ಕರ್ನಾಟಕ

karnataka

ETV Bharat / entertainment

ಪಠಾಣ್​ ಹಾಡಿಗೆ ಶಾರುಖ್​ ಜೊತೆ ವರುಣ್​, ರಣವೀರ್​ ಡ್ಯಾನ್ಸ್​ - ಈಟಿವಿ ಭಾರತ ಕನ್ನಡ

ಎನ್​ಎಂಎಸಿಸಿ ಸಮಾರಂಭದಲ್ಲಿ ಪಠಾಣ್​ ಹಾಡಿಗೆ ಶಾರುಖ್​ ಖಾನ್​ ಜೊತೆ ವರಣ್​ ಧವನ್​ ಮತ್ತು ರಣವೀರ್​ ಸಿಂಗ್​ ಸ್ಟೆಪ್​ ಹಾಕಿದರು.

NMACC Day 2
ಎನ್​ಎಂಎಸಿಸಿ

By

Published : Apr 2, 2023, 1:17 PM IST

ರಿಲಯನ್ಸ್​ ಫೌಂಡೇಶನ್​ ಅಧ್ಯಕ್ಷೆ ನೀತಾ ಅಂಬಾನಿ ನೇತೃತ್ವದ ಎನ್​ಎಂಎಸಿಸಿ ಸಮಾರಂಭದ ಎರಡನೇ ದಿನವಾದ ನಿನ್ನೆ ಬಾಲಿವುಡ್​ ಸ್ಟಾರ್​ಗಳು ವಿಶೇಷವಾಗಿ ಗಮನ ಸೆಳೆದರು. ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ತಮ್ಮ ಸೂಪರ್​ ಹಿಟ್​ ಚಿತ್ರ ಪಠಾಣ್​ನ ಜೂಮೇ ಜೋ ಪಠಾಣ್​ ಹಾಡಿಗೆ ಡ್ಯಾನ್ಸ್​ ಮಾಡಿದರು. ಅವರ ಜೊತೆ ನಟರಾದ ರಣವೀರ್​ ಸಿಂಗ್​ ಮತ್ತು ವರುಣ್​ ಧವನ್​ ಸೇರಿಕೊಂಡರು. ಕಿಂಗ್​ ಖಾನ್​ ಡ್ಯಾನ್ಸ್​ ಮಾಡುತ್ತಿದ್ದಂತೆ ಉಳಿದ ನಟರಿಬ್ಬರು ಅವರೊಂದಿಗೆ ಸ್ಟೆಪ್​ ಹಾಕಿದರು.

ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದ ಸೆಲೆಬ್ರಿಟಿಗಳು, ಪ್ರೇಕ್ಷಕರು ಬೊಬ್ಬೆ ಹೊಡೆದು ಸಂಭ್ರಮಿಸಿದರು. ಈ ವಿಡಿಯೋವನ್ನು ಪಾಪರಾಜಿಯೊಬ್ಬರು ಶೇರ್​ ಮಾಡಿಕೊಂಡಿದ್ದು, ವೈರಲ್​ ಆಗಿದೆ. ಈವೆಂಟ್​ಗೆ ಶಾರುಖ್​ ಖಾನ್​ ಕಪ್ಪು ಕೋಟ್​ ಮತ್ತು ಮ್ಯಾಚಿಂಗ್​ ಪ್ಯಾಂಟ್​ ಧರಿಸಿ ಬಂದಿದ್ದರು. ವರುಣ್​ ಧವನ್​ ಬಿಳಿ ಟಿ-ಶರ್ಟ್​ ಮತ್ತು ಕಪ್ಪು ಜೀನ್ಸ್​ ಧರಿಸಿದ್ದರೆ, ರಣವೀರ್​ ಚಾರ್ಕೋಲ್​ ವೆಸ್ಟ್​ ಮತ್ತು ಕಪ್ಪು ಪ್ಯಾಂಟ್​ ತೊಟ್ಟಿದ್ದರು.

ರಣವೀರ್​- ಪ್ರಿಯಾಂಕಾ ಡ್ಯಾನ್ಸ್​: ರಣವೀರ್​ ಸಿಂಗ್​ ಮತ್ತು ಬಾಲಿವುಡ್​ ದೇಸಿ ಗರ್ಲ್​ ಪ್ರಿಯಾಂಕಾ ಚೋಪ್ರಾ ಜೊತೆಯಾಗಿ ಡ್ಯಾನ್ಸ್​ ಮಾಡಿದರು. ರಣವೀರ್ ವೇದಿಕೆಯಲ್ಲಿ​ ಕುಣಿಯುತ್ತಿದ್ದ ವೇಳೆ ಮುಂಭಾಗದಲ್ಲಿ ನಿಂತಿದ್ದ ಪ್ರಿಯಾಂಕಾರನ್ನು ನಟ ವೇದಿಕೆಗೆ ಕರೆದುಕೊಂಡರು. ಬಳಿಕ ಅವರಿಬ್ಬರು ಜೊತೆಯಾಗಿ ನಟಿಸಿದ 2015 ರಲ್ಲಿ ಸೂಪರ್​ ಹಿಟ್​ ಕಂಡಿದ್ದ 'ದಿಲ್​ ಧಡಕ್ನೇ ದೋ' ಸಿನಿಮಾದ ಹಾಡಿಗೆ ಡ್ಯಾನ್ಸ್​ ಮಾಡಿದರು. ಇವರು ಕುಣಿಯುವುದನ್ನು ನಿಲ್ಲಿಸುತ್ತಿದ್ದಂತೆ ಪ್ರೇಕ್ಷಕರು ಒನ್ಸ್​ ಮೋರ್​ ಹೇಳಲು ಶುರು ಮಾಡಿದರು. ಮತ್ತೊಮ್ಮೆ ಅವರನ್ನು ಜೊತೆಯಾಗಿ ಸ್ಟೇಜ್​ ಮೇಲೆ ನೋಡಲು ಬಯಸಿದರು.

ಇದನ್ನೂ ಓದಿ:'ಯಶ್​ ಸಿನಿಮಾ ಅಪ್​ಡೇಟ್​ ನೀಡಿಲ್ಲಾಂದ್ರೆ ಸ್ಟ್ರೈಕ್​': ರಾಧಿಕಾಗೆ ಫ್ಯಾನ್ಸ್​ ಆವಾಜ್​

ಗಿಗಿ ಹಡಿಡ್​ ಅವರನ್ನು ಎತ್ತಿಕೊಂಡ ವರುಣ್​: ಸೂಪರ್​ ಮಾಡೆಲ್​ ಗಿಗಿ ಹಡಿದ್​ ಅವರನ್ನು ನಟ ವರುಣ್​ ಧವನ್​ ಸ್ಟೇಜ್​ ಮೇಲೆ ಕರೆತಂದು ತಮ್ಮ ತೋಳುಗಳಲ್ಲಿ ಎತ್ತಿಕೊಂಡರು. ಬಳಿಕ ಅವರನ್ನು ಒಂದು ಸುತ್ತು ಸುತ್ತಿಸಿ ಕಿಸ್​ ಕೊಟ್ಟು ಕೆಳಗೆ ಇಳಿಸಿಬಿಟ್ಟರು. ಇದು ಅಲ್ಲಿದ್ದವರನ್ನು ಒಂದು ಕ್ಷಣ ಬೆರಗುಗೊಳಿಸುವಂತೆ ಮಾಡಿತು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ:ಸುದೀಪ್ ಮುಂದಿನ ಸಿನಿಮಾ ಯಾವುದು?: ಕಿಚ್ಚನ ಸ್ಪಷ್ಟೀಕರಣ ಹೀಗಿದೆ..

ರಶ್ಮಿಕಾ, ಆಲಿಯಾ ಡ್ಯಾನ್ಸ್​:ನಟಿಯರಾದ ಆಲಿಯಾ ಭಟ್​ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಜೊತೆಯಾಗಿ ಡ್ಯಾನ್ಸ್​ ಮಾಡಿದರು. ಆಸ್ಕರ್​ ಪ್ರಶಸ್ತಿ ವಿಜೇತ ನಾಟು ನಾಟು ಹಾಡಿಗೆ ತಾರೆಯರು ಕುಣಿದರು. ರಶ್ಮಿಕಾ ಮಂದಣ್ಣ ಸ್ಟೈಲಿಶ್​ ಸೀರೆಯನ್ನು ಉಟ್ಟಿದ್ದು, ಆಲಿಯಾ ಶಾರ್ಟ್​ ಡ್ರೆಸ್​ ಧರಿಸಿದ್ದರು. ವೇದಿಕೆಗೆ ಇಬ್ಬರು ಜೊತೆಯಾಗಿಯೇ ಬಂದು ಕೋ ಡ್ಯಾನ್ಸರ್​ ಜೊತೆ ಡ್ಯಾನ್ಸ್​ ಮಾಡಿದರು. ಇವರ ಜೊತೆಗೆ ಪ್ರೇಕ್ಷಕರು ಕೂಡ ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ:ಶಿವಾಜಿ ಸುರತ್ಕಲ್ 2 ಟ್ರೇಲರ್ ರಿಲೀಸ್: ಹೆಚ್ಚಿದ ಕುತೂಹಲ, ಏ.14ಕ್ಕೆ ಸಿನಿಮಾ ತೆರೆಗೆ

ABOUT THE AUTHOR

...view details