ಕರ್ನಾಟಕ

karnataka

ETV Bharat / entertainment

ಹೃತಿಕ್​ ರೋಷನ್​ - ಜೂ. ಎನ್​ಟಿಆರ್​ ಸ್ಕ್ರೀನ್​ ಶೇರ್: ವಾರ್​ 2 ಶೂಟಿಂಗ್​ ಸೆಟ್​​ನಿಂದಲೇ ವಿಡಿಯೋ ವೈರಲ್​​ - ಜೂನಿಯರ್​ ಎನ್​ಟಿಆರ್​

War 2: ಬಹುನಿರೀಕ್ಷಿತ ವಾರ್​ 2 ಚಿತ್ರದ ಸೆಟ್​​ನಿಂದ ಫೋಟೋ - ವಿಡಿಯೋಗಳು ವೈರಲ್​ ಆಗಿವೆ.

Jr NTR - Hrithik Roshan
ಜೂನಿಯರ್ ಎನ್‌ಟಿಆರ್ - ಹೃತಿಕ್ ರೋಷನ್

By ETV Bharat Karnataka Team

Published : Oct 18, 2023, 7:41 PM IST

ಭಾರತೀಯ ಚಿತ್ರರಂಗದ ಸ್ಟಾರ್ ಕಲಾವಿದರಾದ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ವಾರ್​ 2 ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಿನಿಪ್ರಿಯರಿಗೆ ಈ ವಿಷಯ ತಿಳಿದಾಗಿನಿಂದಲೂ ವಾರ್ 2 ಸೋಷಿಯಲ್​ ಮೀಡಿಯಾಗಳಲ್ಲಿ ಟ್ರೆಂಡಿಂಗ್​ನಲ್ಲಿದೆ. ಸಿನಿಮಾ ಸಂಬಂಧ ಸಿನಿಪ್ರಿಯರು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ವಾರ್​ 2 ಶೂಟಿಂಗ್​: ಸಿನಿಮಾ ಸೆಟ್ಟೇರಿದ್ದು, ಸದ್ಯ ಆನ್‌ಲೈನ್‌ನಲ್ಲಿ ಸಖತ್​ ಸದ್ದು ಮಾಡುತ್ತಿದೆ. ಶೂಟಿಂಗ್​ ಸೆಟ್‌ನ ಫೋಟೋ, ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಇವು ಸಿನಿಮಾ ಸುತ್ತಲಿನ ನಿರೀಕ್ಷೆ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ವೈರಲ್ ಆಗಿರುವ ಫೋಟೋಗಳ ಪೈಕಿ, ನಿರ್ದೇಶಕ ಅಯಾನ್ ಮುಖರ್ಜಿ ತಮ್ಮ ತಂಡದೊಂದಿಗೆ ಸೆಟ್ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು.

ಸ್ಪೇನ್‌ನಿಂದ ವಿಡಿಯೋ ವೈರಲ್​​: ವಾರ್ 2 ಸೆಟ್‌ನಿಂದ ವೈರಲ್​ ಆಗಿರುವ ಫೋಟೋದಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರೇ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಎಂಬುದು ನಿಮಗೆ ತಿಳಿದೇ ಇದೆ. 2019 ರ ವಾರ್ ಸಿನಿಮಾದ ಸೀಕ್ವೆಲ್‌ನಲ್ಲಿ ಹೃತಿಕ್ ರೋಷನ್ ಕಬೀರ್ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಆರ್​ಆರ್​ಆರ್​ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಸಂಪಾದಿಸಿರುವ ಜೂನಿಯರ್ ಎನ್​ಟಿಆರ್​ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ. ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸ್ಪೇನ್‌ನಿಂದ ಬಂದವಾಗಿವೆ.

ವೈರಲ್​ ಫೋಟೋ, ವಿಡಿಯೋಗಳಲ್ಲಿ ಅಯಾನ್ ಮುಖರ್ಜಿ ತಮ್ಮ ಭಾರತೀಯ ಹಾಗೂ ವಿದೇಶಿ ಸಿಬ್ಬಂದಿಯೊಂದಿಗೆ ಸ್ಪೇನ್‌ನ ಬೀದಿಗಳಲ್ಲಿ ಅಡ್ಡಾಡುತ್ತಿರುವುದನ್ನು ಕಾಣಬಹುದು. ಶೂಟಿಂಗ್​ಗೆ ರೆಡಿಯಾಗಿರುವ ಸೆಟ್‌ಗಳ ವಿಡಿಯೋಗಳು ಸಹ ಇಂಟರ್​ನೆಟ್​​​ನಲ್ಲಿ ವೈರಲ್​ ಆಗಿವೆ. ಚೇಸ್ ಸೀನ್​ನ ಚಿತ್ರೀಕರಣ ನಡೆಯುತ್ತಿರಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ. ಹೃತಿಕ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆಗೆ, ಕಿಯಾರಾ ಅಡ್ವಾಣಿ ಕೂಡ ವಾರ್ 2ರಲ್ಲಿ ನಟಿಸಲಿದ್ದಾರೆ. ಹೆಚ್ಚುವರಿಯಾಗಿ, ವಾರ್ 2ರಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಮೂಲವೊಂದು ತಿಳಿಸಿದೆ.

ಇದನ್ನೂ ಓದಿ:ಹಾರರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ... 60 ಅಡಿ ಎತ್ತರದ ಕಟೌಟ್ ನಿಲ್ಲಿಸಿ​ 'ಕ್ಯಾಪ್ಚರ್' ಪೋಸ್ಟರ್ ಅನಾವರಣ

ಮೂಲಗಳ ಪ್ರಕಾರ, "ವಾರ್ 2 ಸಿನಿಮಾ ಹಲವು ಕಾರಣಗಳಿಂದಾಗಿ ಬಹಳ ರೋಮಾಂಚನಕಾರಿ ಮೂಡಿ ಬರಲಿದೆ. ''ವಾರ್​ 2'' ಯಶ್ ರಾಜ್​ ಫಿಲ್ಮ್ಸ್​​ ಸ್ಪೈ ಯೂನಿವರ್ಸ್​ನ ಭಾಗ ಆಗಿದ್ದು, ಮೆಗಾಸ್ಟಾರ್‌ಗಳನ್ನು ಒಟ್ಟಿಗೆ ಸೇರಿಸಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರವಿದು''. ಇನ್ನೂ ಯಶ್​​ ರಾಜ್​ ಫಿಲ್ಮ್ಸ್ ನಿರ್ಮಾಣದ ಮತ್ತೊಂದು ಸ್ಪೈ ಸಿನಿಮಾ 'ಟೈಗರ್​ 3' ಬಿಡುಗಡೆಗೆ ಸಜ್ಜಾಗಿದೆ. ಟ್ರೇಲರ್​ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಸಿನಿಮಾ ದೀಪಾವಳಿ ಸಂದರ್ಭ ಥಿಯೇಟರ್​ಗೆ ಬರಲಿದೆ.

ಇದನ್ನೂ ಓದಿ:'ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷಿಸಬೇಡಿ': ಸಿನಿಮಾ, ರಜನಿಕಾಂತ್, ಮೋಹನ್​ ಲಾಲ್​ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು!

ABOUT THE AUTHOR

...view details