ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ನಟ ಧನುಷ್.. ಹೊಸ ಲುಕ್ ವೈರಲ್ ಕಾಲಿವುಡ್ ಸ್ಟಾರ್ ನಟ ಧನುಷ್ ಸದ್ಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರ ಹೊಸ ಲುಕ್ ವೈರಲ್ ಆಗಿದೆ. ಉದ್ದ ಕೂದಲು ಹಾಗೂ ದಾಡಿ ಬಿಟ್ಟುಕೊಂಡಿದ್ದ ಸ್ಟಾರ್, ಇದೀಗ ಗಡ್ಡ ಮತ್ತು ತಲೆ ಬೋಳಿಸಿಕೊಂಡಿದ್ದಾರೆ. ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡಿದ್ದಾರೆ.
ಅವರು ಇತ್ತೀಚೆಗೆ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಮುಡಿ ಕೊಟ್ಟಿದ್ದಾರೆ. ಸದ್ಯ ಧನುಷ್ ಅವರ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರ ಬೆನ್ನಲ್ಲೇ ಒಂದಷ್ಟು ಪ್ರಶ್ನೆಗಳು ಮೂಡಿವೆ. ಇದು ಧನುಷ್ ಅವರ ಮುಂಬರುವ ಸಿನಿಮಾಗೆ ನಡೆಯುತ್ತಿರುವ ತಯಾರಿ ಎಂದು ಕೆಲವರು ಊಹಿಸಿದ್ದಾರೆ.
ಇನ್ನು ನಟ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಕುಟುಂಬ ಸಮೇತರಾಗಿ ತೆರಳಿದ್ದರು. ಧನುಷ್ ಪೋಷಕರಾದ ವಿಜಯಲಕ್ಷ್ಮಿ ಮತ್ತು ಕಸ್ತೂರಿ ರಾಜಾ ಹಾಗೂ ಮಕ್ಕಳಾದ ಯಾತ್ರಾ ಮತ್ತು ಲಿಂಗ ಜೊತೆಗಿದ್ದರು. ತಂದೆಯೊಂದಿಗೆ ಮಕ್ಕಳು ಕೂಡ ಮುಡಿ ನೀಡಿದ್ದಾರೆ. ಸದ್ಯ ನಟನ ದೇವಸ್ಥಾನದ ಭೇಟಿಯ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:'ಶೆಟ್ರ ನಾ ಕಂಡಂತೆ ಕಥೆಯಿದು'.. ಕನಸಿನ ಪ್ರಪಂಚದಲ್ಲಿ ಈಜುತ್ತಾ, ಹಾರೋ ರೆಕ್ಕೆ ಕಟ್ಟೋಕೆ ಸಿಂಪಲ್ ಸ್ಟಾರ್ ಸಿದ್ಧ!
ಇನ್ನು ವರದಿಗಳ ಪ್ರಕಾರ, ಧನುಷ್ ತಮ್ಮ ಮುಂಬರುವ ಡಿ 50 ಚಿತ್ರಕ್ಕಾಗಿ ಈ ಲುಕ್ ಆರಿಸಿಕೊಂಡಿದ್ದಾರಂತೆ. ಈಗಾಗಲೇ ತಿಳಿದಿರುವಂತೆ ನಟ ಈ ಸಿನಿಮಾದಲ್ಲಿ ಹಿಂದೆಂದೂ ನೋಡದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವನ್ನು ಧನುಷ್ ಅವರೇ ನಿರ್ದೇಶಿಸಲಿದ್ದಾರೆ. ಚಿತ್ರದ ತಾರಾಗಣ ಮತ್ತು ತಂಡವನ್ನು ಘೋಷಿಸಿಲ್ಲ. ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಲಿದೆ.
'ಕ್ಯಾಪ್ಟನ್ ಮಿಲ್ಲರ್' ಬಗ್ಗೆ..ನಟ ಧನುಷ್ ಅವರ ಮುಂಬರುವ ಚಿತ್ರ 'ಕ್ಯಾಪ್ಟನ್ ಮಿಲ್ಲರ್'. ಕೆಲವು ದಿನಗಳ ಹಿಂದೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್ನಲ್ಲಿ ಹೆಣಗಳ ರಾಶಿ ಮಧ್ಯೆ ಧನುಷ್ ನಿಂತಿರುವುದನ್ನು ಕಾಣಬಹುದು. ಅವರ ಕೈಯಲ್ಲಿ ಗನ್ ಇದೆ. ಅದನ್ನು ನೋಡಿದರೆ, ಇದು ರೆಟ್ರೋ ಕಾಲದ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಹಿಂಭಾಗದಲ್ಲಿ ಒಂದಷ್ಟು ವಾಹನಗಳು ಇವೆ. 'ಗೌರವವೇ ಸ್ವಾತಂತ್ರ್ಯ' ಎಂದು ಈ ಫಸ್ಟ್ ಲುಕ್ ಪೋಸ್ಟರ್ಗೆ ಧನುಷ್ ಕ್ಯಾಪ್ಶನ್ ನೀಡಿದ್ದಾರೆ.
ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ಧನುಷ್ಗೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ. ಇವರಲ್ಲದೇ ಸಂದೀಪ್ ಕಿಶನ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಕಲನವನ್ನು ಶ್ರೇಯಸ್ ಕೃಷ್ಣ ಮತ್ತು ನಾಗರೂನ್ ಮಾಡಿದ್ದಾರೆ.
ಇದನ್ನೂ ಓದಿ:'Salaar teaser: ಹೊಸ ಪೋಸ್ಟರ್ ಮೂಲಕ ಟೀಸರ್ ದಿನಾಂಕ ಘೋಷಿಸಿದ 'ಸಲಾರ್' ತಂಡ; ಸೇವ್ ಮಾಡಿಕೊಳ್ಳಿ ಈ ದಿನವನ್ನ!