ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಪುತ್ರಿ ಐರಾ ಇತ್ತೀಚೆಗಷ್ಟೇ ತಮ್ಮ ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಸ್ಯಾಂಡಲ್ವುಡ್ನ ರಾಕಿಂಗ್ ಕಪಲ್ ಬಹಳ ಅದ್ಧೂರಿಯಾಗಿ ತಮ್ಮ ಮುದ್ದು ಮಗಳ ಜನ್ಮದಿನವನ್ನು ಆಚರಿಸಿದ್ದಾರೆ. ಇಂದು ರಾಧಿಕಾ ಪಂಡಿತ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಐರಾ ಬರ್ತ್ಡೇ ಸೆಲೆಬ್ರೇಶನ್ ವಿಡಿಯೋ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸ್ಪೆಷಲ್ ವಿಡಿಯೋ ಶೇರ್ ಮಾಡಿದ ನಟಿ ರಾಧಿಕಾ ಪಂಡಿತ್, ''2.12.2018, ನನ್ನ ಏಂಜಲ್, ನೀನು ನನ್ನ ಜೀವನದಲ್ಲಿ ಬಂದ ವಿಶೇಷ ದಿನವಿದು. ನೀನು ನನ್ನ ಜೀವನದಲ್ಲಿ ಸಂತೋಷವನ್ನು ತಂದಿದ್ದಿ. ನಿನಗೆ ಐದು ವರ್ಷಗಳಾಯಿತು ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ'' ಎಂದು ಬರೆದುಕೊಂಡಿದ್ದಾರೆ. ಇದೇ ಡಿಸೆಂಬರ್ 2ರಂದು ಐರಾ ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ.
ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ವಿಶ್ವವಿಖ್ಯಾತರಾಗಿರುವ ಯಶ್ ಹಾಗೂ ಸ್ಯಾಂಡಲ್ವುಡ್ನಲ್ಲಿ ಒಂದು ಸಮಯದಲ್ಲಿ ಧೂಳೆಬ್ಬಿಸಿದ್ದ ನಟಿ ರಾಧಿಕಾ ಪಂಡಿತ್ ಅದೆಷ್ಟೋ ಅಭಿಮಾನಿಗಳ ಪಾಲಿಗೆ ಮಾದರಿ ದಂಪತಿ. ಕನ್ನಡ ಚಿತ್ರರಂಗಕ್ಕೆ ಕೆಲ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಅಭಿಮಾನಿಗಳ ಸಂಖ್ಯೆ ಕೂಡ ದೊಡ್ಡ ಮಟ್ಟದಲ್ಲೇ ಇದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಜೋಡಿ ಬಗ್ಗೆ ತಿಳಿದುಕೊಳ್ಳಲು, ಹೊಸ ಹೊಸ ಫೋಟೋ-ವಿಡಿಯೋಗಳನ್ನು ನೋಡಲು ಕಾತರರಾಗಿದ್ದಾರೆ. ಮತ್ತೊಂದೆಡೆ ಇವರ ಮುದ್ದು ಮಕ್ಕಳಾದ ಐರಾ ಹಾಗೂ ಯಥರ್ವ್ ಕೂಡ ಈಗಾಗಲೇ ಜನಪ್ರಿಯರಾಗಿದ್ದಾರೆ.