ಕರ್ನಾಟಕ

karnataka

ETV Bharat / entertainment

ಪಾಕಿಸ್ತಾನದಲ್ಲಿ ಶಾರುಖ್​ ಖಾನ್​ ಅಭಿಮಾನಿಯ ಅಭಿಮಾನ..! ರಾವಲ್ಪಿಂಡಿ ಎಕ್ಸ್‌ಪ್ರೆಸ್ ಪ್ರತಿಕ್ರಿಯೆ ಹೀಗಿದೆ - watch shoaib akhtars rendezvous with shah rukh

ಬಾಲಿವುಡ್ ನಟನ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಪಾಕ್​ ಅಭಿಮಾನಿಯೊಬ್ಬ ಶಾರುಖ್​ ಖಾನ್​ ಅವರ ಡೈಲಾಗ್​ ಹೇಳಿ ಗಮನ ಸೆಳೆದಿದ್ದಾರೆ. ಮಾಜಿ ವೇಗಿ ಶೋಯೆಬ್ ಅಖ್ತರ್ ತಮ್ಮ ಟ್ವಿಟರ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

Watch: Shoaib Akhtar's rendezvous with 'Shah Rukh Khan' in Pakistan
Watch: Shoaib Akhtar's rendezvous with 'Shah Rukh Khan' in Pakistan

By

Published : Nov 8, 2022, 3:30 PM IST

Updated : Nov 8, 2022, 3:37 PM IST

ಹೈದರಾಬಾದ್:ಪಾಕ್​ ಅಭಿಮಾನಿಯೊಬ್ಬ ಬಾಲಿವುಡ್​ ನಟ ಶಾರುಖ್ ಖಾನ್ ಅವರ ಡೈಲಾಗ್​ ಹೇಳುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾನೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್​​ ಇತ್ತೀಚೆಗೆ ನಡೆದ ನೆದರ್​​ಲ್ಯಾಂಡ್​ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್​ ಪಂದ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂವಾದ ನಡೆಸುತ್ತಿದ್ದರು. ಈ ವೇಳೆ, ಫರ್ಹಾನ್ ಎಂಬ ಪಾಕ್​ ಅಭಿಮಾನಿ ಶಾರುಖ್ ಖಾನ್ ಡೈಲಾಗ್​ ಹೇಳಿ ಅಭಿಮಾನ ಮೆರೆದಿದ್ದಾನೆ. ಸದ್ಯ ವಿಡಿಯೋವನ್ನು ಶೋಯೆಬ್ ಅಖ್ತರ್​​ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದು, ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಯೂಟ್ಯೂಬ್ ಚಾನೆಲ್ ಹೊಂದಿರುವ ಅಖ್ತರ್ ಆಗಾಗ ಕ್ರಿಕೆಟ್​ ಬಗ್ಗೆ ವಿವರಣೆ ಮತ್ತು ವಿಶ್ಲೇಷಣೆ ನೀಡುತ್ತಿರುತ್ತಾರೆ. ಇತ್ತೀಚೆಗೆ ನಡೆದ ರೋಚಕ ಘಟ್ಟಕ್ಕೆ ತಲುಪಿದ್ದ ನೆದರ್​ಲ್ಯಾಂಡ್​ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದ ಬಗ್ಗೆ ಹಾಗೂ ಸೋಲು ಮತ್ತು ಗೆಲುವಿನ ಬಳಿಕ ಸೆಮಿಫೈನಲ್​ ತಲುಪಿರುವ ಪಾಕ್​ ತಂಡದ ಬಗ್ಗೆ ಕಾರಿನಲ್ಲಿ ಕುಳಿತು ಕೆಲವು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು.

ಈ ವೇಳೆ ಅಲ್ಲಿ ಸೇರಿದ್ದ ಪಾಕ್​ ಕ್ರಿಕೆಟ್​ ಅಭಿಮಾನಿಗಳ ಸಲಹೆಯನ್ನು ಪಡೆಯುವಂತೆ ಪಾಕ್​ ತಂಡಕ್ಕೆ ಅಖ್ತರ್ ಮನವಿ ಮಾಡಿದರು. ಕೆಲವರು ತಮ್ಮ ತಮ್ಮ ಅನಿಸಿಕೆ ಹೇಳಿ ಹಿಂದೆ ಸರಿದರು. ಬಳಿಕ ಶಾರುಖ್ ಖಾನ್​ ಅಭಿಮಾನಿ ಎಂದು ಹೇಳಿಕೊಂಡು ಬಂದ ಫರ್ಹಾನ್, ಮೊಹಬ್ಬತ್ ಚಿತ್ರದ ಡೈಲಾಗ್​ ಹೇಳಿ ಅಖ್ತರ್ ಸೇರಿದಂತೆ ಅಲ್ಲಿದ್ದವರನ್ನು ಗಮನ ಸೆಳೆದರು.

ಡೈಲಗ್​ ಸ್ವಲ್ಪ ದೊಡ್ಡದಾಗಿದ್ದರಿಂದ ಮಧ್ಯ ಪ್ರವೇಶ ಮಾಡಿದ ಅಖ್ತರ್ 'ಬೇಟಾ, ಶಾರುಖ್ ಖಾನ್ ಹೈ, ಇತ್ನೆ ಲಂಬೇ ಡೈಲಾಗ್ ನಹೀ ಬೋಲ್ತಾ, (ಹುಡುಗ, ಶಾರುಖ್ ಖಾನ್ ಅಷ್ಟು ಉದ್ದವಾದ ಡೈಲಾಗ್ ಹೇಳುವುದಿಲ್ಲ) ಎಂದು ಅವರ ಅಭಿಮಾನಕ್ಕೆ ನಸುನಕ್ಕಿದ್ದಾರೆ. ಅಖ್ತರ್​​ ತಮ್ಮ ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಹನ ನಡೆಸುವ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿಯೂ ಸಾಧಿಸದ ದಾಖಲೆ ಬರೆದ ಸೂರ್ಯಕುಮಾರ್​​​.. ಏನದು?


Last Updated : Nov 8, 2022, 3:37 PM IST

ABOUT THE AUTHOR

...view details