ಟೀಂ ಇಂಡಿಯಾದ ಜನಪ್ರಿಯ ಕ್ರಿಕೆಟ್ ತಾರೆ ದಿನೇಶ್ ಕಾರ್ತಿಕ್ ಅವರು ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಸುಂದರ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿರುವ ದಿನೇಶ್ ಕಾರ್ತಿಕ್, ಸಲಾಂ ರಾಕಿ ಭಾಯ್ ಎಂದು ವಿಶೇಷ ಶೀರ್ಷಿಕೆ ಹಾಕಿಕೊಂಡಿದ್ದಾರೆ. ಈ ಫೋಟೋ ಹಂಚಿಕೊಂಡ ತಕ್ಷಣ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಮಾಡಿದ್ದಾರೆ. ರಾತ್ರಿ ಹಂಚಿಕೊಂಡ ಅವರ ಈ ಟ್ವೀಟ್ ಬೆಳಗ್ಗೆ ಅನ್ನುಷ್ಟರಲ್ಲಿ 2,831 ರಿಟ್ವಿಟ್, 67K ಲೈಕ್ಸ್, 982 ವೀಕ್ಷಣೆ ಕಂಡಿದೆ.
ಇದನ್ನೂ ಓದಿ:ನವಾಜುದ್ದೀನ್ ಸಿದ್ದಿಕಿ ವಿರುದ್ಧ ಪತ್ನಿಯಿಂದಲೇ ರೇಪ್ ಕೇಸ್: ಮಕ್ಕಳಿಗಾಗಿ ಕೋರ್ಟ್ ಮೆಟ್ಟಿಲೇರಿದ ನಟ!
ಸ್ನೇಹಿರೊಬ್ಬರ ಮದುವೆ ಕಾರ್ಯಕ್ರಮವೊಂದರಲ್ಲಿ ಅನಿರೀಕ್ಷಿತ ಎಂಬಂತೆ ಇಬ್ಬರು ಭೇಟಿಯಾಗಿದ್ದಾರೆ. ಹೆಣೆಯಲ್ಪಟ್ಟಿರುವ ಕೇಶ ವಿನ್ಯಾಸದೊಂದಿಗೆ ಯಶ್ ಕಪ್ಪು ಶೂಟ್ ಜೊತೆಗೆ ಅದೇ ಬಣ್ಣದ ಶೂಗಳನ್ನು ಧರಿಸಿ ಬಂದಿದ್ದರು. ದಿನೇಶ್ ಕಾರ್ತಿಕ್ ಅವರು ನೌಕಾ ನೀಲಿ ಬಣ್ಣದ ಕಸೂತಿ ಜಾಕೆಟ್ ಮತ್ತು ಮ್ಯಾಚಿಂಗ್ ಕುರ್ತಾವನ್ನು ಧರಿಸಿ ಆಗಮಿದ್ದರು. ಇಬ್ಬರು ಒಬ್ಬರಿಗೊಬ್ಬರು ನೋಡಿದ ತಕ್ಷಣ ಫೋಟೋಗೆ ಪೋಸ್ ನೀಡಿದ್ದಾರೆ. ಕ್ರಿಕೆಟ್ ಮತ್ತು ಸಿನಿಮಾ ತಾರೆಯರ ಸಮಾಗಮಕ್ಕೆ ಈ ಮದುವೆ ಸಾಕ್ಷಿಯಾಗಿತ್ತು. ಆದರೆ, ಇದು ಯಾರ ಮದುವೆ ಅನ್ನೋದನ್ನು ಮಾತ್ರ ಇಬ್ಬರೂ ಬಹಿರಂಗಡಿಸಿಲ್ಲ. ಫೋಟೋ ಮಾತ್ರ ಭೇಟಿಯಾದ ತಕ್ಷಣ ಇಬ್ಬರ ನಡುವಿನ ಆಳವಾದ ಆತ್ಮೀಯತೆಯನ್ನು ಹೇಳುತ್ತಿದೆ.
ಕ್ರಿಕೆಟಿಗ ಪಾಂಡ್ಯ ಸಹೋದರರೊಂದಿಗೆ ಯಶ್
ಇತ್ತೀಚೆಗೆ ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಕೂಡ ಯಶ್ ಜೊತೆ ಕಾಣಿಸಿಕೊಂಡಿದ್ದರು. ಭೇಟಿಯ ಫೋಟೋವನ್ನು ಸ್ವತಃ ಹಾರ್ದಿಕ್ ಪಾಂಡ್ಯ ಹಂಚಿಕೊಂಡಿದ್ದರು. ಈ ಫೋಟೋಗಳಿಗೆ ಅವರು KGF 3 ಎಂದು ಕ್ಯಾಪ್ಶನ್ ಬರೆದುಕೊಂಡಿದ್ದರು. ಇವರು ಫೋಟೋ ಹಂಚಿಕೊಂಡ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ KGF 3 ಎನ್ನುವ ಶೀರ್ಷಿಕೆ ವೈರಲ್ ಆಗಿತ್ತು. ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದರು. ಆದರೆ ಯಶ್ ಮತ್ತು ಪಾಂಡ್ಯ ಸಹೋದರರು ಎಲ್ಲಿ, ಯಾವಾಗ ಭೇಟಿ ಆಗಿದ್ದರು ಎನ್ನುವ ವಿಷಯವನ್ನು ಇವತ್ತಿಗೂ ಬಹಿರಂಗಪಡಿಸಿಲ್ಲ.
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ಯಶ್
ಕೆಜಿಎಫ್ ಚಿತ್ರದ ಬಳಿಕ ದೇಶಾದ್ಯಂತ ಗಮನ ಸೆಳೆಯುತ್ತಿರುವ ಯಶ್, ಇದೀಗ ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ಆಗಿ ಗುರುತಿಸಿಕೊಂಡವರು. ನಿರೀಕ್ಷೆಗೂ ಮೀರಿ ಬೆಳೆದ ಯಶ್, ತಮ್ಮ ಮುಂದಿನ ಸಿನಿಮಾ ಯಾವುದು ಅನ್ನೋದನ್ನು ಮಾತ್ರ ಈವರೆಗೂ ಬಹಿರಂಗಪಡಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅವರ ಮುಂದಿನ ಸಿನಿಮಾ ಬಗ್ಗೆ ತರಹೇವಾರು ಸುದ್ದಿಗಳು ಓಡಾಡುತ್ತಿವೆ. ಇತ್ತೀಚೆಗೆ ಈ ಬಗ್ಗೆ ಕೇಳಿದಾಗ, ಕೆಜಿಎಫ್ ಯಶಸ್ಸೇ ಅಂತಿಮ ಎಂದು ನೀವು ಅಂದುಕೊಂಡಿರಬಹುದು. ಆದರೆ, ಅದಕ್ಕಿಂತ ದುಪ್ಪಟ್ಟು ಮನಂಜನೆ ನೀಡಬೇಕು ಅನ್ನೋದು ನನ್ನ ಆಸೆ. ನನಗೆ ಇನ್ನೂ ಸಾಧಿಸುವ ಹಸಿವಿದೆ ಎಂದು ಹೇಳಿಕೊಂಡಿದ್ದರು. ಹಾಗಾಗಿ ಅವರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದೆ.
ಇದನ್ನೂ ಓದಿ:ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಫಿಲ್ಮ್ ಅವಾರ್ಡ್: 'ಆರ್ಆರ್ಆರ್' ಮುಡಿಗೇರಿದ 4 ಅತ್ಯುನ್ನತ ಪ್ರಶಸ್ತಿಗಳು