ಕರ್ನಾಟಕ

karnataka

ETV Bharat / entertainment

ಈ ನಟಿಯ ಸಾವಿಗೆ ಕಾರಣವಾಯಿತಾ ಕ್ರಶ್​​ ಡಯಟ್?​​; ಮಾರಾಣಾಂತಿಕ ಆಹಾರ ಪದ್ದತಿ ಇದು!

ಇಂದು ತೂಕದ​​ ಬಗ್ಗೆ ಕೇವಲ ಸೆಲಿಬ್ರಿಟಿಗಳು ಮಾತ್ರವಲ್ಲದೇ, ಸಾಮಾನ್ಯ ಜನರು ಹೆಚ್ಚಿನ ಕಾಳಜಿವಹಿಸಿ, ಮಾರಾಣಾಂತಿಕ ಡಯಟ್​ ಅನುಕರಣೆ ಮಾಡಲು ಮುಂದಾಗುತ್ತಾರೆ.

what is crash diet; how sridevi died
what is crash diet; how sridevi died

By ETV Bharat Karnataka Team

Published : Oct 4, 2023, 10:54 AM IST

ಹೈದರಾಬಾದ್​:ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಬಳ್ಳಿಯಂತೆ ಬಳಕುವ ಜೊತೆಗೆ ಫಿಟ್​ ಆಗಿರುವ ಆಸೆ. ಇದೆ ಕಾರಣಕ್ಕೆ ತಮ್ಮ ತೂಕ ಹೆಚ್ಚಳದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾ ಅದನ್ನು ಇಳಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ. ಈ ತೂಕದ ಚಿಂತೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ, ಸಾಮಾನ್ಯ ಜನರನ್ನು ಕಾಡುತ್ತದೆ. ಇದೇ ಕಾರಣಕ್ಕೆ ಡಯಟ್​​ ಮೊರೆ ಹೋಗುತ್ತಾರೆ. ಆದರೆ, ಈ ಡಯಟ್​​ಗಳು ನಿಮ್ಮ ಆರೋಗ್ಯಕ್ಕೆ ಅನುಕೂಲಕರವಾಗಿರಬೇಕು ಹೊರತು ಮಾರಾಣಾಂತಿಕವಾಗಿರಬಾರದು. ಬೇಗ ತೂಕ ಕಳೆದುಕೊಳ್ಳುವ ಅನೇಕ ಡಯಟ್​​ಗಳು ನಿಮ್ಮ ಜೀವಕ್ಕೆ ಕುತ್ತು ತರುವುದು ಸುಳ್ಳಲ್ಲ.

ಅಂತಹ ಡಯಟ್​ನಲ್ಲಿ ಒಂದು ಕ್ರಶ್​​ ಡಯಟ್​​. ತಜ್ಞರ ಹೇಳುವಂತೆ, ಈ ಕ್ರಶ್​​ ಡಯಟ್​​ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಗಮನಾರ್ಹವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ಈ ಡಯಟ್​ ಅನುಸರಿಸುವುದರಿಂದ ವಾರದಲ್ಲಿ ತೂಕವನ್ನು ಕಳೆದುಕೊಳ್ಳುವುದು ಗ್ಯಾರಂಟಿ ಎನ್ನುತ್ತಾರೆ. ಈ ಡಯಟ್​ ಅನುಕರಿಸುವ ಮಂದಿ ದಿನಕ್ಕೆ ಕೇವಲ 700 ಕ್ಯಾಲೋರಿ ಆಹಾರವನ್ನು ಮಾತ್ರ ಸೇವಿಸಬೇಕು. ಬ್ರೇಡ್​ ಮತ್ತು ರೈಸ್​ ಪ್ರಮಾಣ ಕಡಿಮೆ ಮಾಡುವ ಮೂಲಕ ಹಣ್ಣು ಮತ್ತು ತರಕಾರಿ ಪ್ರಮಾಣ ಹೆಚ್ಚಿಸಬೇಕು.

ಅನೇಕ ಸಮಸ್ಯೆಗಳಿಗೆ ಮೂಲ: ಕ್ರಶ್​​ ಡಯಟ್​​ ಸೇವಿಸುವ ಮಂದಿ ಬಲು ಬೇಗ ತೂಕ ಕಳೆದುಕೊಳ್ಳುತ್ತಾರೆ. ಈ ಡಯಟ್​ ಅನುಸರಿಸುವ ಶೇ 25ರಷ್ಟು ಮಂದಿಯಲ್ಲಿ ಗ್ಯಾಲ್​​ಸ್ಟೋನ್ (ಪಿತ್ತಗಲ್ಲು)​ ಅಭಿವೃದ್ಧಿಯಾಗಿ ಅದು ಮಾರಣಾಂತಿಕವಾಗುತ್ತದೆ. ಕ್ರಶ್​ ಡಯಟ್​​ ವೇಳೆ ವ್ಯಕ್ತಿ ಸೇವಿಸುವ ಎಲೆಕ್ಟ್ರೋಲೈಟ್ಸ್​​ ಅಸಮಾತೋಲನವಾಗುತ್ತದೆ. ಇದರಿಂದ ಮೂತ್ರಪಿಂಡ ಸಮಸ್ಯೆ ಕೂಡ ಉದ್ಬವಿಸಬಹುದು. ಈ ಡಯಟ್​ನಿಂದ ಹೃದಯ ಬಡಿತ ಕೂಡ ಏರುಪೇರಾಗುತ್ತದೆ. ಇದರಿಂದ ಹೃದಯಾಘಾತ ಕೂಡ ಸಂಭವಿಸಬಹುದು. ಈ ಡಯಟ್​​ ಅನುಸರಿಸುವವರಲ್ಲಿ ಕಾಡುವ ಪ್ರಮುಖ ತೊಂದರೆ ಶಾಶ್ವತವಾಗಿ ಕೂದಲು ಕಳೆದುಕೊಳ್ಳುವಿಕೆಯಾಗಿದೆ.

ಬಾಲಿವುಡ್​​ನ ಖ್ಯಾತ ನಟಿ ಶ್ರೀದೇವಿ ಕೂಡ ಈ ಕ್ರಶ್​ ಡಯಟ್​​ ಅನ್ನು ಅನುಸರಿಸುತ್ತಿದ್ದರು. ಇದು ಅವರ ಸಾವಿಗೆ ಪ್ರಮುಖ ಕಾರಣವಾಗಿದೆ ಎಂಬುದನ್ನು ಆಕೆಯ ಗಂಡ ಖ್ಯಾತ ನಿರ್ಮಾಪಕರಾಗಿರುವ ಬೋನಿ ಕಪೂರ್​ ಮಾಧ್ಯಮಗಳ ಮುಂದೆಯೇ ಹಂಚಿಕೊಂಡಿದ್ದರು. ಇದಾದ ಬಳಿಕ ಅನೇಕ ಮಂದಿಯಲ್ಲಿ ಈ ಕ್ರಶ್​ ಡಯಟ್​ ಎಂದರೇನು, ಇದರಿಂದ ನಟಿ ಹೇಗೆ ಸತ್ತರು ಎಂಬ ಪ್ರಶ್ನೆಗಳು ಕಾಡುತ್ತಿದೆ.

ತೆಳ್ಳಗೆ , ಫಿಟ್​ ಆಗಿ ದೇಹ ಕಾಣಬೇಕು ಎಂಬ ಹುಚ್ಚಿನಲ್ಲಿ ಜೀವಕ್ಕೆ ಕುತ್ತು ತರುವ ಡಯಟ್​​ಗಳ ಅನುಸರಣೆ ಎಂದಿಗೂ ಒಳ್ಳೆಯದಲ್ಲ. ಒಂದು ವೇಳೆ ನೀವು ಈ ಕ್ರಶ್​ ಡಯಟ್​ ಅನ್ನು ಪಾಲಿಸುತ್ತಿದ್ದರೆ, ಎಚ್ಚರದಿಂದ ಇರುವುದು ಅತ್ಯವಶ್ಯಕ.

ಇದನ್ನೂ ಓದಿ: ನಟಿ ಶ್ರೀದೇವಿ ಸಾವು ಸಹಜವಲ್ಲ, ಆಕಸ್ಮಿಕ : ಬೋನಿ ಕಪೂರ್​

ABOUT THE AUTHOR

...view details