:Suriya Birthday: ಕಂಗುವ ಫಸ್ಟ್ ಗ್ಲಿಂಪ್ಸ್ ರಿಲೀಸ್​; ರೋಮಾಂಚಕ ದೃಶ್ಯಗಳಲ್ಲಿ ಕಾಲಿವುಡ್​ ಸೂಪರ್​ ಸ್ಟಾರ್​ ಸೂರ್ಯ!

ರೇಖಾ ಅವರ ಮ್ಯಾನೇಜರ್ ಫರ್ಜಾನಾ ಅವರು ನಟಿಯ ವೈಯಕ್ತಿಕ ಜೀವನದಲ್ಲಿ ಪ್ರವೇಶ ಮಾಡಿದ್ದಾರೆ ಮತ್ತು ರೇಖಾ ಮಹಿಳಾ ಮ್ಯಾನೇಜರ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂಬ ಅಂಶಗಳು ಯಾಸರ್ ಉಸ್ಮಾನ್ ಅವರು ಬರೆದಿರುವ ಬಯೋಗ್ರಫಿಯಲ್ಲಿ ಇದೆ ಎಂದು ವರದಿಗಳು ಹೇಳಿದ್ದವು. ರೇಖಾರ ಜೀವನದ ಪ್ರತಿ ವಿಷಯಗಳನ್ನು ಫರ್ಜಾನಾ ನಿಯಂತ್ರಿಸುತ್ತಿದ್ದರು. ಈ ಮಹಿಳಾ ಜೋಡಿಯು ಮೂರು ದಶಕಗಳಿಂದ ಆತ್ಮೀಯ ಸಂಬಂಧವನ್ನು ಹೊಂದಿದೆ ಎಂದು ಕೆಲವೇ ಕೆಲ ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಆದಾಗ್ಯೂ, ಉಸ್ಮಾನ್ ಅವರ ಇತ್ತೀಚಿನ ಹೇಳಿಕೆಯು ವದಂತಿಗಳನ್ನು, ತಪ್ಪು ಗ್ರಹಿಕೆಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ.

ಇದನ್ನೂ ಓದಿ:ತಾಕತ್ತಿದ್ದರೆ 'ಮಣಿಪುರ ಫೈಲ್ಸ್​​' ಸಿನಿಮಾ ಮಾಡಿ: ಕಾಶ್ಮೀರಿ ಫೈಲ್ಸ್​ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿಗೆ ನೆಟ್ಟಿಗರ ಸವಾಲು

ರೇಖಾ ಅವರು ಅತಿಲೋಕ ಸುಂದರಿ ಖ್ಯಾತಿಯ ಪ್ರಸಿದ್ಧ ನಟಿ. ತಮ್ಮ ವಿಭಿನ್ನ ವ್ಯಕ್ತಿತ್ವ ಮತ್ತು ಅಮೋಘ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ನಟಿಯ ಖಾಸಗಿ ಜೀವನವು ಆಗಾಗ್ಗೆ ತೀವ್ರ ಸುದ್ದಿಯಾಗುತ್ತದೆ. ದೆಹಲಿ ಮೂಲದ ಕೈಗಾರಿಕೋದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ಮದುವೆ ಆಗಿದ್ದರು. ಏಳು ತಿಂಗಳಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ABOUT THE AUTHOR

...view details