ಕರ್ನಾಟಕ

karnataka

ETV Bharat / entertainment

ಮಲೆನಾಡಿನಲ್ಲಿ ಚಿತ್ರೀಕರಣಗೊಂಡಿರುವ ರೊಮ್ಯಾಂಟಿಕ್ ಮರ್ಡರ್ ಮಿಸ್ಟ್ರಿ 'ವಿಂಡೋಸೀಟ್ ' - window seat kannada movie releasing on july 1

ಶೀತಲ್ ಶೆಟ್ಟಿ ನಿರ್ದೇಶನದ ರೊಮ್ಯಾಂಟಿಕ್ ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ 'ವಿಂಡೋಸೀಟ್ 'ಸಿನೆಮಾ ಇದೇ ಬರುವ ಜುಲೈ 1 ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಹೇಳಿದೆ.

window-seat-kannada-movie-releasing-on-july-1
ಮಲೆನಾಡಿನಲ್ಲಿ ಚಿತ್ರೀಕರಣಗೊಂಡಿರುವ ರೊಮ್ಯಾಂಟಿಕ್ ಮರ್ಡರ್ ಮಿಸ್ಟ್ರಿ 'ವಿಂಡೋಸೀಟ್ '

By

Published : Jun 23, 2022, 10:15 PM IST

ಶಿವಮೊಗ್ಗ: ಶೀತಲ್ ಶೆಟ್ಟಿ ಚೊಚ್ಚಲ ನಿರ್ದೇಶನದ ರೊಮ್ಯಾಂಟಿಕ್ ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ 'ವಿಂಡೋಸೀಟ್ 'ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಜುಲೈ 1ಕ್ಕೆ ಬಿಡುಗಡೆಗೊಳ್ಳಲಿದೆ. ಸಾಗರದ ಸುತ್ತಮುತ್ತಲಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿದೆ.

ಚಿತ್ರದ ನಾಯಕ ಅನೂಪ್ ಭಂಡಾರಿ ಮಾತನಾಡಿ, ಇದೊಂದು ಅದ್ಭುತ ಸಿನೆಮಾ. ರಘು ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದು, ವೀಕ್ಷಕರಿಗೆ ಸಿನೆಮಾ ಇಷ್ಟವಾಗುತ್ತದೆ. ಚಿತ್ರ ಸಾಗರ ತಾಲೂಕು ತಾಳಗುಪ್ಪ ರೈಲು ನಿಲ್ದಾಣದಿಂದ ಪ್ರಾರಂಭವಾಗಿ ನಂತರ ಅನೇಕ ತಿರುವುಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ನಾಯಕಿ ಅಮೃತ ಅಯ್ಯಂಗಾರ್ ಮಾತನಾಡಿ, ನಾನು ಸಿನೆಮಾದಲ್ಲಿ ಒಂದು ರೆಸ್ಟೋರೆಂಟ್ ಓನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾಯಕ ನನ್ನ ರೆಸ್ಟೋರೆಂಟ್‌ನಲ್ಲಿ ಗಾಯಕನಾಗಿರುತ್ತಾನೆ. ಹೀಗೆ ಕಥೆ ಸಾಗುತ್ತದೆ ಎಂದು ಹೇಳಿದರು.

ನಿರ್ದೇಶಕಿ ಶೀತಲ್ ಶೆಟ್ಟಿ ಮಾತನಾಡಿ, ಟ್ರೈನ್‌ನಲ್ಲಿ ಪ್ರಯಾಣಿಸುವ ಒಬ್ಬ ಯುವಕನಿಗೆ ಪ್ರೀತಿಯಾಗುವುದು, ಈ ಯುವಕ ವಿಂಡೋ ಸೈಡ್ ಸೀಟಿನಲ್ಲಿ ಕುಳಿತಾಗ ಏನೆಲ್ಲ ಆಗುತ್ತದೆ ಎಂಬುದನ್ನು ಚಿತ್ರ ಹೊಂದಿದೆ. ಇದೊಂದು ರೊಮ್ಯಾಂಟಿಕ್ ಮರ್ಡರ್ ಮಿಸ್ಟ್ರಿ ಎಂದು ಹೇಳಿದರು.

ಜಾಕ್ ಮಂಜುನಾಥ್ ಚಿತ್ರ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ, ವಿಘ್ನೇಶ್ ರಾಜ್ ಛಾಯಾಗ್ರಾಹಣ ಇದೆ.

ಇದನ್ನೂ ಓದಿ:ಪೃಥ್ವಿ ಅಂಬರ್-ಪ್ರಮೋದ್ ಸಂಗಮದಲ್ಲಿ ಬರ್ತಿದೆ 'ಭುವನಂ ಗಗನಂ'

ABOUT THE AUTHOR

...view details