ಕರ್ನಾಟಕ

karnataka

ETV Bharat / entertainment

'ವರ್ಲ್ಡ್​ ಕಪ್​ ನಮ್ದೇ' ಎಂದ ಚಂದನ್​ ಶೆಟ್ಟಿ; ಟೀಂ ಇಂಡಿಯಾಗೆ ಶಿವಣ್ಣ ಶುಭ ಹಾರೈಕೆ - ಈಟಿವಿ ಭಾರತ ಕನ್ನಡ

Sandalwood celebrities wished to Indian cricket team: ರ‍್ಯಾಪರ್ ಚಂದನ್​ ಶೆಟ್ಟಿ ಮತ್ತು ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಭಾರತ ತಂಡದ ಗೆಲುವಿಗೆ ಶುಭ ಹಾರೈಸಿದ್ದಾರೆ.

'ವರ್ಲ್ಡ್​ ಕಪ್​ ನಮ್ದೇ' ಎಂದ ಚಂದನ್​ ಶೆಟ್ಟಿ; ಟೀ ಇಂಡಿಯಾಗೆ ಶಿವಣ್ಣ ಶುಭ ಹಾರೈಕೆ
world cup 2023 Shiva rajkumar and Chandan shetty wished to indian cricket team

By ETV Bharat Karnataka Team

Published : Nov 19, 2023, 2:06 PM IST

Updated : Nov 19, 2023, 2:14 PM IST

ಏಕದಿನ ವಿಶ್ವಕಪ್​ ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಅಂತಿಮ ಕದನಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಟೀಂ ಇಂಡಿಯಾ ಗೆಲುವಿಗೆ ದೇಶದಾದ್ಯಂತ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ಈ ಮಧ್ಯೆ ಕನ್ನಡ ಚಿತ್ರರಂಗದ ತಾರೆಯರು ಕೂಡ ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ. ರ‍್ಯಾಪರ್ ಚಂದನ್​ ಶೆಟ್ಟಿ 'ವರ್ಲ್ಡ್​ ಕಪ್​ ನಮ್ದೇ' ಎಂಬ ರ‍್ಯಾಪ್ ಸಾಂಗ್​ ಕೂಡ ಮಾಡಿದ್ದಾರೆ. ​

ಕನ್ನಡ ಚಿತ್ರರಂಗದಲ್ಲಿ ರ‍್ಯಾಪರ್ ಆಗಿ ಕನ್ನಡಿಗರ ಮನಗೆದ್ದು ಬಳಿಕ ಸಂಗೀತ ನಿರ್ದೇಶಕ ಹಾಗೂ ಪ್ರಸ್ತುತ ನಾಯಕ ನಟನಾಗಿ ಗಮನ ಸೆಳೆಯುತ್ತಿರುವ ಸ್ಟಾರ್ ಚಂದನ್ ಶೆಟ್ಟಿ. ಇದೀಗ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತೇ ಅನ್ನೋ ವಿಶ್ವಾಸದಿಂದ 'ವರ್ಲ್ಡ್​ ಕಪ್​ ನಮ್ದೇ' ಎಂಬ ರ‍್ಯಾಪ್ ಸಾಂಗ್​ ಮಾಡಿದ್ದಾರೆ. ಈ ವಿಡಿಯೋವನ್ನು ಚಂದನ್ ಶೆಟ್ಟಿ​ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್​ ವೈರಲ್​ ಆಗುತ್ತಿದೆ.

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಭಾರತ ಪಡೆಗೆ ಶುಭ ಹಾರೈಸಿದ್ದಾರೆ. "ಇಂಡಿಯಾ ಫೈನಲ್​ ತಲುಪಿರುವುದು ಎಲ್ಲರಿಗೂ ಖುಷಿಯ ವಿಷಯ. ಇಲ್ಲಿಯವರೆಗೆ ಹತ್ತು ಮ್ಯಾಚ್​ಗಳನ್ನು ಉತ್ತಮ ಅಂಕದೊಂದಿಗೆ ಗೆದ್ದಿದ್ದಾರೆ. ಇದು ತುಂಬಾ ಖುಷಿ ಕೊಟ್ಟಿದೆ. ಈ ಬಗ್ಗೆ ಬಹಳ ಹೆಮ್ಮೆ ಇದೆ. ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ ಪಂದ್ಯದಲ್ಲಿ ಇಂಡಿಯಾ ಕಪ್​ ಗೆದ್ದುಕೊಂಡು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲಾ ಭಾರತೀಯರು ಕೂಡ ಪ್ರಾರ್ಥಿಸುತ್ತಿದ್ದಾರೆ. ನಾವೆಲ್ಲರೂ ನಿಮಗೆ ಸಪೋರ್ಟ್​ ಮಾಡುತ್ತೇವೆ. ಆಲ್​ ದಿ ಬೆಸ್ಟ್​. ಲವ್​ ಯು" ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​ ಫೈನಲ್​ ಕದನ: ಟಾಸ್​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​ ಆಯ್ಕೆ, ಇತ್ತಂಡಗಳಲ್ಲಿ ಬದಲಾವಣೆ ಇಲ್ಲ

ಇವರಲ್ಲದೇ, ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ವಿಶ್ವಕಪ್ ಫೈನಲ್‌ ಬಗೆಗಿನ ತಮ್ಮ ನಿರೀಕ್ಷೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಗೆಲುವಿನ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. "ನಾನು ಅತ್ಯಂತ ಉತ್ಸುಕಳಾಗಿದ್ದೇನೆ. ಭಾರತ ಟ್ರೋಫಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ" ಎಂದರು.

ಹಿರಿಯ ನಟ ಅನುಪಮ್ ಖೇರ್, ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, "ಇದು ಇಂಡಿಯಾ ವರ್ಸಸ್​ ಆಸ್ಟ್ರೇಲಿಯಾ ದಿನ. ಇಡೀ ಜಗತ್ತು ಭಾರತದ ವಿಜಯಕ್ಕೆ ಸಾಕ್ಷಿಯಾಗಲಿದೆ. ನಿಸ್ಸಂದೇಹವಾಗಿ ನಾವು ವಿಜೇತರಾಗಿ ಹೊರಹೊಮ್ಮುತ್ತೇವೆ" ಎಂದಿದ್ದಾರೆ. ನಟ ಆಯುಷ್ಮಾನ್ ಖುರಾನಾ ಸಹ ಟೀಮ್​ ಇಂಡಿಯಾ ಗೆಲುವಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:ವಿಶ್ವಕಪ್‌ ಫೈನಲ್‌ನಲ್ಲಿ ಗೆಲುವು ನಮ್ಮದೇ ಎಂದ ಸೆಲೆಬ್ರಿಟಿಗಳು

Last Updated : Nov 19, 2023, 2:14 PM IST

ABOUT THE AUTHOR

...view details