ಹೈದರಾಬಾದ್: ಫಿಟ್‌ನೆಸ್ ವಿಚಾರದಲ್ಲಿ ಮುತುವರ್ಜಿ ವಹಿಸುವ ಬಾಲಿವುಡ್ ನಟಿಯರ ಪಟ್ಟಿಯಲ್ಲಿ ಅಲಯಾ ಎಫ್ ಕೂಡ ಒಬ್ಬರು. ಉಲ್ಲಾಸ ಮತ್ತು ಉತ್ಸಾಹದಿಂದರಲೂ ತಪ್ಪದೇ ವರ್ಕೌಟ್ ಮಾಡುವುದು ನಟಿಯ ಪ್ರತಿದಿನದ ಅಭ್ಯಾಸ. ಆಗಾಗ ತಮ್ಮ ಫಿಟ್‌ನೆಸ್ ವಿಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಫಾನ್ಸ್ಗಳಿಗೆ ಈ ಬಗ್ಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ.
ಸದ್ಯ ಯೋಗ, ತಾಲೀಮು ಮತ್ತು ನೃತ್ಯ ಮಾಡುತ್ತಿರುವ ಹಲವು ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ನೆಟಿಜನ್ಸ್ ಫಿದಾ ಆಗಿದ್ದಾರೆ. ವಿಡಿಯೋಗೆ ಅಂದದ ಶೀರ್ಷಿಕೆ ಕೂಡ ನೀಡಿದ್ದಾರೆ. ಲೈಕ್ ಮತ್ತು ಕಾಮೆಂಟ್ ಮಾಡುವ ಮೂಲಕ ನಟಿಯ ವರ್ಕೌಟ್ ಅನ್ನು ಹೊಗಳುತ್ತಿದ್ದಾರೆ. ನಟಿಯ ಈ ಫಿಟ್‌ನೆಸ್ ವಿಡಿಯೋ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆ ಕೂಡ ಕಂಡಿದೆ.
ನಟಿ ಅಲಯಾ ತಮ್ಮ ಜಿಮ್ ತರಬೇತಿಗಾರರಿಂದ ಹೊಟ್ಟೆಗೆ ಪಂಚ್ ನೀಡುತ್ತಿರುವುದನ್ನು ಮೊದಲ ವಿಡಿಯೊದಲ್ಲಿ ಕಾಣಬಹುದು. ನಗುತ್ತಲೇ ಪಂಚಿಂಗ್ ಸ್ವೀಕರಿಸುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ತನ್ನ ನೃತ್ಯ ತರಬೇತಿದಾರರ ಜೊತೆ ಡಾನ್ಸ್ ಮಾಡುತ್ತಿರುವುದನ್ನು ಎರಡನೇ ವಿಡಿಯೋದಲ್ಲಿ ನಾವು ಗಮನಿಸಬಹುದು. ಮೂರನೇ ವಿಡಿಯೋದಲ್ಲಿ ಯೋಗ, ನಾಲ್ಕನೇ ವಿಡಿಯೋದಲ್ಲಿ ಸ್ಕಿಪ್ಪಿಂಗ್, ಐದನೇ ವಿಡಿಯೋದಲ್ಲಿ ವರ್ಕೌಟ್ ಮಾಡುತ್ತಿರುವುದು, ಆರನೇ ವಿಡಿಯೋದಲ್ಲಿ ಟೆನ್ನಿಸ್ ಆಟ ಆಡುತ್ತಿರುವುದು, ಏಳನೇ ವಿಡಿಯೋದಲ್ಲಿ ಅಪಾಯಕಾರಿ ಯೋಗಾಸನ ಮಾಡುತ್ತಿರುವ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ದೇಹ ದಂಡಿಸುವ ನಟಿಯ ಹಲವು ವಿಡಿಯೋಗಳನ್ನು ಕಂಡು ನೆಟಿಜನ್ಸ್ ಶಾಕ್ ಆಗಿದ್ದಾರೆ.