ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 56ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ಕಿಲಾಡಿ ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್ ಕೊಟ್ಟಿದ್ದಾರೆ. ಹೌದು, ವೆಲ್ಕಮ್ ಟು ದಿ ಜಂಗಲ್ ಅನೌನ್ಸ್ಮೆಂಟ್ ಟೀಸರ್ ಅನಾವರಣಗೊಳಿಸಿದ್ದಾರೆ. ವೆಲ್ಕಮ್ 3 ಚಿತ್ರದ ಶೀರ್ಷಿಕೆ.
ಬಿಗ್ ಸ್ಟಾರ್ ಕಾಸ್ಟ್:ಬಹುನಿರೀಕ್ಷಿತ ಸಿನಿಮಾ 'ವೆಲ್ಕಮ್ 3' ಬಹುದೊಡ್ಡ ತಾರಾಗಣ ಹೊಂದಿದೆ. ಅಕ್ಷಯ್ ಕುಮಾರ್ ಜೊತೆ ರವೀನಾ ಟಂಡನ್, ದಿಶಾ ಪಟಾನಿ, ಲಾರಾ ದತ್ತಾ, ಜಾಕ್ವೆಲಿನ್ ಫರ್ನಾಂಡಿಸ್, ಸುನೀಲ್ ಶೆಟ್ಟಿ, ಸಂಜಯ್ ದತ್, ಪರೇಶ್ ರಾವಲ್, ಶ್ರೇಯಸ್ ತಲ್ಪಾಡೆ, ಅರ್ಶದ್ ವಾರ್ಸಿ, ತುಷಾರ್ ಕಪೂರ್, ರಾಜ್ಪಾಲ್ ಯಾದವ್, ಜಾನಿ ಲಿವರ್, ಕಿಕು ಶಾರ್ದಾ, ಕೃಷ್ಣ ಅಭಿಷೇಕ್, ಗಾಯಕರಾದ ದಲೆರ್ ಮೆಹಂದಿ, ಮಿಕಾ ಸಿಂಗ್ ಅಭಿನಯಿಸಲಿದ್ದಾರೆ.
ವೆಲ್ಕಮ್ ಟು ದ ಜಂಗಲ್ ರಿಲೀಸ್ ಡೇಟ್:ಇನ್ಸ್ಟಾಗ್ರಾಮ್ನಲ್ಲಿ ನಟ ಅಕ್ಷಯ್ ಕುಮಾರ್ ಅತ್ಯಂತ ಮನರಂಜನಾತ್ಮಕ ಟೀಸರ್ ಅನ್ನು ಶೇರ್ ಮಾಡಿದ್ದಾರೆ. ''ಇಂದು ನನಗೂ ಮತ್ತು ನಿಮಗೂ ಬರ್ತ್ಡೇ ಗಿಫ್ಟ್ ಕೊಟ್ಟಿದ್ದೇನೆ. ನಿಮಗೆ ಇಷ್ಟವಾದರೆ ಧನ್ಯವಾದ ತಿಳಿಸಿ. ನಾನು ವೆಲ್ಕಮ್ ಹೇಳುತ್ತೇನೆ. 2024ರ ಕ್ರಿಸ್ಮಸ್ ಸಂದರ್ಭ ಡಿಸೆಂಬರ್ 20ರಂದು ಚಿತ್ರ ಮಂದಿರಗಳಲ್ಲಿ ವೆಲ್ಕಮ್ ಟು ದ ಜಂಗಲ್ / ವೆಲ್ಕಮ್ 3 ರಿಲೀಸ್ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ.
ವೆಲ್ಕಮ್ ಕುರಿತು..ವೆಲ್ಕಮ್ ಟು ದ ಜಂಗಲ್ ಸಿನಿಮಾವನ್ನು ಜ್ಯೋತಿ ದೇಶ್ಪಾಂಡೆ, ಫಿರೋಜ್ ನಾಡಿಯಾಡ್ವಾಲ ನಿರ್ಮಾಣ ಮಾಡಲಿದ್ದಾರೆ. ಅಹಮದ್ ಖಾನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 20 ವರ್ಷಗಳ ಬ್ರೇಕ್ ಬಳಿಕ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. 2004ರಲ್ಲಿ ತೆರೆಕಂಡು ಹಿಟ್ ಆದ 'ಪೊಲೀಸ್ ಫೋರ್ಸ್: ಆ್ಯನ್ ಇನ್ಸೈಡ್ ಸ್ಟೋರಿ' ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿದ್ದರು.
ಇದನ್ನೂ ಓದಿ:ಜನ್ಮದಿನದ ಸಂಭ್ರಮದಲ್ಲಿ ಬಾಲಿವುಡ್ ಕಿಲಾಡಿ: ಅಭಿಮಾನಿಗಳ ಹೃದಯ ಗೆದ್ದ ಅಕ್ಷಯ್ ಕುಮಾರ್ ಸಿನಿಮಾಗಳಿವು!
ವೆಲ್ಕಮ್ ಟು ಜಂಗಲ್ ಅನೌನ್ಸ್ಮೆಂಟ್ ಟೀಸರ್ ಬಹಳ ಮನರಂಜನಾತ್ಮಕವಾಗಿದೆ. ಹೊಟ್ಟೆ ಹುಣ್ಣಾಗುವಷ್ಟು ನಿಮ್ಮನ್ನು ನಗಿಸಲಿದೆ. ಮಿಲಿಟರಿ ಯೂನಿಫಾರ್ಮ್ ತೊಟ್ಟು, ಬಂದೂಕು ಹಿಡಿದ ಇಡೀ ಸ್ಟಾರ್ ಟೀಮ್ ಮೂರು ಸಾಲುಗಳಲ್ಲಿ ನಿಂತಿರುವ ದೃಶ್ಯದಿಂದ ಟೀಸರ್ ಶುರುವಾಗಲಿದೆ. ಹಾಸ್ಯಮಯವಾಗಿ ವೆಲ್ಕಮ್ 3 ಥೀಮ್ ಸಾಂಗ್ ಶುರು ಹಚ್ಚಿಕೊಳ್ಳುತ್ತಾರೆ. ಸ್ಟಾರ್ಸ್ ನಡು ನಡುವೆ ಒಬ್ಬರನ್ನೊಬ್ಬರು ಅಡ್ಡಿಪಡಿಸುತ್ತಾರೆ. ಹೀಗೆ ಹಾಡು ಮತ್ತು ಮಾತುಗಳು ಮುಂದುವರಿಯುತ್ತದೆ. ಆ ಸಂದರ್ಭ ನಟ ಅಕ್ಷಯ್ ಕುಮಾರ್ ಅವರು ತಮ್ಮನ್ನು ಮತ್ತು ನಟಿ ರವೀನಾ ಟಂಡನ್ ಅವರನ್ನು ''ಪುರಾನೆ ಚಾವಲ್'' ಎಂದು ಉಲ್ಲೇಖಿಸಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವರು ಇದನ್ನು ಮನರಂಜನೆಯಾಗಿ ಸ್ವೀಕರಿಸಿದರೆ, ಕೆಲವರು ನಟ ನಟಿಯ ಹಳೇ ವಿಚಾರವನ್ನು ಎತ್ತಿದ್ದಾರೆ.
ಇದನ್ನೂ ಓದಿ:ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿಯಲ್ಲಿ ಭಾಗಿಯಾದ ಅಕ್ಷಯ್ ಕುಮಾರ್, ಶಿಖರ್ ಧವನ್