ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ನಟನೆಯ 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದೆ. ಈ ಚಿತ್ರವು ತನ್ನ ಎರಡನೇ ವಾರಾಂತ್ಯದಲ್ಲಿ 15 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಸಿನಿಮಾವು 50 ಕೋಟಿ ಗಡಿ ದಾಟಿದೆ. ಸಾಧಾರಣ ಬಜೆಟ್ನಲ್ಲಿ ಸಿದ್ಧಗೊಂಡ ಈ ಚಿತ್ರ ಅನಿರೀಕ್ಷಿತವಾಗಿ ಉತ್ತಮ ಕಲೆಕ್ಷನ್ ಮಾಡಿದೆ. ಈ ಯಶಸ್ಸನ್ನು ಚಿತ್ರತಂಡ ಪಾರ್ಟಿ ಆಯೋಜಿಸುವ ಮೂಲಕ ಸಂಭ್ರಮಿಸಿದೆ.
ವಿಕ್ಕಿ ಮತ್ತು ಸಾರಾ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಮತ್ತು ನಿರ್ಮಾಪಕ ದಿನೇಶ್ ವಿಜನ್ ಜೊತೆಗೂಡಿ ಗ್ರ್ಯಾಂಡ್ ಪಾರ್ಟಿ ಮಾಡಿದ್ದಾರೆ. ವಿಕ್ಕಿ ಟ್ರ್ಯಾಕ್ ಪ್ಯಾಂಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದರು. ಸಾರಾ ಬಿಳಿ ಟೀ ಶರ್ಟ್ ಮತ್ತು ನೀಲಿ ಪ್ಯಾಂಟ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದರು. ಅವರಿಬ್ಬರ ಟೀ ಶರ್ಟ್ ಮೇಲೆ ಜರಾ ಹಟ್ಕೆ ಜರಾ ಬಜ್ಕೆ ಎಂದು ಬರೆಯಲಾಗಿದೆ.
ಕೃತಿ ಸನೋನ್, ತಮನ್ನಾ ಭಾಟಿಯಾ ಮತ್ತು ಶಾಮ್ ಕೌಶಲ್ ಸಹ ಪಾರ್ಟಿಯಲ್ಲಿ ಭಾಗವಹಿಸಿದ್ದರು. ದಿನೇಶ್ ವಿಜನ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದಕ್ಕಾಗಿ ಕೃತಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ಕೃತಿಯ ಮಿಮಿ ಸಿನಿಮಾ ಸಿನಿಮಾವನ್ನು ನಿರ್ದೇಶಿಸಿದ್ದರು. ಇದು ಅವರಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿತು. ಹೀಗಾಗಿ ಪಾರ್ಟಿಗೆ ಕೃತಿ ಸನೋನ್ಗೆ ವಿಶೇಷ ಆಹ್ವಾನ ನೀಡಲಾಗಿತ್ತು.
ಕೃತಿ ಅವರು ಪಾರ್ಟಿಗೆ ಆಗಮಿಸುತ್ತಿದ್ದಂತೆ ವಿಕ್ಕಿ ಆಲಿಂಗನ ಮಾಡುವ ಮೂಲಕ ಅವರನ್ನು ಸ್ವಾಗತಿಸಿದರು. ಆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಕ್ಕಿ ತಂದೆ ಶಾಮ್ ಕೌಶಲ್ ಕೂಡ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಟಿ ತಮನ್ನಾ ಭಾಟಿಯಾ ಕಪ್ಪು ಗೌನ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅವರು ತಮ್ಮ ಮುಂದಿನ ಚಿತ್ರ 'ಜೀ ಕರ್ದಾ' ತಂಡದ ಜೊತೆ ಕಾಣಿಸಿಕೊಂಡರು. ಶ್ರೀರಾಮ್ ರಾಘವನ್ ಮತ್ತು ವರುಣ್ ಶರ್ಮಾ ಸೇರಿದಂತೆ ಇತರರು ಕೂಡ ಭಾಗವಹಿಸಿದ್ದರು.
'ಜರಾ ಹಟ್ಕೆ ಜರಾ ಬಚ್ಕೆ' ಜೂನ್ 2 ರಂದು ಬಿಡುಗಡೆಯಾಯಿತು. ಸಿನಿಮಾ ಕಥೆಯು ಇಂದೋರ್ನಲ್ಲಿ ನಡೆಯುತ್ತದೆ. ಇದರಲ್ಲಿ ಇಬ್ಬರು ಕಾಲೇಜು ಪ್ರೇಮಿಗಳ ಕಥೆಯನ್ನು ಹೇಳಲಾಗಿದೆ. ಒಬ್ಬರನೊಬ್ಬರು ಹುಚ್ಚರಂತೆ ಪ್ರೀತಿಸುತ್ತಾರೆ. ಆದರೆ ಖಾಸಗಿ ಸಮಯ ಹೊಂದಲು ವಿಚ್ಛೇದನದ ನಾಟಕವಾಡುತ್ತಾರೆ. ವಿಕ್ಕಿ ಕೌಶಲ್ ಮತ್ತು ಸಾರಾ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರವು ದೇಶಿಯ ಬಾಕ್ಸ್ ಆಪೀಸ್ನಲ್ಲಿ ಒಟ್ಟು 56.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೋಮವಾರವು ಚಿತ್ರ 2.70 ಕೋಟಿ ರೂ. ಗಳಿಸಿದೆ. ಈ ವಾರಾಂತ್ಯದಲ್ಲಿ 60 ಕೋಟಿ ರೂ. ದಾಟುವ ನಿರೀಕ್ಷೆಯಿದೆ.
ವಿಕ್ಕಿ ಕೌಶಲ್ ಮುಂದೆ ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಸಾರಾ, ಹೋಮಿ ಅದಾಜಾನಿಯಾ ನಿರ್ದೇಶನದ ಮರ್ಡರ್ ಮುಬಾರಕ್ ಮತ್ತು ಏ ವತನ್ ಮೇರೆ ವತನ್‌ನಲ್ಲಿ ನಟಿಸಲಿದ್ದಾರೆ. ಜೊತೆಗೆ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಮೆಟ್ರೋ ಇನ್ ಡಿನೋದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:Raj Cup 2023: ಮತ್ತೆ ಶುರುವಾಗಲಿದೆ ಸಿನಿತಾರೆಗಳ ಕ್ರಿಕೆಟ್ ಹಬ್ಬ; ಶೀಘ್ರದಲ್ಲೇ ಡಾ.ರಾಜ್ ಕಪ್ ಟೂರ್ನಿ