ಮುಂಬೈ (ಮಹಾರಾಷ್ಟ್ರ):ಬಾಲಿವುಡ್ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪತ್ನಿ ರಾಜಕಾರಣಿ ಮತ್ತು ನಟಿಯೂ ಆಗಿರುವ ಜಯಾ ಬಚ್ಚನ್ ಅವರು ತಮ್ಮ ಮೊಮ್ಮಗಳು ನಡೆಸಿಕೊಡುವ ಪಾಡ್ಕ್ಯಾಸ್ಟ್ನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. 'ವಾಟ್ ದಿ ಹೆಲ್ ನವ್ಯಾ' ಎಂಬ ಪಾಡ್‌ಕ್ಯಾಸ್ಟ್ ಇದಾಗಿದ್ದು, ಇದರ ಟ್ರೇಲರ್ ಅನ್ನು ನವ್ಯಾ ನವೇಲಿ ನಂದಾ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಂದಾ ಅವರ ತಾಯಿ ಶ್ವೇತಾ ಬಚ್ಚನ್ ಕೂಡ ಟ್ರೇಲರ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಪಾಡ್‌ಕ್ಯಾಸ್ಟ್ ಅತಿಥಿಯಾಗಿ ಜಯಾ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಜಯಾ ಬಚ್ಚನ್, ಶ್ವೇತಾ ಬಚ್ಚನ್ ಮತ್ತು ನವ್ಯಾ ಮೂವರು ಇಬ್ಬರಿಗೊಬ್ಬರು ತಮಾಷೆ ಮಾಡುತ್ತಾ ಅವರವರ ಕಾಲು ಎಳೆಯುತ್ತಾ ಮಾತನಾಡುವುನ್ನು ಕಾಣಬಹುದು. ಅಲ್ಲದೇ ಇದರಲ್ಲಿ ಹಾಜರಾದ ತನ್ನ ವಿಶೇಷ ಅತಿಥಿಗಳಿಗಳಾದ ಅಜ್ಜಿ ಜಯಾ ಬಚ್ಚನ್ ಮತ್ತು ತನ್ನ ತಾಯಿ ಶ್ವೇತಾ ಬಚ್ಚನ್ ಅವರನ್ನು ನಂದಾ ಎಂದಿನಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು ಕಾಣಬಹುದು.
ಮೂವರ ನಡುವೆ ನಡೆಯುವ ತಮಾಷೆಯನ್ನು ಟ್ರೇಲರ್ನಲ್ಲಿ ಕಾಣಬಹುದು. ಅಲ್ಲದೇ ಕೆಲವು ಕುತೂಹಲಕಾರಿ ಸಂಗತಿಗಳನ್ನು ಅವರು ಹೇಳಿಕೊಂಡಿದ್ದಾರೆ. ಸದ್ಯ ಈ ತಮಾಷೆ, ವಿನೋದ ಹಾಗೂ ಕುತೂಹಲಕಾರಿಯುತ ಸಂಗತಿಗಳ ಟ್ರೇಲರ್ ಅನ್ನು ನವ್ಯಾ, '3 ಮಹಿಳೆಯರು, 3 ತಲೆಮಾರುಗಳು, 3 ಗ್ರಹಿಕೆಗಳು' ಎಂಬ ಶೀರ್ಷಿಕೆಯಲ್ಲಿ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಪ್ರೋಮೋದ ಮತ್ತೊಂದು ಭಾಗದಲ್ಲಿ ಜಯಾ ಬಚ್ಚನ್ ಅತ್ಯಂತ ತಮಾಷೆಯಾಗಿ ಮಾತನಾಡಿದ್ದಾರೆ. ಬೋಲ್ಡ್ ಮತ್ತು ತುಂಬಾ ಜೋಶ್ ಆಗಿ ಕಾಣಿಸಿಕೊಂಡಿರುವ ಜಯಾ ಬಚ್ಚನ್, ಒಂದು ತಮಾಷೆಯ ಕಥೆ ಹೇಳುವ ಭರವಸೆ ನೀಡುತ್ತಾರೆ. 'ನನ್ನ ಬಳಿ ತುಂಬಾ ತಮಾಷೆಯ ಕಥೆಗಳು ಇವೆ. ನಾನು ಅದನ್ನು ಹೇಳಬಹುದೇ?' ಎಂದು ಕೇಳುತ್ತಾರೆ.
ಮೊಮ್ಮಗಳಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಕಥೆ ಹೇಳಲು ಆರಂಭಿಸಿದ ಅವರು 'ಇತ್ತೀಚಿನ ದಿನಗಳಲ್ಲಿ ಪ್ರೀತಿಯ ವ್ಯಾಖ್ಯಾನ ಬದಲಾಗಿದೆ. ಆದರೆ, ಇದೆಲ್ಲದಕ್ಕೂ ನನಗೆ ವಯಸ್ಸಾಗಿದೆ. ಮಗಳು ಮತ್ತು ಮೊಮ್ಮಗಳು ನನ್ನ ಆತ್ಮೀಯ ಸ್ನೇಹಿತರು ಎಂದು ಹೇಳುವ ಜಯಾ ಬಚ್ಚನ್, ಪುತ್ರಿ ಶ್ವೇತಾಳ ಕಾಲನ್ನು ಮತ್ತಷ್ಟು ಎಳೆಯುತ್ತಾರೆ. ‘ಶ್ವೇತಾ ಹಣ ತೆಗೆದುಕೊಳ್ಳುವಲ್ಲಿ ನಿಪುಣಳು’ ಎಂದು ಹೇಳುವ ಮಾತುಗಳು ಟ್ರೇಲರ್ನಲ್ಲಿ ತಮಾಷೆಯಾಗಿ ಕಾಣಿಸಿಕೊಂಡಿದೆ. ಪ್ರತಿಯಾಗಿ ಮಗಳು ಸಹ ಅದೇ ದಾಟಿಯಲ್ಲಿ ಪ್ರತಿಕ್ರಿಯಿಸಿರುವುದನ್ನು ಕಾಣಬಹುದು.
ಸದ್ಯ ಇವರ ಪಾಡ್‌ಕ್ಯಾಸ್ಟ್ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ. ಈ ಟ್ರೈಲರ್ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಹಲವು ಪ್ರತಿಕ್ರಿಯೆ ನೀಡಿದ್ದಾರೆ. ಜಯಾ ಬಚ್ಚನ್ ಅವರನ್ನು ಹೊಗಳಿರುವ ಕರಣ್ ಜೋಹರ್, 'ಆಂಟ್ ಜಿ ಈಸ್ ದಿ ಬೆಸ್ಟ್' ಎಂದು ಕಾಮೆಂಟ್ ಮಾಡಿರುವುದನ್ನು ಕಾಣಬಹುದು. ಇನ್ನು ಓರ್ವ ವಾಣಿಜ್ಯೋದ್ಯಮಿ ಆಗಿರುವ ನವ್ಯಾ ನವೇಲಿ ನಂದಾ ಈ ಸಣ್ಣ ಪರದೆಯ ಮುಂದಾಳತ್ವದ ವಹಿಸಿಕೊಂಡಿದ್ದಾರೆ. ಈ ಪಾಡ್‌ಕ್ಯಾಸ್ಟ್ ಅನ್ನು ಸೆಪ್ಟೆಂಬರ್ 24 ರಿಂದ ಪ್ರತಿ ಶನಿವಾರ ಬಿಡುಗಡೆ ಮಾಡಲಾಗುತ್ತದೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ನಟ ರಾಣಾ ದಗ್ಗುಬಾಟಿ