2023ರ ಬಹುನಿರೀಕ್ಷಿತ ಚಿತ್ರ 'ಜವಾನ್'. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ಈ ಸಿನಿಮಾದ ಪ್ರಿವ್ಯೂ ಮತ್ತು ಪೋಸ್ಟರ್ಗಳು ಈಗಾಗಲೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಿಂಗ್ ಖಾನ್ ಮತ್ತು ನಯನತಾರಾ ಲುಕ್ಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಿನ್ನೆಯಷ್ಟೇ ಮತ್ತೊಂದು ಪೋಸ್ಟರ್ ರಿಲೀಸ್ ಆಗಿತ್ತು. ಕೇವಲ ಕಣ್ಣನ್ನು ಕೇಂದ್ರವಾಗಿರಿಸಿ, ಸಸ್ಪೆನ್ಸ್ ಆಗಿರುವಂತೆ ತೋರಿಸಲಾಗಿತ್ತು. ಇದೀಗ ವಿಜಯ್ ಸೇತುಪತಿ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಹೊಸ ಪೋಸ್ಟರ್‌ನಲ್ಲಿ ವಿಜಯ್ ಅವರನ್ನು ಖಳನಾಯಕನಂತೆ ಬಿಂಬಿಸಲಾಗಿದೆ. ಭಯಾನಕ ಲುಕ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ಅನ್ನು ಕೈ ಬಿಟ್ಟಿದ್ದಾರೆ. "ಅವನನ್ನು ತಡೆಯುವವರು ಯಾರೂ ಇಲ್ಲ.. ಅಥವಾ ಇದ್ದಾರೆಯೇ? ಜಾಗರೂಕರಾಗಿರಿ" ಎಂಬ ಕ್ಯಾಪ್ಶನ್ ಜೊತೆ ಪೋಸ್ಟರ್ ಹಂಚಿಕೊಳ್ಳಲಾಗಿದೆ. ನಟ ಪೋಸ್ಟರ್ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು, ಅವರ ಸಹದ್ಯೋಗಿಗಳು ಕಮೆಂಟ್ ವಿಭಾಗವನ್ನು ತುಂಬಿಸಿದ್ದಾರೆ.
ನಟಿ ಭೂಮಿ ಪಡ್ನೇಕರ್, "ಉತ್ಸಾಹದ ಮಟ್ಟ 100%" ಎಂದು ಹೇಳಿದ್ದಾರೆ. ನೆಟ್ಟಿಗರೊಬ್ಬರು, "ನಿಮ್ಮಿಬ್ಬರನ್ನೂ ಒಟ್ಟಿಗೆ ನೋಡಲು ಕಾಯಲು ಸಾಧ್ಯವಿಲ್ಲ!" ಎಂದಿದ್ದಾರೆ. ವಿಜಯ್ ಸೇತುಪತಿ ಪೋಸ್ಟರ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಪ್ರಿವ್ಯೂನಲ್ಲಿ ನಯನತಾರಾ ಹಾಗೂ ವಿಜಯ್ ಸೇತುಪತಿ ಅವರನ್ನು ಒಮ್ಮೆ ಮಾತ್ರ ತೋರಿಸಲಾಗಿತ್ತು. ಇದೀಗ ಇವರಿಬ್ಬರ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದ್ದು, ಸಿನಿ ಪ್ರೇಕ್ಷಕರ ಉತ್ಸಾಹದ ಮಟ್ಟ ಹೆಚ್ಚಿಸಿದೆ.