ತಂದೆ ಮತ್ತು ಖ್ಯಾತ ಜ್ಯೋತಿಷಿ ಪಿ ಖುರಾನಾ ನಿಧನದ ನಂತರ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಅವರ ಸಹೋದರ, ನಟ ಅಪರಶಕ್ತಿ ಖುರಾನಾ ತಮ್ಮ ತಾಯಿ ಪೂನಂ ಖುರಾನಾ ಜೊತೆ ಚಂಡೀಗಢದಿಂದ ಮುಂಬೈಗೆ ಆಗಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಸಹೋದರರು ತಮ್ಮ ತಾಯಿಯ ಕೈಯನ್ನು ಹಿಡಿದುಕೊಂಡು ಮುಂಬೈ ವಿಮಾನ ನಿಲ್ದಾಣದಿಂದ ಕಾರಿನತ್ತ ಸಾಗುತ್ತಿರುವುದನ್ನು ಕಾಣಬಹುದು. ಸಹೋದರರಿಬ್ಬರು ತಾಯಿ ಜೊತೆ ಮಾತನಾಡುತ್ತ ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಪ್ರವಾಸಕ್ಕಾಗಿ, ಪೂನಂ ಬಿಳಿ ಬಣ್ಣದ ಲೆಗ್ಗಿಂಗ್ ಮತ್ತು ಬಿಳಿ ಸ್ನೀಕರ್‌ಗಳೊಂದಿಗೆ ಕಡು ನೀಲಿ ಬಣ್ಣದ ಕುರ್ತಾವನ್ನು ಧರಿಸಿದ್ದರು. ಆಯುಷ್ಮಾನ್ ಅವರು ಹಸಿರು ಟಿ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಸ್ನೀಕರ್ಸ್ ಅನ್ನು ಆಯ್ಕೆ ಮಾಡಿದ್ದರು. ಜೊತೆಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದರು. ಮತ್ತೊಂದೆಡೆ, ಅಪರಶಕ್ತಿ ನೀಲಿ ಬಣ್ಣದ ಟಿ-ಶರ್ಟ್‌ನ ಮೇಲೆ ಪೀಚ್ ಶರ್ಟ್ ಧರಿಸಿದ್ದರು ಮತ್ತು ಮ್ಯಾಚಿಂಗ್ ಟ್ರೌಸರ್ ಮತ್ತು ಬಿಳಿ ಸ್ನೀಕರ್‌ಗಳನ್ನು ಹಾಕಿದ್ದರು. ಸಹೋದರರಿಬ್ಬರೂ ಬ್ಯಾಗ್ಗಳನ್ನು ಹಾಕಿಕೊಂಡಿದ್ದರು.
ವಿಡಿಯೋವನ್ನು ಪಾಪರಾಜಿಗಳು ಕೈ ಬಿಟ್ಟ ತಕ್ಷಣ ಸಹೋದರ ನಟರ ಅಭಿಮಾನಿಗಳು ಕಮೆಂಟ್ ವಿಭಾಗವನ್ನು ತುಂಬಿದರು. ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು, "ಆಯುಷ್ಮಾನ್ ಮತ್ತು ನಿಮ್ಮ ಕುಟುಂಬಕ್ಕೆ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಎಲ್ಲಾ ಮಕ್ಕಳು ಹೀಗೆಯೇ, ಮುದ್ದಾದ ವಿಡಿಯೋ" ಎಂದು ಹೇಳಿದ್ದಾರೆ. ಇನ್ನೊಬ್ಬರು, "ಎಲ್ಲಾ ತಾಯಂದಿರಿಗೂ ಇಂತಹ ಮಕ್ಕಳಿರುತ್ತಾರೆ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ಈ ವಿಡಿಯೋ ಲೈಕ್ ಮಾಡಿದ್ದಾರೆ.