ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ನಲ್ಲಿ ನಡೆದ 'ಬೇಬಿ' ಸಿನಿಮಾದ ವಿಶೇಷ ಸ್ಕ್ರೀನಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ವಿಜಯ್ ದೇವರಕೊಂಡ ಸಹೋದರ ಆನಂದ್ ಅಭಿನಯದ ಈ ಚಿತ್ರದ ವೀಕ್ಷಣೆಗೆ ಅವರು ಬಂದಿದ್ದಾರೆ. ಚಿತ್ರದಲ್ಲಿ ನಟ ಆನಂದ್ಗೆ ಜೊತೆಯಾಗಿ ವೈಷ್ಣವಿ ಚೈತನ್ಯ ಕಾಣಿಸಿಕೊಂಡಿದ್ದಾರೆ.
ಹೈದರಾಬಾದ್ನಲ್ಲಿ ಪ್ರದರ್ಶನವಾದ ಈ ವಿಶೇಷ ಪ್ರಿಮೀಯರ್ನಲ್ಲಿ ಕಾಣಿಸಿಕೊಂಡ ನಟಿ ಚಿತ್ರ ವೀಕ್ಷಣೆ ಬಳಿಕ ಸ್ವಲ್ಪ ಭಾವನಾತ್ಮಕವಾಗಿ ಕಂಡಿದ್ದಾರೆ. ಬಳಿಕ ಕ್ಯಾಮೆರಾಗೆ ಥಬ್ಸ್ಅಪ್ ಮಾಡಿ ಗಮನಸೆಳೆದಿದ್ದಾರೆ. ಚಿತ್ರ ವೀಕ್ಷಣೆ ಬಳಿಕ ಭಾರಿ ಸೆಕ್ಯೂರಿಟಿ ಸಿಬ್ಬಂದಿ ಜೊತೆ ಹೊರ ನಡೆದ ಅವರು, ಚಿತ್ರದ ಕುರಿತು ಪ್ಯಾಪಾರಾಜಿಗಳು ಪ್ರಶ್ನೆಗೆ ಥಂಬ್ಸ್ ಅಪ್ ತೋರಿಸುವ ಮೂಲಕ ಚಿತ್ರ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರ ವೀಕ್ಷಣೆಗೆ ಬಂದ ಅವರ ಸರಳ ಮತ್ತು ಕ್ಯಾಶುಯಲ್ ಡ್ರೆಸ್ನಲ್ಲಿ ಕಂಡಿದ್ದಾರೆ. ಎಂದಿನಂತೆ ನಗು ತುಂಬಿದ ಮುಖದಲ್ಲಿ ಕಾಣಿಸಿಕೊಂಡರು. ವಿಜಯ್ ದೇವರಕೊಂಡ ಕೂಡ ಥೀಯೆಟರ್ನಲ್ಲಿ ಸಿನಿಮಾ ವೀಕ್ಷಣೆ ಮಾಡಿರುವ ಚಿತ್ರವನ್ನು ಅವರು, ಫೋಟೋವನ್ನು ಹಂಚಿಕೊಂಡಿದ್ದರು. ಸಹೋದರನ ಚಿತ್ರ ಬಿಡುಗಡೆ ಹಿನ್ನೆಲೆ ವಿಜಯ್ ಕೂಡ ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವೀಕ್ಷಣೆ ಬಳಿಕ ಮಾತನಾಡಿರುವ ಆತ, ಬೇಬಿ ಚಿತ್ರದ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ. ಮೊಟ್ಟ ಮೊದಲಿಗೆ ಚಿತ್ರದ ಪ್ರೀಮಿಯರ್ ವೀಕ್ಷಣೆಗೆ ಬಂದವರಿಗೆ ಧನ್ಯವಾದ ತಿಳಿಸುತ್ತೇವೆ ಎಂದರು.
ಬೇಬಿ ಚಿತ್ರವನ್ನು ಸಾಯಿ ರಾಜೇಶ್ ನಿರ್ದೇಶಿಸಿದ್ದು, ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಹೊರತಾಗಿ ನಾಗಬಾಬು, ಲಿರಿಶಾ, ಕುಸುಮಾ ದೆಗಲಮರ್ರಿ, ಸಾತ್ವಿಕ್ ಆನಂದ್, ಬಬ್ಲೂ, ಸೀತಾ, ಮೌನಿಕಾ ಕೀರ್ತನಾ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಗೀತಾ ಆರ್ಟ್ಸ್ ಅಂಡ್ ಮಾಸ್ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಸಾಂಪ್ರದಾಯಿಕ ತ್ರಿಕೋನಾ ಪ್ರೀತಿ ಕಥೆಗೆ ಆಧುನಿಕ ಟ್ವಿಸ್ಟ್ ನೀಡಲಾಗಿದೆ.