ಕರ್ನಾಟಕ

karnataka

ETV Bharat / entertainment

ಕನ್ನಡದ ಬಿಗ್ ಬಾಸ್ ಒಟಿಟಿ ಶೋ.. ವಿನ್ನರ್ ಯಾರಾಗ್ತಾರೆ, ಮಾಜಿ ಸ್ಪರ್ಧಿಗಳು ಹೇಳೋದೇನು? - Bigg Boss Kannada OTT

ಕನ್ನಡದ ಬಿಗ್ ಬಾಸ್ ಒಟಿಟಿ ಸೀಸನ್​ನಲ್ಲಿ ತಮ್ಮ ಪಯಣದ ಕುರಿತು, ವಿನ್ನರ್​ ಯಾರಾಗಬಹುದೆಂಬುದರ ಕುರಿತು ಮಾಜಿ ಸ್ಪರ್ಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Bigg Boss Kannada OTT show
ಕನ್ನಡದ ಬಿಗ್ ಬಾಸ್ ಒಟಿಟಿ ಶೋ

By

Published : Sep 14, 2022, 6:37 PM IST

ಕನ್ನಡದ ಬಿಗ್ ಬಾಸ್ ಒಟಿಟಿ ಸೀಸನ್ ಅಂತಿಮ ಹಂತದಲ್ಲಿದೆ. ರೋಮಾಂಚನಕಾರಿ ಫೈನಲ್‌ ವೀಕ್ಷಿಸಲು ಪ್ರೇಕ್ಷಕರು ಸಜ್ಜಾಗುತ್ತಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ಪಯಣದ ಕುರಿತು, ವಿನ್ನರ್​ ಯಾರಾಗಬಹುದೆಂಬುದರ ಕುರಿತು ಮಾಜಿ ಸ್ಪರ್ಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಾಲಿನಲ್ಲಿ ಸೋಮಣ್ಣ ಅವರು ಸ್ವತಂತ್ರವಾಗಿ ಆಡುತ್ತಿರುವುದರಿಂದ ಮತ್ತು ಉತ್ತಮ ಕೆಲಸ ಮಾಡುತ್ತಿರುವುದರಿಂದ ಅವರ ಗೆಲುವಿಗೆ ಅಪಾರ ಅವಕಾಶವಿದೆ ಎಂದು ಇತ್ತೀಚೆಗೆ ಎಲಿಮಿನೇಟ್ ಆಗಿರುವ ನಟಿ ಮತ್ತು ನಿರ್ಮಾಪಕಿ ಚಿತ್ರಾ ಹಳ್ಳಿಕೇರಿ ಅಭಿಪ್ರಾಯಪಟ್ಟಿದ್ದಾರೆ. ಮನೆಯಲ್ಲಿ ಯಾರಲ್ಲಿ ಉತ್ತಮ ತಂತ್ರವಿದೆ ಎಂದು ಕೇಳಿದಾಗ, "ನಾವು ತಂತ್ರದ ಬಗ್ಗೆ ಮಾತನಾಡುವಾಗ, ರಾಕೇಶ್ ಅವರು ಇಡೀ ಶೋನಲ್ಲಿ ಸ್ಥಿರವಾಗಿ ಉಳಿದಿದ್ದಾರೆ ಮತ್ತು ನನ್ನ ಪ್ರಕಾರ ಅದೇ ಅವರ ದೊಡ್ಡ ಶಕ್ತಿಯಾಗಿದೆ'' ಎಂದು ತಿಳಿಸಿದರು.

ತಮ್ಮ ಪ್ರಯಾಣವನ್ನು ನೆನಪಿಸಿಕೊಂಡ ಅವರು, ''ಕನ್ನಡದ ಬಿಗ್ ಬಾಸ್ ಒಟಿಟಿ ಸೀಸನ್ 1 ಜೀವನದ ಪ್ರತಿಯೊಂದು ಹಂತದ ಜನರ ಜೊತೆಗೆ ಬೆರೆಯಲು ಅವಕಾಶ ನೀಡಿದ್ದು, ಅದ್ಭುತ ಅನುಭವವಾಗಿದೆ" ಎಂದರು.

ಬಿಗ್ ಬಾಸ್ ಮನೆಯಿಂದ ಹೊರ ಬಂದವರಲ್ಲಿ ಮೊದಲಿಗರಾದ ರೂಪದರ್ಶಿ ಮತ್ತು ನಟಿ ಕಿರಣ್ ಯೋಗೇಶ್ವರ್ ಮಾತನಾಡಿ, "ರಾಕೇಶ್ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು. ಅವರು ತುಂಬಾ ಸ್ಮಾರ್ಟ್ ಮತ್ತು ತಮ್ಮ ಆಟದಲ್ಲಿ ಚೆನ್ನಾಗಿ ಆಡಿದ್ದಾರೆ ಎಂದರು. ಸ್ಪರ್ಧೆಯ ವಿಷಯದಲ್ಲಿ ಸಾನಿಯಾ ಕೂಡ ಮುಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅಕ್ಷತಾ ಕುಕಿ ಮಾತನಾಡಿ, "ಗೆಲುವಿಗೆ ರಾಕೇಶ್ ಅವರು ತುಂಬಾ ಅರ್ಹರು ಮತ್ತು ಆಟಕ್ಕೆ 100ಕ್ಕೂ ಹೆಚ್ಚು ಶ್ರಮ ಹಾಕುವುದರಿಂದ ಅವರು ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಅವರು ಮನೆಯಲ್ಲಿರುವವರ ಪೈಕಿ ಗೆಲುವಿಗೆ ಅತ್ಯಂತ ಅರ್ಹ ಅಭ್ಯರ್ಥಿ'' ಎಂದು ತಿಳಿಸಿದರು.

ಇದನ್ನೂ ಓದಿ:ಹಿಂದಿ ಬಿಗ್​ ಬಾಸ್ 16 ಶೀಘ್ರದಲ್ಲೇ ಆರಂಭ.. ಪ್ರೋಮೋ ರಿಲೀಸ್-ಪ್ರೇಕ್ಷಕರ ಕುತೂಹಲ ಹೆಚ್ಚಳ

ನಗುಮುಖದ ಹುಡುಗಿ ಸ್ಪೂರ್ತಿ ಗೌಡ ಮಾತನಾಡಿ, "ರಾಕೇಶ್ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ, ಅವರು ಪ್ರಬಲ ಸ್ಪರ್ಧಿಯಾಗಿದ್ದು, ಒಳ್ಳೆಯ ಮನುಷ್ಯ ಕೂಡ ಹೌದು. ತಂತ್ರದೊಂದಿಗೆ ತಮ್ಮ ಆಟವನ್ನು ಬಹಳ ಚುರುಕಾಗಿ ಆಡುತ್ತಿರುವುದರಿಂದ ವಿಜೇತರಾಗಬೇಕೆಂದು ನಾನು ಹಾರೈಸುತ್ತೇನೆ" ಎಂದು ಹೇಳಿದರು. ವಿಜೇತರ ಕುರಿತು ಸ್ಪರ್ಧಿಗಳು ತಮ್ಮ ಭವಿಷ್ಯ ನುಡಿದಿದ್ದಾರೆ. ಕನ್ನಡದ ಬಿಗ್ ಬಾಸ್ ಒಟಿಟಿ ಶೋ ಅನ್ನು ಯಾರು ಗೆಲ್ಲುತ್ತಾರೆಂದು ಶೀಘ್ರದಲ್ಲೇ ಗೊತ್ತಾಗಲಿದೆ.

ABOUT THE AUTHOR

...view details