ಕರ್ನಾಟಕ

karnataka

ETV Bharat / entertainment

Watch: 'ಕಜ್​ರಾ ರೇ' ಹಾಡಿಗೆ ಅಭಿಷೇಕ್​ ಬಚ್ಚನ್​- ನೋರಾ ಫತೇಹಿ ಸಖತ್​ ಸ್ಟೆಪ್​ - ಈಟಿವಿ ಭಾರತ ಕನ್ನಡ

'ಬಂಟಿ ಔರ್ ಬಬ್ಲಿ' ಚಿತ್ರದ ಸೂಪರ್​ ಹಿಟ್​ 'ಕಜ್​ರಾ ರೇ' ಹಾಡಿಗೆ ಅಭಿಷೇಕ್​ ಬಚ್ಚನ್ ಮತ್ತು ನೋರಾ ಫತೇಹಿ ಸಖತ್​ ಡ್ಯಾನ್ಸ್​ ಮಾಡಿದ್ದಾರೆ.

Kajra Re
ಅಭಿಷೇಕ್​ ಬಚ್ಚನ್​- ನೋರಾ ಫತೇಹಿ

By

Published : Jun 13, 2023, 12:45 PM IST

2005 ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್ ಪ್ರದರ್ಶನ​ ಕಂಡಿದ್ದ ಸಿನಿಮಾ 'ಬಂಟಿ ಔರ್ ಬಬ್ಲಿ'. ಈ ಚಿತ್ರದಲ್ಲಿ ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ ಬಚ್ಚನ್​ ಮತ್ತು ಅಮಿತಾಭ್​ ಬಚ್ಚನ್ ನಟಿಸಿದ್ದರು. ಸಿನಿಮಾದಲ್ಲಿನ 'ಕಜ್​ರಾ ರೇ' ಹಾಡು ಸಖತ್​ ಹಿಟ್​ ಆಗಿತ್ತು. ಬಿಡುಗಡೆಯಾಗಿ 18 ವರ್ಷಗಳು ಕಳೆದರೂ ಇಂದಿಗೂ ಈ ಹಾಡನ್ನು ಎಲ್ಲರೂ ಗುನುಗುತ್ತಿರುತ್ತಾರೆ. ಬಾಲಿವುಡ್​ನ ಅತ್ಯಂತ ಫೇಮಸ್​ ಹಾಡುಗಳಲ್ಲಿ 'ಕಜ್​ರಾ ರೇ' ಕೂಡ ಒಂದು. ​

ಇದೀಗ ಈ ಹಾಡಿಗೆ ಅಭಿಷೇಕ್​ ಬಚ್ಚನ್​ ಮತ್ತೆ ಸ್ಟೆಪ್​ ಹಾಕಿದ್ದಾರೆ. ನಟಿ ನೋರಾ ಫತೇಹಿ ಜೊತೆ ಸಖತ್​ ಡ್ಯಾನ್ಸ್​ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ವೈರಲ್​ ಆಗಿದೆ. ನಟ ಮತ್ತೊಮ್ಮೆ ಈ ಹಾಡಿಗೆ ಕುಣಿದಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ರೀಲ್ಸ್​ ಅನ್ನು ನೋರಾ ಫತೇಹಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಸ್ಟೋರಿ ಹಾಕಿಕೊಂಡಿದ್ದು, 'ಇಟ್ಸ್​ ಎ ರ್ಯಾಪ್​' ಎಂದು ಕ್ಯಾಪ್ಶನ್​ ನೀಡಿದ್ದಾರೆ.

ವಿಡಿಯೋದಲ್ಲಿ ನಟ ಅಭಿಷೇಕ್​ ಬಚ್ಚನ್​ ಮತ್ತು ನೋರಾ ಫತೇಹಿ ಬ್ಲ್ಯಾಕ್​ ಕಲರ್​ ಡ್ರೆಸ್​ನಲ್ಲಿ ಕಾಣಿಸಿದ್ದಾರೆ. ತಮ್ಮ ಟೀಮ್​ ಮೆಂಬರ್ಸ್​ ಜೊತೆ ಸೇರಿ ಡ್ಯಾನ್ಸ್​ ಮಾಡಿದ್ದಾರೆ. ಎಲ್ಲರೂ ಜೊತೆಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇದಲ್ಲದೇ ಇವರಿಬ್ಬರು ಜೊತೆಯಾಗಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ರೆಮೋ ಡಿಸೋಜಾ ನಿರ್ದೇಶನದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಎಬಿಸಿಡಿ' ನಿರ್ದೇಶಕರು ಈ ವಿಚಾರವನ್ನು ಇತ್ತೀಚೆಗೆ ಘೋಷಿಸಿದ್ದಾರೆ.

'ಕಜ್​ರಾ ರೇ' ಹಾಡಿಗೆ ಅಭಿಷೇಕ್​ ಬಚ್ಚನ್​- ನೋರಾ ಫತೇಹಿ ಡ್ಯಾನ್ಸ್​

ಇದನ್ನೂ ಓದಿ:Prabhu Deva ಮನೆಗೆ ಲಕ್ಷ್ಮಿ: 50ರ ಹರೆಯಲ್ಲಿ ತಂದೆಯಾದ 'ಇಂಡಿಯನ್​​ ಮೈಕಲ್​​ ಜಾಕ್ಸನ್​'

ರೆಮೋ ಡಿಸೋಜಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನು ಹಂಚಿಕೊಂಡು ತಿಳಿಸಿದ್ದರು. ಧೂಮ್​ ನಟ ಹಗ್​ ಎಮೋಜಿನೊಂದಿಗೆ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದರು. ವೈರಲ್​ ವಿಡಿಯೋ ಕೂಡ ಇದೇ ಪ್ರಾಜೆಕ್ಟ್​ನ ರ್ಯಾಪ್​- ಅಪ್​ ಪಾರ್ಟಿಯಿಂದ ಬಂದಂತೆ ಕಾಣುತ್ತಿದೆ. ಏತನ್ಮಧ್ಯೆ ಅಭಿಷೇಕ್​ ಬಚ್ಚನ್​ ಮುಂದೆ 'ದಿ ಬಿಗ್​ ಬುಲ್'​ ಸೀಕ್ವೆಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಲವು ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಂಡ ನೋರಾ: ಇನ್ನು ನೋರಾ ಫತೇಹಿ ಅವರು ಸಾಹಿದ್​ ಖಾನ್​ ನಿರ್ದೇಶನದ ಕಾಮಿಡಿ ಕಥಾಹಂದರ ಹೊಂದಿರುವ '100%' ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಜಾನ್​ ಅಬ್ರಹಾಂ, ರಿತೇಶ್​ ದೇಶ್​ಮುಖ್​ ಮತ್ತು ಶೆಹನಾಜ್​ ಗಿಲ್​ ಪ್ರಮುಖ ಪಾತ್ರದಲ್ಲಿದ್ದಾರೆ. ಇದಲ್ಲದೆ, ನಟಿ ಕುನಾಲ್ ಕೆಮ್ಮು ಅವರ ನಿರ್ದೇಶನದ ಚೊಚ್ಚಲ ಚಿತ್ರ 'ಮಡ್ಗಾಂವ್ ಎಕ್ಸ್‌ಪ್ರೆಸ್' ನಲ್ಲಿಯೂ ನಟಿಸಲಿದ್ದಾರೆ. ಇದರಲ್ಲಿ ಅವರು ನಟರಾದ ಪ್ರತೀಕ್ ಗಾಂಧಿ ಮತ್ತು ದಿವ್ಯೇಂದು ಶರ್ಮಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:Adipurush: 24 ಗಂಟೆಯಲ್ಲಿ 36 ಸಾವಿರ 'ಆದಿಪುರುಷ್' ಟಿಕೆಟ್​ಗಳ ಮಾರಾಟ.. ಆರ್​ಆರ್​ಆರ್​​, ಪಠಾಣ್​ ದಾಖಲೆಗಳು ಉಡೀಸ್​!

ಅಭಿಷೇಕ್​ ಬಚ್ಚನ್​ ಮತ್ತು ನೋರಾ ಫತೇಹಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟೀವ್​ ಆಗಿದ್ದಾರೆ. ತಮ್ಮ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ಸಿನಿಮಾಗಳಿಗಾಗಿಯೇ ಫ್ಯಾನ್ಸ್​ ಕೂಡ ಕಾಯುತ್ತಿರುತ್ತಾರೆ.

ABOUT THE AUTHOR

...view details