ಹೈದರಾಬಾದ್:ಗ್ಲೋಬಲ್ ಐಕಾನಿಕ್ ಪ್ರಿಯಾಂಕಾ ಚೋಪ್ರಾ 22 ವರ್ಷಗಳ ಹಿಂದೆ ಮಿಸ್ ವರ್ಲ್ಡ್ ಪ್ರಶಸ್ತಿಯ ಕಿರೀಟ ಮುಡಿಗೇರಿಸಿಕೊಂಡಿದ್ದು ಹೆಮ್ಮೆಯ ವಿಷಯ. ಈ ಪ್ರಶಸ್ತಿ ಭಾರತಕ್ಕೆ ಕೀರ್ತಿ ತಂದುಕೊಡುವ ಜೊತೆಗೆ ಅನೇಕ ಅಭಿಮಾನಿಗಳ ಮನಸ್ಸನ್ನು ಗೆದ್ದರು ನಟಿ ಪ್ರಿಯಾಂಕಾ. ಈ ಸೌಂದರ್ಯ ಸ್ಪರ್ಧೆ ಕಾರ್ಯಕ್ರಮವನ್ನು ಅಂದು ಜಗತ್ತಿನಾದ್ಯಂತ ಅನೇಕ ಅಭಿಮಾನಿಗಳು ವೀಕ್ಷಣೆ ಮಾಡಿದ್ದರು. ಅದರಲ್ಲಿ ಒಂದು ನಿಕ್ ಜೋನಸ್ ಕುಟುಂಬ.
ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ 2000ನೇ ಇಸವಿಯಲ್ಲಿ ಲಂಡನ್ನಲ್ಲಿ ನಡೆದ ಮಿಸ್ ವರ್ಲ್ಡ್ ಪ್ರಶಸ್ತಿ ಸಮಾರಂಭ ಸಮಾರಂಭವನ್ನು ಪ್ರಿಯಾಂಕಾ ಅವರ ಅತ್ತೆ ಡೆನಿಸ್ ಕೂಡ ತಮ್ಮ ಮಗ ನಿಕ್ ಜೋನಸ್ ಜೊತೆ ಕುಳಿತು ವೀಕ್ಷಣೆ ಮಾಡಿದ್ದರಂತೆ. ಈ ವೇಳೆ ನಿಕ್ ಜೋನಸ್ ವಯಸ್ಸು ಕೇವಲ 7 ವರ್ಷ ಆಗಿತ್ತಂತೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಕಾ, ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಗಂಡನ ವಯಸ್ಸಿನ ಅಂತರವನ್ನು ಬಹಿರಂಗ ಪಡಿಸಿದ ಅವರು ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ತಮ್ಮ ಈ ಕಾರ್ಯಕ್ರಮ ಹೇಗೆ ಅತ್ತೆ ಮನೆ ಮತ್ತು ಗಂಡನಲ್ಲಿ ಅಚ್ಚಳಿಯದ ನೆನಪಿನ ಮುದ್ರೆ ಒತ್ತಿದೆ ಎಂಬ ಸಂಭ್ರಮ ಹಂಚಿಕೊಂಡಿದ್ದಾರೆ.
ನನ್ನ ಅತ್ತೆ ಈ ಕಥೆಯನ್ನು ನನಗೆ ಹೇಳಿದರು. 18 ವರ್ಷವಿದ್ದಾಗ ನಾನು ಲಂಡನ್ನಲ್ಲಿ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದೆ. ಈ ಘಟನೆಯನ್ನು ನನ್ನ ಅತ್ತೆ, ಮಾವ ಮತ್ತು ಗಂಡ ನೋಡಿದ್ದರು. ಅವರು ನನ್ನ ಭೇಟಿಯಾದಾಗಲೂ ನೀನು ಸ್ಪರ್ಧೆಯಲ್ಲಿ ವಿಜೇತಳಾಗಿದ್ದ ಕಾರ್ಯಕ್ರಮ ವೀಕ್ಷಣೆ ಮಾಡಿದ್ದೆವು ಎಂದಿದ್ದರು. ಈ ಸಂದರ್ಭದಲ್ಲಿ ಅವರು ಟೆಕ್ಸಾಸ್ನಲ್ಲಿದ್ದರಂತೆ ಎಂದು ವಿವರಣೆ ನೀಡಿದರು.
ನನ್ನ ಅತ್ತೆಯ ಗಂಡ ಕೆವಿನ್ ಸಆರ್ ಅವರಿಂದ ಈ ಸೌಂದರ್ಯ ಸ್ಪರ್ಧೆ ನೋಡುವ ಹುಚ್ಚು ಕುಟುಂಬಕ್ಕೆ ಹಬ್ಬಿತು. ಇದೆ ಕಾರಣದಿಂದ ಅವರಿಗೆ ಈ ಕಾರ್ಯಕ್ರಮ ನೋಡುವ ಹುಮ್ಮಸ್ಸು ಇತ್ತು. 7 ವರ್ಷದ ನಿಕ್ ಕೂಡ ಈ ಕಾರ್ಯಕ್ರಮವನ್ನು ತಾಯಿ ಜೊತೆ ನೋಡಿದ್ದರು. ಇದು ನಿಜಕ್ಕೂ ವಿಚಿತ್ರ. ನಿಮ್ಮ ಜೀವನದಲ್ಲಿ ಯಾವುದೇ ಅವಧಿಯಲ್ಲೂ ನಿಮ್ಮ ವ್ಯಕ್ತಿಗಳು ಎಂದಿಗೂ ಒಟ್ಟಿಗೆ ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಇದನ್ನು ನಾನು ನಂಬುತ್ತೇನೆ ಎಂದರು.
ಭಾರೀ ವಯಸ್ಸಿನ ಅಂತರ ನಡುವೆಯೂ ಪ್ರಿಯಾಂಕಾ ಮತ್ತು ನಿಕ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ವೇಳೆ ಅತಿ ಚಿಕ್ಕ ವಯಸ್ಸಿನ ನಿಕ್ ಅವರನ್ನು ಪ್ರಿಯಾಂಕಾ ವರಿಸುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. 2018ರಲ್ಲಿ ಮದುವೆಯಾದ ಈ ಜೋಡಿ, ಕಳೆದ ಜನವರಿಯಲ್ಲಿ ತಮ್ಮ ಮೊದಲ ಮಗಳು ಮಾಲ್ತಿ ಮೇರಿಯನ್ನು ಸರೋಗೆಸಿ ಮೂಲಕ ಪಡೆದರು. ಮುದ್ದು ಮಗಳ ಜೊತೆಗೆ ಇಬ್ಬರು ಪೋಷಕರು ಕಾಲ ಕಳೆಯುತ್ತಿದ್ದು, ಇತ್ತ ತಮ್ಮ ಬಿಡುವಿಲ್ಲದ ವೃತ್ತಿ ಜೀವನದಲ್ಲೂ ಯಶಸ್ವಿಯಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ನಟಿ ಪ್ರಿಯಾಂಕಾ ನಟನೆಯ ಸಿಟಾಡೆಲ್ ಚಿತ್ರ ಓಟಿಟಿಯಲ್ಲಿ ಭರ್ಜರಿ ಯಶಸ್ಸು ಪಡೆದಿದೆ.