ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಬಹುಬೇಡಿಕೆ ತಾರೆ ಕತ್ರಿನಾ ಕೈಫ್ ನಟನೆಯ ಟೈಗರ್ 3 ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡಿದೆ. ಸಿನಿಪ್ರಿಯರೀಗ ಯಶ್ ರಾಜ್ ಫಿಲ್ಮ್ಸ್ನ 'ಸ್ಪೈ ಯೂನಿವರ್ಸ್'ನಿಂದ ಮುಂದಿನ ಸ್ಪೈ ಸಿನಿಮಾ ನಿರೀಕ್ಷಿಸುತ್ತಿದ್ದಾರೆ. ವೈಆರ್ಎಫ್ನ ಮುಂದಿನ ಬಹುನಿರೀಕ್ಷಿತ ಸ್ಪೈ ಸಿನಿಮಾ ''ವಾರ್ 2''.
ಮುಂದಿನ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ 'ವಾರ್ 2' ಬಿಡುಗಡೆ ದಿನಾಂಕ ಬಹಿರಂಗಗೊಂಡಿದೆ. 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಿನಿಮಾ ತೆರೆಗಪ್ಪಳಿಸಲಿದೆ. 2025ರ ಆಗಸ್ಟ್ 14 ರಂದು ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ ಎಂದು ಸಿನಿಮಾ ವಿಮರ್ಶಕ ತರಣ್ ಆದರ್ಶ್ ತಿಳಿಸಿದ್ದಾರೆ. ಚಿತ್ರದಲ್ಲಿ ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸೋಷಿಯಲ್ ಮೀಡಿಯಾಗಳಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ವಾರ್ 2 ಬಾಕ್ಸ್ ಆಫೀಸ್ ಧೂಳೆಬ್ಬಿಸಲಿದೆ ಎಂದು ತಿಳಿಸಿದ್ದಾರೆ. ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ತರಣ್ ಆದರ್ಶ್, ''ಯಶ್ ರಾಜ್ ಫಿಲ್ಮ್ಸ್ ವಾರ್ 2ರ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಿನಿಮಾ ತೆರೆಗಪ್ಪಳಿಸಲಿದೆ. ಯಶ್ ರಾಜ್ ಫಿಲ್ಮ್ಸ್ನ 'ಸ್ಪೈ ಯೂನಿವರ್ಸ್'ನ ಆರನೇ ಚಿತ್ರವಿದು. ವಾರ್ 2 ಬಿಡುಗಡೆಗೆ ಮುಹೂರ್ತ ನಿಗದಿ ಆಗಿದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ.