ಚಂದನವನದ ಎವರ್ಗ್ರೀನ್ ಬ್ಯೂಟಿಫುಲ್ ನಟಿ ರಾಧಿಕಾ ಪಂಡಿತ್. ಇವರು ಕೆಲವು ವರ್ಷಗಳಿಂದ ಸಿನಿ ರಂಗದಿಂದ ದೂರವೇ ಉಳಿದಿದ್ದಾರೆ. ಹಾಗಂತ ಅಭಿಮಾನಿಗಳಿಗೆ ರಾಧಿಕಾ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ನಟ ಯಶ್ ಅವರನ್ನು ಮದುವೆಯಾದಾಗಿನಿಂದ ಸಂಸಾರ, ಮಕ್ಕಳು ಅಂತ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದ ಮೂಲಕ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರುವ ತಾರೆ ಹೊಸ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದು ಮಗನ ಜನ್ಮದಿನದ ಸಲುವಾಗಿ ಕ್ಯೂಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯ ಪುತ್ರ ಯಥರ್ವ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 2019ರ ಅಕ್ಟೋಬರ್ 30ರಂದು ಯಥರ್ವ್ ಜನಿಸಿದ್ದು, ಬರ್ತ್ಡೇ ಸಲುವಾಗಿ ರಾಧಿಕಾ ಪಂಡಿತ್ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಮ್ಮನಿಗೆ ಮಗ ಮಲ್ಲಿಗೆ ಹೂವು ಮುಡಿಸುತ್ತಿರುವ ಮುದ್ದಾದ ದೃಶ್ಯ ಇದಾಗಿದೆ. ಇದಕ್ಕೊಂದು ಚೆಂದನೆಯ ಕ್ಯಾಪ್ಶನ್ ನೀಡಿ ಪುತ್ರನಿಗೆ ಬರ್ತ್ಡೇ ವಿಶ್ ಮಾಡಿದ್ದಾರೆ.
"ನನ್ನ ಪ್ರೀಸಿಯಸ್ ಬೇಬಿ ಬಾಯ್. ನಾನು ಎಂದಿಗೂ ವಿಶೇಷ ಎನ್ನುವಂತೆ ಮಾಡಿದ್ದೀಯಾ. ನನ್ನನ್ನು ಅಮ್ಮನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ಹ್ಯಾಪಿ ಬರ್ತ್ಡೇ ಯಥರ್ವ್. ಲವ್ ಯೂ ಆಲ್ವೇಸ್" ಎಂದಿದ್ದಾರೆ. ಈ ಪೋಸ್ಟ್ ಅನೇಕರ ಮೆಚ್ಚುಗೆ ಗಳಿಸಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಮೆಂಟ್ ಮೂಲಕ ನೆಟ್ಟಿಗರು ಯಶಿಕಾ ಪುತ್ರನಿಗೆ ಬರ್ತ್ಡೇ ವಿಶ್ ತಿಳಿಸಿದ್ದಾರೆ.
ಇದನ್ನೂ ಓದಿ:ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬಾಚರಿಸಿದ ಯಶ್ ರಾಧಿಕಾ ದಂಪತಿ: Photos!
ಯಶ್, ರಾಧಿಕಾರಂತೆ ಅವರ ಮಕ್ಕಳಿಗೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರ ಮುದ್ದಾದ ಫೋಟೋ, ವಿಡಿಯೋಗಳನ್ನು ನೋಡಲು ಜನರು ಕಾಯುತ್ತಿರುತ್ತಾರೆ. ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಯಶ್ ಅವರು, ನನ್ನ ಮಕ್ಕಳಿಗೆ ಈಗಲೇ ಯಾವುದೇ ಸ್ಥಾನಮಾನ, ವಿಶೇಷ ಗೌರವ ಕೊಡಬೇಡಿ. ಅವರನ್ನು ಪ್ರೀತಿಸಿ ಮತ್ತು ಆಶೀರ್ವದಿಸಿ. ಆದರೆ, ಅವರು ಜೀವನದಲ್ಲಿ ಏನಾದರೂ ಸಾಧಿಸಿದ ಮೇಲೆಯೇ ಅವರಿಗೆ ಗೌರವ ಕೊಡಿ ಎಂದು ಹೇಳಿದ್ದರು. ಈ ಮಾತು ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಯಶ್ ಮತ್ತು ರಾಧಿಕಾ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಜೊತೆಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಈ ಜೋಡಿ ಅಭಿನಯಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಅದಾಗಲೇ ಇವರಿಬ್ಬರು ಜಸ್ಟ್ ಫ್ರೆಂಡ್ಸ್ ಅಲ್ಲ ಎಂಬುದು ಪ್ರೇಕ್ಷಕರಿಗೆ ಅರಿವಾಗಿತ್ತು. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಈ ಎಲ್ಲಾ ಗಾಸಿಪ್ಗಳಿಗೆ ವಿದಾಯ ಹೇಳಿ ಕನ್ನಡಕ್ಕೆ ಹೊಸ ತಾರಾ ಜೋಡಿಯನ್ನು ನೀಡುವ ಭರವಸೆ ಕೊಟ್ಟಿತು. ಇದಾಗಿ ಕೆಲವೇ ದಿನಗಳಲ್ಲಿ ಗೋವಾದಲ್ಲಿ ವಿಜೃಂಭಣೆಯಿಂದ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್ 9, 2016ರಂದು ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದರು. ತಾರಾ ದಂಪತಿಗೆ ಐರಾ ಮತ್ತು ಯಥರ್ವ್ ಎಂಬ ಇಬ್ಬರು ಮುದ್ದು ಮಕ್ಕಳಿದ್ದು, ಸುಖ ಸಂಸಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಡಲ ತೀರದಲ್ಲಿ ಯಶ್ ಕುಟುಂಬ: ಅಭಿಮಾನಿಗಳ ಕಣ್ಮನ ಸೆಳೆದ ರಾಧಿಕಾ ಪಂಡಿತ್ ಹೊಸ ಪೋಸ್ಟ್