ಕರ್ನಾಟಕ

karnataka

ETV Bharat / entertainment

'ಕಾಲ್​ಕೂಟ್​' ಸ್ಕ್ರೀನಿಂಗ್​: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಲವ್ ಬರ್ಡ್ಸ್​ ತಮನ್ನಾ- ವಿಜಯ್​ - ಈಟಿವಿ ಭಾರತ ಕನ್ನಡ

Kaalkoot screening: ವಿಜಯ್​ ವರ್ಮಾ ಅವರ ಮುಂಬರುವ ವೆಬ್​ಸಿರೀಸ್​ 'ಕಾಲ್​ಕೂಟ್​' ಸ್ಕ್ರೀನಿಂಗ್​ ಈವೆಂಟ್​ಗೆ ತಮನ್ನಾ ಕೂಡ ಹಾಜರಾಗಿದ್ದರು.

Vijay Varma and Tamannaah Bhatia
ವಿಜಯ್​ ವರ್ಮಾ ಮತ್ತು ತಮನ್ನಾ ಭಾಟಿಯಾ

By

Published : Aug 1, 2023, 4:29 PM IST

ಬಹುಭಾಷಾ ತಾರೆ ತಮನ್ನಾ ಭಾಟಿಯಾ ಮತ್ತು ನಟ ವಿಜಯ್​ ವರ್ಮಾ ನಡುವಿನ ಸಂಬಂಧ ಈಗಾಗಲೇ ಅಧಿಕೃತಗೊಂಡಿದೆ. ಇಬ್ಬರು ಪ್ರೀತಿಸುತ್ತಿರುವುದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ಜೋಡಿ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸುವ ಮೊದಲು ಅವರ ರಿಲೇಷನ್​ಶಿಪ್​ ಬಗ್ಗೆ ಕೆಲ ವದಂತಿಗಳಿದ್ದವು. ಸದ್ಯ ಈ ಬ್ಯೂಟಿಫುಲ್​ ಕಪಲ್​ ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ಸಂದರ್ಭಗಳಲ್ಲಿ ಪರಸ್ಪರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದೀಗ, ವಿಜಯ್​ ವರ್ಮಾ ಅವರ ಮುಂಬರುವ ವೆಬ್​ಸಿರೀಸ್​ 'ಕಾಲ್​ಕೂಟ್​' ಸ್ಕ್ರೀನಿಂಗ್​ ಈವೆಂಟ್​ಗೆ ತಮನ್ನಾ ಕೂಡ ಹಾಜರಾಗಿದ್ದರು. ವಿಜಯ್​ ಮತ್ತು ತಮನ್ನಾ ಅವರು ಪಾಪರಾಜಿಗಳಿಗೆ ಪೋಸ್ ಕೊಡುತ್ತಿರುವ ವೇಳೆ ಸಂತೋಷದಿಂದ ಹೊಳೆಯುತ್ತಿದ್ದರು. ಪಾಪರಾಜಿಗಳು ಅವರಿಬ್ಬರನ್ನು ಕಾಲೆಳೆದರು. ಈ ವೇಳೆ ಸುಂದರ ಜೋಡಿ ನಾಚಿಕೆಯೊಂದಿಗೆ ಚಂದನೆಯ ನಗು ಬೀರಿದರು. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಅನೇಕರ ಹೃದಯ ಗೆದ್ದಿದೆ.

ಗೆಳೆಯನ 'ಕಾಲ್​ಕೂಟ್​' ಸ್ಕ್ರೀನಿಂಗ್​ ಈವೆಂಟ್​ಗೆ ತಮನ್ನಾ ಗುಲಾಬಿ ಬಣ್ಣದ ಜಾಕೆಟ್​ನೊಂದಿಗೆ ಬಿಳಿ ಬಣ್ಣದ ಟ್ಯಾಂಕ್​ ಟಾಪ್​ ಧರಿಸಿದ್ದರು. ಅದಕ್ಕೆ ಹೊಂದುವಂತಹ ಪ್ಯಾಂಟ್​ ಅನ್ನು ಆಯ್ದುಕೊಂಡಿದ್ದರು. ಸಿಂಪಲ್ಲಾಗಿ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದರು.​ ಇನ್ನೂ, ವಿಜಯ್​ ವರ್ಮಾ ಅವರು ನೀಲಿ ಬಣ್ಣದ ಜಾಕೆಟ್​ಗೆ ಬಿಳಿ ಬಣ್ಣದ ಶರ್ಟ್​ ಮತ್ತು ಮ್ಯಾಚಿಂಗ್​ ಪ್ಯಾಂಟ್​ ಜೊತೆ ಆಕರ್ಷಕವಾಗಿ ಕಂಡರು. ಇವರಿಬ್ಬರ ಅದ್ಭುತ ನೋಟ ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಇನ್ನು ತಮನ್ನಾ ಮತ್ತು ವಿಜಯ್​ ನಡುವಿನ ಪ್ರೀತಿ ಸುಜಯ್​ ಘೋಷ್​ ನಿರ್ದೇಶನದ 'ಲಸ್ಟ್​ ಸ್ಟೋರಿಸ್​ 2' ಸೆಟ್​ನಲ್ಲಿ ಹುಟ್ಟಿಕೊಂಡಿತು. ಗೋವಾದಲ್ಲಿ ನಡೆದ ನ್ಯೂ ಇಯರ್​ ಪಾರ್ಟಿಯಲ್ಲಿ ಪರಸ್ಪರ ಚುಂಬನದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವವರೆಗೆ ಈ ಜೋಡಿ ತಮ್ಮ ವಿಚಾರವನ್ನು ಮರೆಮಾಚಿದ್ದರು. ಈ ಚಿತ್ರ ಬಹಿರಂಗಗೊಂಡ ಬಳಿಕ ಇವರಿಬ್ಬರ ನಡುವಿನ ಸಂಬಂಧದ ಕುರಿತು ಹಲವು ಊಹಾಪೋಹಗಳು ಎದ್ದವು. ಇವರಿಬ್ಬರ ಆತ್ಮೀಯ ದೃಶ್ಯಗಳು ತೆರೆ ಮೇಲೆ ಮೋಡಿ ಮಾಡಿದವು.

ನಂತರದಲ್ಲಿ ಈ ಜೋಡಿ ಸಿನಿಮಾ ಮತ್ತು ಡಿನ್ನರ್​ ಡೇಟ್​ಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಮತ್ತೊಂದು ಮುಖ್ಯ ವಿಚಾರವೆಂದರೆ, ನಟಿ ತಮನ್ನಾ ತಮ್ಮ 17 ವರ್ಷದ ಸಿನಿ ಜೀವನದಲ್ಲಿ ನೋ ಕಿಸ್ಸಿಂಗ್​ ಪಾಲಿಸಿಯನ್ನು ಅಂದರೆ, ತೆರೆ ಮೇಲೆ ನಟರಿಗೆ ಮುತ್ತಿಕ್ಕುವ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದರು. ಆದರೆ, ಲಸ್ಟ್​​ ಸ್ಟೋರಿಸ್​ನಲ್ಲಿ ಅವರು ತಮ್ಮ ಈ ನಿಯಮವನ್ನು ಮುರಿದು, ತೆರೆ ಮೇಲೆ ಮೊದಲ ಬಾರಿಗೆ ನಟ ವಿಜಯ್​ ಅವರಿಗೆ ಮುತ್ತಿಕ್ಕಿದ್ದರು.

'ಕಾಲ್​ಕೂಟ್​' ವೆಬ್​ಸಿರೀಸ್​ನಲ್ಲಿ ವಿಜಯ್ ವರ್ಮಾ, ಶ್ವೇತಾ ತ್ರಿಪಾಠಿ, ಸೀಮಾ ಬಿಸ್ವಾಸ್, ಯಶಪಾಲ್ ಶರ್ಮಾ ಮತ್ತು ಗೋಪಾಲ್ ದತ್ ನಟಿಸಿದ್ದಾರೆ. ಇದು ಸುಮಿತ್ ಸಕ್ಸೇನಾ ನಿರ್ದೇಶಿಸಿದ ಕ್ರೈಮ್​ ವೆಬ್​ ಸಿರೀಸ್​ ಆಗಿದೆ. ವಿಜಯ್​ ವರ್ಮಾ ಅವರು ಪೊಲೀಸ್​ ಅಧಿಕಾರಿಯಾಗಿ ನಟಿಸಿದ್ದಾರೆ. ಕಥೆ ಕೂಡ ಅವರ ಸುತ್ತ ಸುತ್ತುತ್ತದೆ. ಜುಲೈ 27 ರಿಂದ JioCinema (ಜಿಯೋ ಸಿನಿಮಾ) ನಲ್ಲಿ ಈ ಸರಣಿಯು ಸ್ಟ್ರೀಮಿಂಗ್ ಆಗಲಿದೆ.

ಇದನ್ನೂ ಓದಿ:RARKPK: ನಾಲ್ಕೇ ದಿನದಲ್ಲಿ ₹50 ಕೋಟಿ ಬಾಚಿದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'

ABOUT THE AUTHOR

...view details