ಹೈದಾರಾಬಾದ್ :ಭಾರತೀಯ ಚಿತ್ರರಂಗದಲ್ಲಿ ಹತ್ತಾರು ಹೊಸ ದಾಖಲೆ ನಿರ್ಮಾಣ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಇದೀಗ ಮತ್ತೊಂದು ರೆಕಾರ್ಡ್ ಬರೆದಿದೆ. ದಕ್ಷಿಣ ಕೊರಿಯಾದ ಸಿಯೋಲ್ನಲ್ಲೂ ರಾಕಿ ಭಾಯ್ ಚಿತ್ರ ಪ್ರದರ್ಶನಗೊಂಡಿದೆ. ಈ ಮೂಲಕ ಈ ದೇಶದಲ್ಲಿ ಪ್ರದರ್ಶನಗೊಂಡಿರುವ ಮೊದಲ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ.
ಚಿತ್ರ ತೆರೆ ಕಂಡಾಗಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿರುವ ಕೆಜಿಎಫ್ ಚಾಫ್ಟರ್2 ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರಿ ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ ದಂಗಲ್ ಚಿತ್ರದ ರೆಕಾರ್ಡ್ ಸಹ ಬ್ರೇಕ್ ಮಾಡಿದೆ. ಇದರ ಮಧ್ಯೆ ದಕ್ಷಿಣ ಕೊರಿಯಾದ ಸಿಯೋಲ್ನಲ್ಲೂ ಪ್ರದರ್ಶನ ಕಾಣುವ ಮೂಲಕ ಈ ಸಾಧನೆ ಮಾಡಿರುವ ಮೊದಲ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಿಯೋಲ್ನಲ್ಲಿ ಹಿಂದಿ ಅವತರಣಿಕೆಯಲ್ಲಿ ಈ ಚಿತ್ರ ತೆರೆ ಕಂಡಿದ್ದು, ಟ್ವಿಟರ್ನಲ್ಲಿ ಇದರ ಕೆಲವೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿವೆ. ವಿಶ್ವದಾದ್ಯಂತ ಏಪ್ರಿಲ್ 14ರಂದು ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು.