ಕರ್ನಾಟಕ

karnataka

ETV Bharat / entertainment

ಮೊದಲ ಮಗುವಿನ ನಿರೀಕ್ಷೆಯಲ್ಲಿ ರುಬಿನಾ ದಿಲಾಕ್- ಅಭಿನವ್​ ಶುಕ್ಲಾ ದಂಪತಿ - ಈಟಿವಿ ಭಾರತ ಕನ್ನಡ

Rubina Dilaik Abhinav Shukla confirm pregnancy: ಬಾಲಿವುಡ್​ ನಟಿ ರುಬಿನಾ ದಿಲಾಕ್​ ಮತ್ತು ಅವರ ಪತಿ ಅಭಿನವ್​ ಶುಕ್ಲಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Rubina Dilaik Abhinav Shukla confirm pregnancy
ಮೊದಲ ಮಗುವಿನ ನಿರೀಕ್ಷೆಯಲ್ಲಿ ರುಬಿನಾ ದಿಲಾಕ್- ಅಭಿನವ್​ ಶುಕ್ಲಾ ದಂಪತಿ

By ETV Bharat Karnataka Team

Published : Sep 16, 2023, 8:40 PM IST

ಬಾಲಿವುಡ್​ ನಟಿ ರುಬಿನಾ ದಿಲಾಕ್​ ಮತ್ತು ಅವರ ಪತಿ ಅಭಿನವ್​ ಶುಕ್ಲಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ದಂಪತಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಯುನೈಟೆಡ್​ ಸ್ಟೇಟ್ಸ್​ನಲ್ಲಿ ವಿಹರಿಸುತ್ತಿರುವ ಜೋಡಿ ಹೃದಯಸ್ಪರ್ಶಿ ವಿಚಾರವನ್ನು ಹಂಚಿಕೊಳ್ಳಲು ಇನ್​ಸ್ಟಾಗ್ರಾಮ್​ ವೇದಿಕೆಯನ್ನು ಬಳಸಿಕೊಂಡರು.

ಪೋಸ್ಟ್​ ಮಾಡಿದ ಫೋಟೋಗಳಲ್ಲಿ ರುಬಿನಾ ದಿಲಾಕ್ ಮತ್ತು ಅಭಿನವ್​ ಶುಕ್ಲಾ ಸುತ್ತುವರೆದ ಸಮುದ್ರದ ಮಧ್ಯೆ ಕಾಣಿಸಿದ್ದಾರೆ. ಯುಎಸ್​ ಟ್ರಿಪ್​ನಲ್ಲಿ ಕ್ಲಿಕ್ಕಿಸಿದ ಸುಂದರ ಚಿತ್ರ ಇದಾಗಿದೆ. ಇಬ್ಬರು ತಮ್ಮ ಸಂತಸದ ನಗುವನ್ನು ಬೀರಿದ್ದಾರೆ. ದಂಪತಿ ತಮ್ಮ ಜೀವನದ ವಿಶೇಷ ಕ್ಷಣವನ್ನು ತುಂಬಾ ಖುಷಿಯಾಗಿ ಆನಂದಿಸುತ್ತಿದ್ದಾರೆ.

ರುಬಿನಾ ದಿಲಾಕ್​ ಬ್ಲ್ಯಾಕ್​ ಟಿ ಶರ್ಟ್​, ಮ್ಯಾಚಿಂಗ್​ ಟ್ರೌಸರ್​ ಮತ್ತು ಕಾರ್ಡಿಜನ್​ನಲ್ಲಿ ಚಿಕ್​ ಆಗಿ ಕಾಣಿಸುತ್ತಿದ್ದಾರೆ. ಅಭಿನವ್​ ಶುಕ್ಲಾ ಬಿಳಿ ಹೂಡಿ ಮತ್ತು ನೀಲಿ ಡೆನಿಮ್​ನಲ್ಲಿ ಆಕರ್ಷವಾಗಿ ಕಾಣಿಸುತ್ತಿದ್ದಾರೆ. ಇಬ್ಬರೂ ಸನ್​ಗ್ಲಾಸ್​​ ಧರಿಸಿ ತಿಳಿ ನಗು ಬೀರಿದ್ದಾರೆ. ಚಿತ್ರಕ್ಕೆ ನೀಡಿರುವ ಕ್ಯಾಪ್ಶನ್​ನಲ್ಲಿ​ ಜೋಡಿಯು ಮದುವೆಯಿಂದ ಹಿಡಿದು ಮಗುವಿನ ನಿರೀಕ್ಷೆಯವರೆಗೂ ಚಿಕ್ಕದಾಗಿ ಸುಂದರವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ನರ್ವಸ್​ ಆಗಿದ್ದೆ, ಮತ್ತೆ ಇಂಡಸ್ಟ್ರಿಗೆ ಮರಳುವಲ್ಲಿ ಆರ್ಯನ್​ ಖಾನ್​ ಪಾತ್ರ ಪ್ರಮುಖವಾಗಿತ್ತು': ಶಾರುಖ್​ ಖಾನ್​

"ನಾವು ಡೇಟಿಂಗ್​ ಆರಂಭಿಸಿದಾಗಿನಿಂದ ನಾವು ಜಗತ್ತನ್ನು ಒಟ್ಟಿಗೆ ಅನ್ವೇಷಿಸುತ್ತೇವೆ ಎಂದು ಭರವಸೆ ನೀಡಿದ್ದೇವೆ. ಅದರಂತೆ ಮದುವೆಯಾಗಿ ಅದನ್ನೇ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಲಿಟಲ್​ ಟ್ರಾವೆಲರ್​ ಅನ್ನು ಸ್ವಾಗತಿಸುತ್ತೇವೆ" ಎಂದು ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ. ಈ ಖುಷಿ ವಿಚಾರವನ್ನು ಹಂಚಿಕೊಂಡ ದಂಪತಿಗೆ ಸ್ನೇಹಿತರು, ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಡೇಟಿಂಗ್​ನಲ್ಲಿದ್ದ ರುಬಿನಾ ದಿಲಾಕ್ ಮತ್ತು ಅಭಿನವ್​ ಶುಕ್ಲಾ ಜೋಡಿ 2018ರ ಜೂನ್​ 21 ರಂದು ದಾಂಪತ್ಯಕ್ಕೆ ಕಾಲಿಟ್ಟರು. 5 ವರ್ಷಗಳ ಬಳಿಕ ಇದೀಗ ಪೋಷಕರಾಗುತ್ತಿರುವುದಾಗಿ ಘೋಷಿಸಿದ್ದಾರೆ. ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮಿಬ್ಬರ ಪ್ರೇಮಕಥೆಯ ಮುಂದಿನ ಅಧ್ಯಾಯವನ್ನು ತೆರೆದುಕೊಳ್ಳಲು ಜೋಡಿ ಉತ್ಸುಕರಾಗಿದ್ದಾರೆ.

ಗಂಡು ಮಗುವಿಗೆ ತಾಯಿಯಾದ ಇಲಿಯಾನಾ: ಬಾಲಿವುಡ್​ ನಟಿ ಇಲಿಯಾನಾ ಡಿಕ್ರೂಜ್​ ಆಗಸ್ಟ್​ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ನಟಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸಾಮಾನ್ಯವಾಗಿ ಬಹುತೇಕ ಸೆಲೆಬ್ರಿಟಿಗಳು ಕೆಲವು ತಿಂಗಳವರೆಗೆ ತಮ್ಮ ಮಗುವಿನ ಮುಖವನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ ಇಲಿಯಾನಾ ಡಿಕ್ರೂಜ್​ ಇದಕ್ಕೆ ವಿರುದ್ಧವಾಗಿದ್ದರು. ಅವರು ತಮ್ಮ ಮಗುವಿನ ಫೋಟೋವನ್ನು ಹುಟ್ಟಿದ ಕೆಲವೇ ದಿನಗಳಲ್ಲಿ ಜಗತ್ತಿಗೆ ಪರಿಚಯಿಸಿದ್ದರು. ಜೊತೆಗೆ ಮಗುವಿನ ಹೆಸರು 'ಕೋವಾ ಫೀನಿಕ್ಸ್​ ಡೋಲನ್​' ಎಂಬುದಾಗಿ ತಿಳಿಸಿದ್ದರು.

ಇದನ್ನೂ ಓದಿ:'ಆಕೆ ಅತ್ಯುತ್ತಮ ನಟಿ, ಕೆಲಸದ ವಿಚಾರದಲ್ಲಿ ತುಂಬಾ ಪ್ರಾಮಾಣಿಕಳು': ಕಂಗನಾರನ್ನು ಹಾಡಿ ಹೊಗಳಿದ ಅನುರಾಗ್​ ಕಶ್ಯಪ್​

ABOUT THE AUTHOR

...view details