ಕರ್ನಾಟಕ

karnataka

ETV Bharat / entertainment

ವಿಶ್ವ ಪರಿಸರ ದಿನ: ಅಲ್ಲು ಅರ್ಜುನ್, ಜಾಕಿ ಶ್ರಾಫ್, ಭೂಮಿ ಪೆಡ್ನೇಕರ್ ಹೇಳಿದ್ದೇನು? - ವಿಶ್ವ ಪರಿಸರ ದಿನವಾದ ಇಂದು ಸಿನಿಮಾ

ವಿಶ್ವ ಪರಿಸರ ದಿನವಾದ ಇಂದು ಸಿನಿಮಾ ನಟ-ನಟಿಯರು ತಮ್ಮ ಅಭಿಮಾನಿಗಳಿಗೆ ಪರಿಸರ ಸಂರಕ್ಷಣೆಯ ಸಂದೇಶ ನೀಡಿದ್ದಾರೆ.

Etv Bharatworld-environment-day-allu-arjun-jackie-shroff-bhumi-pednekar-urge-people-to-pant-more-trees
ವಿಶ್ವ ಪರಿಸರ ದಿನ: ಅಲ್ಲು ಅರ್ಜುನ್, ಜಾಕಿ ಶ್ರಾಫ್, ಭೂಮಿ ಪೆಡ್ನೇಕರ್ ಅಭಿಮಾನಿಗಳಿಗೆ ಹೇಳಿದ್ದೇನು?

By

Published : Jun 5, 2023, 10:07 PM IST

ವಿಶ್ವ ಪರಿಸರ ದಿನ 2023 ಅನ್ನು ಜೂನ್ 5 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನದಂದು ಜಗತ್ತಿನಲ್ಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ಇದರೊಂದಿಗೆ ಪರಿಸರದ ಮಹತ್ವವನ್ನು ಎಲ್ಲರಿಗೂ ತಿಳಿಸಲಾಗುತ್ತದೆ.

ಇದಲ್ಲದೇ ಪ್ರಕೃತಿ ವಿನಾಶದಿಂದ ಜನರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ. ಪರಿಸರವನ್ನು ಸುರಕ್ಷಿತವಾಗಿಡಲು ದೇಶ ಮತ್ತು ಪ್ರಪಂಚದಲ್ಲಿ ಅನೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅದೇ ರೀತಿ ಸಿನಿಮಾ ತಾರೆಯರು ತಮ್ಮ ಅಭಿಮಾನಿಗಳಿಗೆ ಪರಿಸರ ಸಂರಕ್ಷಣೆ ಮತ್ತು ವೃಕ್ಷಗಳನ್ನು ಬೆಳೆಸಲು ಪ್ರೇರೇಪಿಸುತ್ತಿದ್ದಾರೆ.

ಟಾಲಿವುಡ್​ ನಟ ಅಲ್ಲು ಅರ್ಜುನ್, ನಟನೆಯ ಹೊರತಾಗಿ ಒಬ್ಬ ಪರಿಸರಪ್ರೇಮಿ. ತನ್ನ ಅಭಿಮಾನಿಗಳು ಮತ್ತು ಹಿತೈಷಿಗಳಿಂದ ಉಡುಗೊರೆಯಾಗಿ ಸಸ್ಯಗಳನ್ನು ಸ್ವೀಕರಿಸುವ ಮತ್ತು ನೀಡುವ ಅಭ್ಯಾಸ ಹೊಂದಿದ್ದಾರೆ. ಏಕೆಂದರೆ ಇವರು ಇತರೆ ಉಡುಗೊರೆಗಿಂತಲೂ ಹೆಚ್ಚಾಗಿ ಸಸ್ಯಗಳನ್ನು ಇಷ್ಟಪಡುತ್ತಾರೆ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಎಲ್ಲರಿಗೂ "ವಿಶ್ವ ಪರಿಸರ ದಿನದ ಶುಭಾಶಯ" ತಿಳಿಸಿ "ನಾವೆಲ್ಲರೂ ಪರಿಸರಕ್ಕಾಗಿ ಒಂದು ಸಣ್ಣ ಕೆಲಸವನ್ನು ಮಾಡೋಣ." ಎಂದು ಬರೆದು ತಾನು ಗಿಡಕ್ಕೆ ನೀರು ಹಾಕುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ನಟಿ ಭೂಮಿ ಪೆಡ್ನೇಕರ್ ಅವರು ವಿಶ್ವ ಪರಿಸರ ದಿನದ ಅಂಗವಾಗಿ ಮಹಾರಾಷ್ಟ್ರದಾದ್ಯಂತ 3000 ಸಸ್ಯಗಳನ್ನು ನೆಡಲು ಪ್ರೇರೇಪಿಸಿದ್ದಾರೆ. ಪರಿಸರ ಸಂರಕ್ಷಣೆಗೆ ತನ್ನ ಬದ್ಧತೆಯ ಬಗ್ಗೆ ಮಾತನಾಡಿದ ಅವರು, "ವಿವಿಧ ರೀತಿಯ ಮಾನವ ಚಟುವಟಿಕೆಗಳಿಂದಾಗಿ, ವಿಶೇಷವಾಗಿ ಅರಣ್ಯನಾಶದಿಂದಾಗಿ ಭೂಮಿ ಅಪಾಯದಲ್ಲಿದೆ ಮತ್ತು ನಾವು ಈಗ ಅದರ ಬಗ್ಗೆ ಏನಾದರೂ ಮಾಡಲು ವಿಫಲವಾದರೆ, ನಮ್ಮ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದೃಷ್ಟವಶಾತ್, ಪ್ರಕೃತಿ ಆಶ್ಚರ್ಯಕರವಾಗಿ ಸ್ಥಿತಿಸ್ಥಾಪಕವಾಗಿದೆ. ಆದ್ದರಿಂದ, ಪ್ರತಿಯೊಬ್ಬರೂ ಸಾಧ್ಯವಾದಷ್ಟು ಮರಗಳನ್ನು ನೆಡಲು ಪ್ರಯತ್ನಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಪ್ಲಾಂಟ್ ನೆಕ್ಲೆಸ್ ಧರಿಸುವ ಮೂಲಕ ಅಥವಾ ಸಸ್ಯಗಳನ್ನು ಉಡುಗೊರೆಯಾಗಿ ಕೊಂಡೊಯ್ಯುವ ಮೂಲಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ನಟ ಜಾಕಿ ಶ್ರಾಫ್, ಭೂಮಿ ತಾಯಿಯನ್ನು ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕೆಂದು ಜನರನ್ನು ಒತ್ತಾಯಿಸುತ್ತಿದ್ದಾರೆ. ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಅವರು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ "ಗೋ ಗ್ರೀನ್, ಬ್ರೀತ್ ಕ್ಲೀನ್" ಎಂಬ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

ಕೇದಾರನಾಥ ಮತ್ತು ಚಂಡೀಗಢ ಕರೇ, ಆಶಿಕಿಯಂತಹ ಸಿನಿಮಾಗಳಿಂದ ಹೆಸರುವಾಸಿಯಾದ ಪ್ರಜ್ಞಾ ಕಪೂರ್ ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿಶ್ವ ಪರಿಸರ ದಿನವಾದ ಇಂದು ಭಾರತೀಯ ನೌಕಾಪಡೆಯೊಂದಿಗೆ ಸಿನಿಮಾ ನಿರ್ಮಾಪಕರು ಸೇರಿ ನಡೆಸುತ್ತಿರುವ ರಸ್ತೆ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಒಂದು ಸಮಾಜವಾಗಿ, ನಮ್ಮ ಪರಿಸರದ ಬಗ್ಗೆ ಕಾಳಜಿ ವಹಿಸುವುದು ಮತ್ತು ನಮ್ಮ ಗ್ರಹವನ್ನು ಹಸಿರು ಮತ್ತು ಸ್ವಚ್ಚವಾಗಿಸಲು ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದು ಅವರು ನಂಬಿದ್ದಾರೆ. ಈ ವರ್ಷ ಭಾರತೀಯ ನೌಕಾಪಡೆಯು ನಡೆಸುತ್ತಿರುವ ಅಭಿಯಾನ ಬೆಂಬಲಿಸಿದ್ದರು.

ಇದನ್ನೂ ಓದಿ :ಫೋಟೋಗೆ ಪೋಸ್ ಕೊಡಲು ಗಿಡ ನೆಡುವುದು ನನಗಿಷ್ಟವಿಲ್ಲ: ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ

ABOUT THE AUTHOR

...view details