ಮುಂಬೈ: ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಸಲಾರ್' ಇದೀಗ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುವ ಮೂಲಕ ಚಿತ್ರದ ಪ್ರಮೋಷನ್ಗೆ ಮುಂದಾಗಿದೆ. ಇದಕ್ಕಾಗಿ ತಂಡ ಹೊಸ ಮಾರ್ಗವನ್ನು ಅನುಸರಿಸಿದೆ. ಸಾಂಪ್ರದಾಯಿಕವಾಗಿ ಚಿತ್ರ ಬಿಡುಗಡೆಗೆ ಮುನ್ನ ಚಿತ್ರದ ನಾಯಕ - ನಾಯಕಿ, ನಿರ್ದೇಶಕರು ಪ್ರಮುಖ ನಗರಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸುವುದು ಸಂದರ್ಶನದಲ್ಲಿ ಭಾಗಿಯಾಗುವುದು ಕಾಣಬಹುದು.
ಆದರೆ ಇದೀಗ 'ಸಲಾರ್' ಚಿತ್ರತಂಡ ಅದಕ್ಕಿಂತ ವಿಭಿನ್ನ ದಾರಿ ಆಯ್ಕೆ ಮಾಡಿಕೊಂಡಿದೆ. ಚಿತ್ರದ ಬಿಡುಗಡೆ ದಿನ ಬಗ್ಗೆ ಹೆಚ್ಚು ನಿರೀಕ್ಷೆಯನ್ನೂ ಮೂಡಿಸುತ್ತಿರುವ ಚಿತ್ರ ಇದೀಗ ಮುಂಬೈನಲ್ಲಿ ಪ್ರಭಾಸ್ ಅವರ ಭರ್ಜರಿ ಕಟೌಟ್ ನಿಲ್ಲಿಸಿ ಗಮನ ಸೆಳೆದಿದೆ. ಅಷ್ಟೇ ಅಲ್ಲದೆ, ಇಷ್ಟು ದೊಡ್ಡದಾದ ಕಟ್ಔಟ್ ಜೋಡಿಸುವ ಶ್ರಮದ ವಿಡಿಯೋವನ್ನು ಇದೀಗ ಸಿನಿ ತಂಡ ಹಂಚಿಕೊಂಡಿದೆ.
ಮುಂಬೈನ ಆರ್ ಮಾಲ್ನಲ್ಲಿ 120 ಅಡಿ ಎತ್ತರದ 'ಸಲಾರ್' ಕಟೌಟ್ ನಿಲ್ಲಿಸಿರುವ ವಿಡಿಯೋ ಇದಾಗಿದೆ. ಈ ಕಟೌಟ್ ಜೋಡಣೆಗೆ 125 ಜನರು ಬಿಡುವಿಲ್ಲದೇ ವಾರಗಳ ಕಾಲ ಕೆಲಸ ಮಾಡಿದ್ದಾರೆ. ಈ ವಿಡಿಯೋವನ್ನು ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಹೊಂಬಾಳೆ ಫಿಲ್ಮ್ಸಂ ಹಂಚಿಕೊಂಡಿದೆ. ಮಂಬೈನ ಆರ್ ಮಾಲ್ನಲ್ಲಿ ಸಲಾರ್ ಮಿಂಚು. 120 ಅಡಿ ಎತ್ತರದ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಕಟ್ ಔಟ್ ಚಿತ್ರದ ಹೈಪ್ ಅನ್ನು ಹೆಚ್ಚಿಸಿದೆ.