ಹೈದರಾಬಾದ್: ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ಮುಂಬರುವ ಚಿತ್ರ 'ಜರಾ ಹಟ್ಕೆ ಜರಾ ಬಚ್ಕೆ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಸಾರಾ ಅಲಿ ಖಾನ್ ನಾಯಕಿಯಾಗಿ ಮಿಂಚಿದ್ದು, ನಿನ್ನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಅಭಿಯೊಬ್ಬರು ನೆಚ್ಚಿನ ನಟನ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಆಗಮಿಸಿದ ಮಹಿಳಾ ಅಭಿಮಾನಿಯೊಬ್ಬರು ಭಾವುಕರಾದರು. "ಕತ್ರಿನಾ ಅವರು ನನ್ನ ಜೀವನದ ಭಾಗವಾಗಿದ್ದಾರೆ ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ. ಆದರೆ, ವಿಕ್ಕಿ ಕೌಶಲ್ ನನ್ನ ಲೈಫ್. ಈ ಜನ್ಮದಲ್ಲಿ ಕತ್ರಿನಾ ನಿಮ್ಮವಳಾಗಿದ್ದರೂ, ಮುಂದಿನ ಏಳು ಜನ್ಮಗಳಲ್ಲಿ ನೀವು ನನ್ನವರು, ನನ್ನವರು ಮಾತ್ರ ಆಗಿರುತ್ತೀರಿ" ಎಂದು ಹೇಳಿದರು. ಅಭಿಮಾನಿಯ ಮಾತಿಗೆ ಪ್ರತಿಕ್ರಿಯಿಸಿದ ವಿಕ್ಕಿ, ನಮಸ್ಕರಿಸಿ, ಮುಗುಳ್ನಕ್ಕು ಮತ್ತು ಕೈಗಳನ್ನು ಮಡಚಿದರು. ಆಕೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಅವರು ಕೂಡ 'ಐ ಲವ್ ಯೂ ಟೂ' ಎಂದು ಹೇಳಿದರು. ಬಳಿಕ ತಮ್ಮ ಅಭಿಮಾನಿಗಳೊಂದಿಗೆ ನಟ ಸೆಲ್ಫಿಗೆ ಪೋಸ್ ನೀಡಿದರು.
ಬಳಿಕ ಈವೆಂಟ್‌ನಲ್ಲಿ ಸಹನಟಿ ಸಾರಾ ಅಲಿ ಖಾನ್‌ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ? ಎಂದು ವಿಕ್ಕಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಟ, "ನಾನು ಸಾರಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಬಳಿಕ ಅಭಿಮಾನಿಗಳು ಕತ್ರಿನಾ ಕೈಫ್ ಹೆಸರನ್ನು ಕೂಗಿದಾಗ, ಮುಗುಳ್ನಕ್ಕು ನಾನು ಕತ್ರಿನಾ ಅವರನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಇನ್ನು ಜರಾ ಹಟ್ಕೆ ಜರಾ ಬಚ್ಕೆ ಚಿತ್ರದ ಟ್ರೇಲರ್ ಅನ್ನು ಮುಂಬೈನಲ್ಲಿ ನಿರ್ಮಾಪಕ ದಿನೇಶ್ ವಿಜನ್ ಉಪಸ್ಥಿತಿಯಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಸಿನಿಮಾ ಜೂನ್ 2 ರಂದು ರಿಲೀಸ್ ಆಗಲಿದೆ. ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ಅವರು ನಿರ್ದೇಶಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ್ದ ವಿಕ್ಕಿ ಕೌಶಲ್, ಸಾಮಾನ್ಯ ಕುಟುಂಬದಲ್ಲಿ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಮದುವೆ, ಡಿವೋರ್ಸ್, ಮರು ಮದುವೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕಥೆಯನ್ನು ಇಟ್ಟುಕೊಂಡು ಚಿತ್ರ ತೆರೆಗೆ ಬರುತ್ತಿದೆ. ಇದು ರೀಲ್ ಲೈಫ್. ರೀಲ್ ಜೀವನದಲ್ಲಿ ಯಾವಾಗಲೂ ಗೊಂದಲ ಇರುತ್ತದೆ. ಆದರೆ, ನನ್ನ ರಿಯಲ್ ಲೈಫ್ ಅದ್ಭುತವಾಗಿದೆ ಎಂದಿದ್ದರು.
ಇದನ್ನೂ ಓದಿ :ವಿಕ್ಕಿ ಕೌಶಲ್ - ಕತ್ರೀನಾ ಕೈಫ್ ವಿಚ್ಛೇದನ ಪಡೆಯಲಿದ್ದಾರಾ? ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಸ್ಟಾರ್ ನಟ
ಹಾಗೆಯೇ, ವಿಕ್ಕಿ ಕೌಶಲ್ ನಟನೆಯ ಮೇಘನಾ ಗುಲ್ಜಾರ್ ಅವರ ನಿರ್ದೇಶನದ ಸ್ಯಾಮ್ ಬಹದ್ದೂರ್ ಕೂಡ ತೆರೆಗೆ ಬರಲು ರೆಡಿಯಾಗಿದೆ. ರೋನಿ ಸ್ಕ್ರೂವಾಲಾ ನಿರ್ಮಿಸಿದ ಈ ಚಿತ್ರದಲ್ಲಿ ಸಾನ್ಯ ಮಲ್ಹೋತ್ರ ಮತ್ತು ಫಾತಿಮಾ ಸನಾ ಶೇಖ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಡಿಸೆಂಬರ್ 1 ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 2021ರ ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಪೋರ್ಟ್ ಬವೇರಾದಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದ್ಧೂರಿಯಾಗಿ ಹಮ್ಮಿಕೊಂಡಿದ್ದ ಮದುವೆ ಸಮಾರಂಭದಲ್ಲಿ ಬಾಲಿವುಡ್ನ ನಟ ನಟಿಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.