ಮುಂಬೈ:ಬಾಲಿವುಡ್ ನಟಿ ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯಾರಾಗಿದ್ದಾರೆ. ಆಗ್ಗಿದ್ದಾಂಗೆ ತಮ್ಮ ಪ್ರವಾಸ, ಇಷ್ಟವಾದ ಚಿತ್ರ ಮತ್ತು ಸಿನಿಮಾಗೆ ಸಂಬಂಧಿಸಿದ ಪೋಸ್ಟ್ಗಳನ್ನು ಹಾಕುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಈ ನಟಿ ತಮ್ಮ ಸೆಲ್ಫಿ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು.
ಸದ್ಯ ತಮ್ಮ ಮುಂಬರುವ ಚಿತ್ರ ಫೈಟರ್ ಚಿತ್ರದ ಶೂಟಿಂಗ್ನಲ್ಲಿ ಅಸ್ಸೋಂನಲ್ಲಿರುವ ಈ ನಟಿ, ಇಲ್ಲಿನ ಪ್ರವಾಸದ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಸೂರ್ಯ ಕಿರಣವೂ ತಮ್ಮ ಹೊಳೆಯುವ ಚರ್ಮದ ಮೇಲೆ ಮುತ್ತಿಡುವಂತಹ ಸೆಲ್ಫಿಯನ್ನು ಅವರು ಹಂಚಿಕೊಂಡಿದ್ದಾರೆ.
ಕಡಲ ತೀರದಲ್ಲಿ ವಿರಾಮ: ತಮ್ಮ ಬಿಡುವಿಲ್ಲದ ಶೂಟಿಂಗ್ನಿಂದ ಬ್ರೇಕ್ ಪಡೆದಿರುವ ನಟಿ, ಸಣ್ಣ ಪ್ರವಾಸ ನಡೆಸಿದ್ದಾರೆ. ಕಡಲ ಕಿನಾರೆಯಲ್ಲಿ ಕುಳಿತಿರುವ ಅವರು ಸೂರ್ಯೋದಯ ಸಮಯದಲ್ಲಿ ಹೊಳೆಯುವ ಕಿರಣಗಳಿಗೆ ಮುಖ ಒಡ್ಡಿದ್ದಾರೆ. ಚಿತ್ರದಲ್ಲಿ ಹಸಿರು ಟೋಪಿ ಧರಿಸಿರುವ ಅವರು, ತಲೆಗೆ ಕಪ್ಪು ಬಣ್ಣದ ಕ್ಯಾಪ್ ಹಾಕಿರುವುದು ಫೋಟೋದಲ್ಲಿ ಕಾಣಬಹುದಾಗಿದೆ.
ಕಡಲ ಕಿನಾರೆಯಲ್ಲಿ ತಮ್ಮ ಚರ್ಮದ ಮೇಲೆ ಸೂರ್ಯನ ಕಿರಣ ಹೊಳೆಯುತ್ತಿರುವ ಕುರಿತು ಬಹಳ ಹತ್ತಿರದ ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ಇದಕ್ಕೆ ಸೂರ್ಯನ ಎಮೋಜಿಯನ್ನು ಹಾಕಿದ್ದಾರೆ. ಇನ್ನು ಬಾಲಿವುಡ್ ನಟಿಯ ಈ ಫೋಟೋಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಹೆಲೋ ಪ್ರಿಟಿ ಗರ್ಲ್ ಎಂದು ಮೂರು ಕೆಂಪು ಬಣ್ಣದ ಹೃದಯದ ಎಮೋಜಿ ಹಾಕಿದ್ದರೆ ಮತ್ತೆ ಕೆಲವರು ಗುಡ್ ಮಾರ್ನಿಂಗ್ ಎಂದಿದ್ದಾರೆ.