ಕರ್ನಾಟಕ

karnataka

ETV Bharat / entertainment

ಮದುವೆ ಸಿದ್ಧತೆಯಲ್ಲಿ ಪರಿಣಿತಿ- ರಾಘವ್​: ರಾಜಸ್ಥಾನದಿಂದ ದೆಹಲಿಗೆ ಬರುವಾಗ ಫುಲ್​ ಸುಸ್ತು - ವಿಡಿಯೋ - ಈಟಿವಿ ಭಾರತ ಕನ್ನಡ

ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ಮದುವೆ ಸ್ಥಳದ ಅನ್ವೇಷಣೆಗಾಗಿ ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದರು. ಮದುವೆ ಸ್ಥಳಗಳನ್ನು ಪರಿಶೀಲಿಸಿದ ಬಳಿಕ ಇಂದು ದೆಹಲಿಗೆ ವಾಪಸಾಗಿದ್ದಾರೆ.

Parineeti Chopra
ಪರಿಣಿತಿ- ರಾಘವ್

By

Published : Jun 27, 2023, 3:21 PM IST

ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ಮದುವೆಗೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಬಿಟೌನ್​ ಸುಂದರಿಯ ಮನೆಯಲ್ಲಿ ಗಟ್ಟಿಮೇಳ ಬಾರಿಸಲು ಸಿದ್ಧತೆ ಜೋರಾಗಿದೆ. 'ಹಸಿ ತೊ ಫಸಿ' ಖ್ಯಾತಿಯ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೆಲ ದಿನಗಳ ಹಿಂದೆ ಪರಿಣಿತಿ ಮತ್ತು ರಾಘವ್ ಮದುವೆ ಸ್ಥಳದ ಅನ್ವೇಷಣೆಗಾಗಿ ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದರು. ಇದೀಗ ಮದುವೆ ಸ್ಥಳಗಳನ್ನು ಪರಿಶೀಲಿಸಿದ ಬಳಿಕ ದೆಹಲಿಗೆ ವಾಪಸಾಗಿದ್ದಾರೆ.

ಕಳೆದ ತಿಂಗಳು ಮೇ 13 ರಂದು ರಾಘವ್​ ಮತ್ತು ಪರಿಣಿತಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಿನಿಂದ ತಮ್ಮ ಮದುವೆಗೆ ತಯಾರಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ಲಂಡನ್​ ವಿಡಿಯೋವೊಂದು ವೈರಲ್​ ಆಗಿ, ಮದುವೆ ಶಾಪಿಂಗ್‌ಗಾಗಿ ಅಲ್ಲಿಗೆ ತೆರಳಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ, ಅವರಿಬ್ಬರು ಮದುವೆ ಸ್ಥಳ ಗೊತ್ತು ಮಾಡಲು ರಾಜಸ್ಥಾನಕ್ಕೆ ತೆರಳಿದ್ದರು. ಇದೀಗ ವಾಪಸಾಗುತ್ತಿದ್ದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುಂದರ ಜೋಡಿಯು ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ವಿಮಾನ ನಿಲ್ದಾಣದಿಂದ ಹೊರಡುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಪಾಪರಾಜಿಗಳು ಫೋಟೋ ತೆಗೆಯುತ್ತಿದ್ದಂತೆ ರಾಘವ್​ ಅವರನ್ನು ತಡೆದರು. ಪಾಪ್​ಗಳ ಪ್ರಕಾರ, ಇಬ್ಬರು ಕೂಡ ಆಯಾಸದಿಂದ ಕಾಣಿಸಿಕೊಂಡರು. ಫೋಟೋಗಳಿಗೆ ಪೋಸ್​ ನೀಡದೆ ತಮ್ಮ ವಾಹನದೊಳಗೆ ಹೋಗಲು ಮುಂದಾದರು. ಈ ವೇಳೆ ಪರಿಣಿತಿ ಚೋಪ್ರಾ ಕಡುಗೆಂಪು ಬಣ್ಣದ ಟಾಪ್​ ಧರಿಸಿ ಅದಕ್ಕೆ ಕಪ್ಪು ಶ್ರಗ್​ ಮತ್ತು ಬ್ಲೂ ಪ್ಯಾಂಟ್​ ಧರಿಸಿದ್ದರು. ಮತ್ತೊಂದೆಡೆ ರಾಘವ್​ ಬೀಜ್​ ಶರ್ಟ್​ ಮತ್ತು ಪ್ಯಾಂಟ್​ ಆರಿಸಿಕೊಂಡಿದ್ದರು.

ಇದನ್ನೂ ಓದಿ:ಅಭಿಮಾನಿ ಕೈ ಮೇಲೆ 'ತಮನ್ನಾ ಟ್ಯಾಟೂ'....ಫ್ಯಾನ್ಸ್ ಪ್ರೀತಿಗೆ ಬಹುಬೇಡಿಕೆ ನಟಿ ಭಾವುಕ

ಸದ್ಯದ ಮಾಹಿತಿ ಪ್ರಕಾರ, ಉದಯಪುರದ ಐಷಾರಾಮಿ ಅರಮನೆ 'ದಿ ಒಬೆರಾಯ್ ಉದಯ್​​​ವಿಲಾಸ್‌'ನಲ್ಲಿ ಪರಿಣಿತಿ ಮತ್ತು ರಾಘವ್ ಮದುವೆ ಆಗಲಿದ್ದಾರೆ. ಒಬೆರಾಯ್ ಉದಯ್​​​ವಿಲಾಸ್ ಬಹಳ ಸುಂದರ ಮತ್ತು ಐಷಾರಾಮಿ ಪ್ಯಾಲೇಸ್​​​​ ಹೋಟೆಲ್​ ಆಗಿದೆ. ಈ ಅರಮನೆಯು ನಗರದ ಪಿಚೋಲಾ ಸರೋವರದ ದಡದಲ್ಲಿದೆ. ಸುಂದರವಾದ ಸರೋವರದ ಬಳಿಯ ಹಚ್ಚ ಹಸಿರಿನ ನಡುವೆ ಇದೆ.

ವರದಿಗಳ ಪ್ರಕಾರ, ಪರಿಣಿತಿ ಮತ್ತು ರಾಘವ್ ಇಲ್ಲಿ ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಆಗಲಿದ್ದಾರೆ. ಇದು ಡೆಸ್ಟಿನೇಶನ್ ವೆಡ್ಡಿಂಗ್ ಆಗಲಿದೆ. ಮಳೆಗಾಲದ ನಂತರ ಈ ಮದುವೆ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಕ್ಕೋಬರ್​ 28 ಮತ್ತು 29ರಂದು ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಬಳಿಕ ಅವರಿಬ್ಬರ ಆರತಕ್ಷತೆ ಕಾರ್ಯಕ್ರಮವು ಚಂಡೀಗಢ ಮತ್ತು ಮುಂಬೈನಲ್ಲಿ ಆಯೋಜಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಪರಿಣಿತಿ ಚೋಪ್ರಾ ತಮ್ಮ ಸೋದರ ಸಂಬಂಧಿ, ಬಾಲಿವುಡ್​-ಹಾಲಿವುಡ್​ ತಾರೆ ಪ್ರಿಯಾಂಕಾ ಚೋಪ್ರಾ ಅವರಂತೆ ಡೆಸ್ಟಿನೇಷನ್ ವೆಡ್ಡಿಂಗ್ ಕನಸು ಕಾಣುತ್ತಿದ್ದು, ಅದು ಶೀಘ್ರದಲ್ಲೇ ನೆರವೇರಲಿದೆ.

ಇದನ್ನೂ ಓದಿ:ತಿಂಗಳಾಂತ್ಯ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ.. ರೋಮ್ಯಾನ್ಸ್​ನಿಂದ ಹಿಡಿದು ಆ್ಯಕ್ಷನ್​ವರೆಗಿನ ಸಿನಿಮಾ, ವೆಬ್​ ಸರಣಿ ತೆರೆಗೆ

ABOUT THE AUTHOR

...view details