ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ, ಸೂಪರ್ ಹಿಟ್ ಸಿನಿಮಾ ಕೊಡುವುದರಲ್ಲಿ, ಅಮೋಘ ಅಭಿನಯದ ಮೂಲಕ ಸದ್ದು ಮಾಡೋದ್ರಲ್ಲಿ, ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳೋದ್ರಲ್ಲಿ ಹೆಸರುವಾಸಿಯಾಗಿರುವ ಇಂಡಿಯನ್ ಸೂಪರ್ ಸ್ಟಾರ್ ಶಾರುಖ್ ಖಾನ್ ಇಂದು 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
2023ರಲ್ಲಿ ನಟನ ಜನ್ಮದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತಿದೆ. ನಿನ್ನೆ ಸಂಜೆಯಿಂದಲೇ ನಟನಿಗೆ ಸಂಬಂಧಿಸಿದ ಹಲವು ಸುದ್ದಿಗಳು ಸದ್ದು ಮಾಡಿವೆ. ಇಂದು ತಮ್ಮ ಅಭಿಮಾನಿಗಳಿಗೆ ಡಂಕಿ ಟೀಸರ್ ಗಿಫ್ಟ್ ಕೂಡ ಕೊಟ್ಟಿದ್ದಾರೆ. ಇದೀಗ ಅಭಿಮಾನಿಗಳನ್ನು ವೈಯಕ್ತಿಕವಾಗಿಯೂ ಭೇಟಿ ಆಗಿದ್ದಾರೆ.
ಇಂದು ಬೆಳಗ್ಗೆ ಪ್ರಪಂಚದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳಿಗಾಗಿ ಡಂಕಿ ಟೀಸರ್ ಬಿಡುಗಡೆ ಆಗಿದೆ. ಇದೀಗ ಫ್ಯಾನ್ಸ್ನೊಂದಿಗೆ ಮೀಟ್ ಅಂಡ್ ಗ್ರೀಟ್ ಸೆಷನ್ನಲ್ಲಿ ಭಾಗಿಯಾಗಿದ್ದಾರೆ. ಅಭಿಮಾನಿಗಳನ್ನು ಭೇಟಿ ಆಗಲು ಶಾರುಖ್ ಖಾನ್ ಹೋಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂದು ಶಾರುಖ್ ಖಾನ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ವಿಶೇಷ ದಿನ ಎಂದೇ ಹೇಳಬಹುದು. ತಮ್ಮ 58 ನೇ ಹುಟ್ಟುಹಬ್ಬದಂದು, ಜನಪ್ರಿಯ ನಟ ಶಾರುಖ್ ಖಾನ್ ತಮ್ಮ ಅಭಿಮಾನಿಗಳಿಗಾಗಿ ಈ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ಸ್ಪೆಷಲ್ ಈವೆಂಟ್ ಅನ್ನೂ ಆಯೋಜಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸ್ವಾಗತಿಸಲು ಜವಾಸ್ ಸ್ಟಾರ್ ತಮ್ಮ ಶ್ರೀಮಂತ ನಿವಾಸ 'ಮನ್ನತ್'ನಲ್ಲಿ ಕಾಣಿಸಿಕೊಂಡರು. ಮನ್ನತ್ ಒಂದು ಭಾಗದಲ್ಲಿ ನಿಂತು ಅಭಿಮಾನಿಗಳತ್ತ ಕೈ ಬೀಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿಂದು ಸಖತ್ ಸದ್ದು ಮಾಡಿವೆ. ಅದಾದ ನಂತರ ಇಂದು ಬೆಳಗ್ಗೆ ಕಿಂಗ್ ಖಾನ್ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಡಂಕಿ' ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಇದೀಗ ತಮ್ಮ ಕಟ್ಟಾ ಅಭಿಮಾನಿಗಳನ್ನು ಸಹ ಭೇಟಿ ಆಗಿದ್ದಾರೆ.