ಕರ್ನಾಟಕ

karnataka

ETV Bharat / entertainment

ಹೆಚ್ಚಿದ 'Jawan' ಚಿತ್ರದ ಕ್ರೇಜ್​​.. ಚಿತ್ರಮಂದಿರದಲ್ಲಿ ಟಿಕೆಟ್​ಗಾಗಿ ಮುಗಿಬಿದ್ದ ಅಭಿಮಾನಿಗಳು - ಜವಾನ್​

ಅಟ್ಲೀ ಕುಮಾರ್ ನಿರ್ದೇಶನದ ಆ್ಯಕ್ಷನ್-ಥ್ರಿಲ್ಲರ್‌ ಜವಾನ್​ ಚಿತ್ರದ ಟಿಕೆಟ್ ಖರೀದಿಸಲು ಶಾರುಖ್ ಖಾನ್ ಅವರ ಅಭಿಮಾನಿಗಳು ಬೆಳಗಿನ ಜಾವ 2 ಗಂಟೆಯಿಂದಲೇ ಮಹಾರಾಷ್ಟ್ರದ ಮಾಲೆಗಾಂವ್‌ ಥಿಯೇಟರ್‌ನ ಹೊರಗೆ ಕಾಯುತ್ತ ನಿಂತ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿದೆ.

Jawan poster
ಜವಾನ್​ ಚಿತ್ರದ ಪೋಸ್ಟರ್​​

By ETV Bharat Karnataka Team

Published : Sep 6, 2023, 12:25 PM IST

ಹೈದರಾಬಾದ್: ಬಾಲಿವುಡ್​ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಜವಾನ್ ಬಿಡುಗಡೆಗೆ ಮುನ್ನವೇ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಹಿಂದೆ ಬಿಡುಗಡೆಯಾದ ಪಠಾಣ್​ ದಾಖಲೆಯನ್ನು ಉಡೀಸ್​ ಮಾಡಲಿದೆ ಎಂದು ವರದಿಯಾಗಿದೆ. ಅಲ್ಲದೇ ಈ ವರ್ಷ ಬಾಲಿವುಡ್‌ನಲ್ಲಿ ಬಿಡುಗಡೆಯಾದ ಸೂಪರ್​ ಹಿಟ್‌ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

10 ಲಕ್ಷ ಸಿನಿಮಾ ಟಿಕೆಟ್‌ ಮಾರಾಟ ನಿರೀಕ್ಷೆ: ಸಿನಿಮಾ ಬಿಡುಗಡೆಗೆ ಕೇವಲ ಒಂದು ದಿನ ಬಾಕಿ ಇದೆ. ಈ ನಡುವೆ ಮುಂಗಡ ಬುಕ್ಕಿಂಗ್ ಆರಂಭವಾಗುತ್ತಿದ್ದಂತೆಯೇ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಚಿತ್ರಮಂದಿರಕ್ಕೆ ಮುಗಿ ಬೀಳುತ್ತಿದ್ದಾರೆ. ಟಿಕೆಟ್ ಖರೀದಿಸಲು ಮಹಾರಾಷ್ಟ್ರದ ಥಿಯೇಟರ್‌ನ ಹೊರಗೆ ಜನಸಂದಣಿ ಕಂಡು ಬಂದಿದೆ. ಟಿಕೆಟ್​ಗಾಗಿ ಶಾರುಖ್ ಖಾನ್ ಅವರ ಅಭಿಮಾನಿಗಳು ಬೆಳಗಿನ ಜಾವ 2 ಗಂಟೆಗೆ ಮಹಾರಾಷ್ಟ್ರದ ಮಾಲೆಗಾಂವ್‌ ಥಿಯೇಟರ್‌ನ ಹೊರಗೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿದೆ.

ಮುಂಗಡ ಕಾಯ್ದಿರಿಸುವಿಕೆ ಮುಗಿಯುವ ಮುನ್ನವೇ ದೇಶದಾದ್ಯಂತ ಸುಮಾರು 10 ಲಕ್ಷ ಸಿನಿಮಾ ಟಿಕೆಟ್‌ಗಳು ಮಾರಾಟವಾಗುವ ನಿರೀಕ್ಷೆಯಿದೆ. ಮುಂಬೈ, ಬಿಹಾರದ ಮೋತಿಹಾರಿ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೇರಿದಂತೆ ಹಲವಾರು ನಗರಗಳು ಎಸ್‌ಆರ್‌ಕೆ ಸಿನಿಪ್ರಿಯರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಚಲನಚಿತ್ರದ ಪ್ರದರ್ಶನವನ್ನು ಬೆಳಗ್ಗೆ 5 ಗಂಟೆಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ:'ಜವಾನ್'​ ಹಿಟ್​ ಆಗೋದು ಪಕ್ಕಾನಾ?​: 10 ವಿಶೇಷ ದಾಖಲೆ ಬರೆಯಲು ಶಾರುಖ್​ ಸಿನಿಮಾ ಸಿದ್ಧ

ಶಾರುಖ್ ಖಾನ್ ಅವರ ಮ್ಯಾಜಿಕ್ ಅನ್ನು ಹಿರಿತೆರೆಯಲ್ಲಿ ವೀಕ್ಷಿಸಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. ಅಟ್ಲೀ ಕುಮಾರ್ ನಿರ್ದೇಶನದ ಈ ಚಿತ್ರದ ಟ್ರೈಲರ್​ನಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವಂತೆ ಅವರ ಹಲವು ಪೋಸ್ಟರ್‌ಗಳು ಹೇಳುತ್ತಿವೆ. ಚಿತ್ರದಲ್ಲಿ ನಟಿ ಪ್ರಿಯಾಮಣಿ, ಗಿರಿಜಾ ಓಕ್, ಸನ್ಯಾ ಮಲ್ಹೋತ್ರಾ, ಲೆಹರ್ ಖಾನ್, ಸಂಜೀತಾ ಭಟ್ಟಾಚಾರ್ಯ ಮತ್ತು ಆಲಿಯಾ ಖುರೇಷಿ ಈ 6 ಮಹಿಳೆಯರ ತಂಡ ಮೆಟ್ರೋವನ್ನು ಹೈಜಾಕ್ ಮಾಡುವುದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಈ ಮಧ್ಯೆ, ನಟ ಶಾರುಖ್​ ಖಾನ್ ಎಕ್ಸ್​ನಲ್ಲಿ ತಮ್ಮ ಇತ್ತೀಚಿನ ಸಂದೇಶದಲ್ಲಿ ಚಿತ್ರವನ್ನು ನೋಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. "ಚಿತ್ರದಲ್ಲಿ ಆನಂದಿಸಲು ಇನ್ನೂ ಹೆಚ್ಚಿನವುಗಳಿವೆ. ಸಹಕರಿಸಿದ ನಮ್ಮ ತಂಡದಲ್ಲಿರುವ ಎಲ್ಲರಿಗೂ ಧನ್ಯವಾದಗಳು" ಎಂದು ಬಾಲಿವುಡ್ ಸೂಪರ್‌ಸ್ಟಾರ್ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸಂಗೀತ ಕಂಪನಿಯು ಹಂಚಿಕೊಂಡ ವಿಡಿಯೋವನ್ನು ಉಲ್ಲೇಖಿಸಿ ಬರೆದಿದ್ದಾರೆ.

ಶಾರುಖ್​ ಪತ್ನಿ ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಜವಾನ್‌ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಹಾಗೂ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ನಾಳೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ:Jawan: ತಿರುಪತಿಯಲ್ಲಿ ಜವಾನ್ ಜೋಡಿ.. ಚಿತ್ರ​ ಬಿಡುಗಡೆಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್, ನಯನತಾರಾ

ABOUT THE AUTHOR

...view details