ಕರ್ನಾಟಕ

karnataka

ETV Bharat / entertainment

"ಅರ್ಹಾಳ ನಟನೆ ನಿಮಗೆ ಇಷ್ಟವಾಗುತ್ತದೆ": 'ಶಾಕುಂತಲಂ' ಚಿತ್ರತಂಡಕ್ಕೆ ಅಲ್ಲು ಅರ್ಜುನ್​ ಶುಭಹಾರೈಕೆ - ಶಾಕುಂತಲಂ ಚಿತ್ರತಂಡಕ್ಕೆ ಅಲ್ಲು ಅರ್ಜುನ್​ ಶುಭಹಾರೈಕೆ

ಇಂದು ಬಹುನಿರೀಕ್ಷಿತ 'ಶಾಕುಂತಲಂ' ಚಿತ್ರ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹಾ ಅಭಿನಯಿಸಿದ್ದಾರೆ.

Allu Arha
ಶಾಕುಂತಲಂ' ಚಿತ್ರ

By

Published : Apr 14, 2023, 11:40 AM IST

ಟಾಲಿವುಡ್​ ಬೆಡಗಿ ಸಮಂತಾ ರುತ್​ ಪ್ರಭು ಅವರ 'ಶಾಕುಂತಲಂ' ಚಿತ್ರದಲ್ಲಿ ಸೌತ್​ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹಾ ಸಹ ಅಭಿನಯಿಸಿದ್ದಾರೆ. ಇದು ಅಲ್ಲು ಅರ್ಹಾಳ ಮೊದಲ ಸಿನಿಮಾವಾಗಿದೆ. ಸ್ಟಾರ್​ ಕಿಡ್​ನ ಚೊಚ್ಚಲ ಪ್ರವೇಶದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಪುಷ್ಪ 2 ನಟ ಚಿತ್ರ ತಂಡದ ಪ್ರತಿಯೊಬ್ಬರಿಗೂ ಆಲ್​ ದಿ ಬೆಸ್ಟ್​ ತಿಳಿಸಿದ್ದಾರೆ ಮತ್ತು ತಮ್ಮ ಮಗಳ ಮೊದಲ ಅಭಿನಯವನ್ನು ಎಲ್ಲರೂ ಆನಂದಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

"ಶಾಕುಂತಲಂ ತಂಡಕ್ಕೆ ಆಲ್​ ದಿ ಬೆಸ್ಟ್​. ಇಂತಹ ಅದ್ಭುತ ಚಿತ್ರವನ್ನು ತಯಾರಿಸಿದ ಗುಣಶೇಖರ್​, ನೀಲಿಮಾ ಗುಣ ಮತ್ತು ಎಸ್​ವಿಸಿ ತಂಡಕ್ಕೆ ಒಳ್ಳೆಯದಾಗಲಿ. ನನ್ನ ಪ್ರೀತಿಯ ಮಹಿಳೆ ಸಮಂತಾ ರುತ್​ ಪ್ರಭು, ಸಹೋದರ ದೇವ್​ ಮೋಹನ್​ ಮತ್ತು ಇಡೀ ತಂಡಕ್ಕೆ ಶುಭವಾಗಲಿ" ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್​ನಲ್ಲಿ, "ಅಲ್ಲು ಅರ್ಹಾಳ ನಟನೆ ನಿಮಗೆಲ್ಲಾ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಅವಳನ್ನು ತೆರೆಯ ಮೇಲೆ ಪರಿಚಯಿಸಿದಕ್ಕಾಗಿ ಗುಣ ಶೇಖರ್​ ಅವರಿಗೆ ಸ್ಪೆಷಲ್​ ಥ್ಯಾಂಕ್ಸ್​. ಈ ಸಿಹಿ ಕ್ಷಣವು ಎಂದಿಗೂ ಆನಂದ ನೀಡುತ್ತದೆ" ಎಂದು ಹೇಳಿದ್ದಾರೆ.

ಅರ್ಹಾ ಭವಿಷ್ಯದ ಸೂಪರ್​ ಸ್ಟಾರ್​:ಶಾಕುಂತಲಂ ಪ್ರಚಾರದಲ್ಲಿ ನಿರತರಾಗಿರುವ ಸಮಂತಾ ಅವರು ಸಂದರ್ಶನವೊಂದರಲ್ಲಿ ಅರ್ಹಾ ಬಗ್ಗೆ ಮಾತನಾಡಿದ್ದರು. ಅಲ್ಲು ಅರ್ಜುನ್​ ಮತ್ತು ಅಲ್ಲು ಸ್ನೇಹಾ ರೆಡ್ಡಿ ಅವರ ಪುತ್ರಿ 6 ವರ್ಷದ ಅಲ್ಲು ಅರ್ಹಾಳ ಜೊತೆಗೆ ಕೆಲಸ ಮಾಡಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ:ಸಮಂತಾ ಅಭಿನಯದ 'ಶಾಕುಂತಲಂ' ಸಿನಿಮಾದ ಮೊದಲ ಹಾಡು ಬಿಡುಗಡೆ; ಎದೆ ಬಡಿತ ಹೆಚ್ಚಿಸಿದ ನಟಿ

"ಅಲ್ಲು ಅರ್ಹಾ ನಿಜಕ್ಕೂ ಅದ್ಭುತ. ಭವಿಷ್ಯದ ಸೂಪರ್​ ಸ್ಟಾರ್. ಆತ್ಮವಿಶ್ವಾಸ ಹೆಚ್ಚಿದ್ದು, ಕಿಂಚಿತ್ತೂ ಭಯ ಆ ಮಗುವಲ್ಲಿರಲಿಲ್ಲ. ಚೊಚ್ಚಲ ಚಿತ್ರದ ಸೆಟ್‌ಗಳಲ್ಲಿ ಸುಮಾರು 200 ಸಿಬ್ಬಂದಿಯೊಂದಿಗೆ ಸಡಗರದಿಂದ, ಆರಾಮವಾಗಿ ಓಡಾಡಿಕೊಂಡಿದ್ದಳು. ಹೈದರಾಬಾದ್‌ನ ಹೆಚ್ಚಿನ ವಯಸ್ಕರು ತೆಲುಗು ಭಾಷೆಯನ್ನು ಮಾತನಾಡುವುದಕ್ಕಿಂತ ಆರ್ಹಾ ಚೆನ್ನಾಗಿ ತೆಲುಗು ಮಾತನಾಡುತ್ತಾಳೆ ಎಂದು ಗುಣಗಾನ ಮಾಡಿದ್ದರು.

ಇಂದು ಶಾಕುಂತಲಂ ಬಿಡುಗಡೆ: ದೇವ ಮೋಹನ್​ ಜೊತೆಗೆ ಸಮಂತಾ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ಶಾಕುಂತಲಂ' ಇಂದು ಬಿಡುಗಡೆಯಾಗಿದೆ. ಶಾಕುಂತಲಂ' ಕವಿ ಕಾಳಿದಾಸರ ಪ್ರಸಿದ್ಧ ನಾಟಕ ಶಾಕುಂತಲವನ್ನು ಆಧರಿಸಿದೆ. ಗುಣಶೇಖರ್ ಅವರು ನಿರ್ದೇಶಿಸಿದ ಈ ಚಲನಚಿತ್ರವು ಶಕುಂತಲಾ ಮತ್ತು ರಾಜ ದುಷ್ಯಂತನ ಪ್ರೇಮ ಕಥೆ ಹೇಳಲಿದೆ. ಪ್ರೀತಿಸಿ ಮದುವೆಯಾದ ನಂತರ ಅವರ ಭಾವನಾತ್ಮಕ ಪ್ರಯಾಣವನ್ನು ಚಿತ್ರ ಗುರುತಿಸುತ್ತದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಈ ಚಿತ್ರವು ಇಂದು ಬಿಡುಗಡೆ ಆಗಿದೆ. ಬಹುದಿನಗಳ ನಂತರ ಸಮಂತಾ ರುತ್ ಪ್ರಭು ಅವರನ್ನು ತೆರೆ ಮೇಲೆ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ.

ಇದನ್ನೂ ಓದಿ:ಶಾಕುಂತಲಂ ಬಿಡುಗಡೆಗೆ ಕ್ಷಣಗಣನೆ: ವ್ಯಾಪಕ ಪ್ರಚಾರ ಬೆನ್ನಲ್ಲೇ ನಟಿ ಸಮಂತಾ ಅಸ್ವಸ್ಥ

ABOUT THE AUTHOR

...view details