ಕರ್ನಾಟಕ

karnataka

ETV Bharat / entertainment

ಬಿಗ್ ಬಾಸ್​​​ ಒಟಿಟಿ ಮೊದಲ ಸೀಸನ್ ಆರಂಭ; ದೊಡ್ಮನೆ ಪ್ರವೇಶ ಮಾಡಲಿರುವ ಸ್ಪರ್ಧಿಗಳು?! - Etv Bharat Kannada

ಬಿಗ್ ಬಾಸ್​​​ ಒಟಿಟಿ ಮೊದಲ ಸೀಸನ್ ಇಂದಿನಿಂದ ಆರಂಭವಾಗುತ್ತಿದೆ. ಸಂಜೆ 7 ಗಂಟೆಗೆ ಕಾರ್ಯಕ್ರಮಕ್ಕೆ ಗ್ರೀನ್​ ಸಿಗ್ನಲ್​ ಸಿಗಲಿದೆ. ಅದಕ್ಕೂ ಮುನ್ನ ಯಾರೆಲ್ಲ ದೊಡ್ಮನೆ ಪ್ರವೇಶ ಮಾಡಲಿದ್ದಾರೆ ಅನ್ನೋ ಸಂಭಾವ್ಯ ಪಟ್ಟಿ ವೀಕ್ಷಕರಿಗೆ ಕುತೂಹಲ ಮೂಡಿಸಿದೆ.

Voot kannada bigg boss contestants list
Voot kannada bigg boss contestants list

By

Published : Aug 6, 2022, 4:54 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಶೋ 8 ಸೀಸನ್‌ಗಳನ್ನು ಯಶಸ್ವಿಯಾಗಿ ಮುಕ್ತಾಯಗಳಿಸಿದೆ. ಇದೀಗ 9ನೇ ಸೀಸನ್​ ಶುರುವಾಗುವ ಮುನ್ನ ವೂಟ್ ಒಟಿಟಿ ವೇದಿಕೆಯಲ್ಲಿ ಪ್ರಸಾರಗೊಳ್ಳುತ್ತಿದೆ. ಇಂದು ಸಂಜೆ 7 ಗಂಟೆಗೆ ಒಟಿಟಿಯಲ್ಲಿ ಗ್ರೀನ್​ ಸಿಗ್ನಲ್​ ಸಿಗಲಿದೆ.

ಆದರೆ, ಇದು ಟಿವಿ ವಾಹಿನಿಯಲ್ಲಿ ಪ್ರಸಾರವಾಗದಿರುವುದು ಕೆಲ ಕಿರುತೆರೆ ವೀಕ್ಷಕರಿಗೆ ಸ್ವಲ್ಪ ಬೇಸರ ತರಿಸಿದೆ. ವಾಹಿನಿಯಲ್ಲಿ ಪ್ರಸಾರವಾಗದಿದ್ದರೂ ಜನರು ಒಟಿಟಿ ಬಿಗ್ ಬಾಸ್ ಬಗ್ಗೆ ತಿಳಿದುಕೊಳ್ಳಲು ಮತ್ತು ಅಭ್ಯರ್ಥಿಗಳ ಬಗ್ಗೆ ಬಹಳ ಕಾತರರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮದೇಯಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಹೋಗುವ ಸಂಭಾವ್ಯ ಸ್ಪರ್ಧಿಗಳು

ವೂಟ್​​ನಲ್ಲಿ 24/7 ಬಿಗ್ ಬಾಸ್ ಪ್ರಸಾರವಾಗಲಿದೆ. 6 ವಾರಗಳ ಕಾಲ ಈ ಸ್ಪರ್ಧೆ ನಡೆಯಲಿದ್ದು, ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರ ಘೋಷಣೆಯನ್ನ ಮಾಡಲಾಗುತ್ತದೆ. ವೂಟ್​ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋಗೆ ಯಾರೆಲ್ಲಾ ಸ್ಪರ್ಧಿಗಳು ಹೋಗ್ತಾರೆ ಅನ್ನೋದು ಸಹಜವಾಗಿ ಕುತೂಹಲ ಮೂಡಿಸಿದೆ.

ಬಿಗ್ ಬಾಸ್ ಮನೆಯೊಳಗೆ ಹೋಗುವ ಸಂಭಾವ್ಯ ಸ್ಪರ್ಧಿಗಳು

ಅಷ್ಟೇ ಅಲ್ಲ, ವೂಟ್ ಬಿಗ್ ಬಾಸ್‌ ಶೋನಲ್ಲಿ ಯಾರೆಲ್ಲ ಕಂಟೆಸ್ಟಂಟ್ ಇರ್ತಾರೆ ಅನ್ನೋದು ಸಹ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಸದ್ಯ ಕನ್ನಡ ಬಿಗ್ ಬಾಸ್ ಶೋ ತಂಡದ ಕೆಲ ಆಪ್ತರು ಹೇಳುವ ಪ್ರಕಾರ, ಸೋಷಿಯಲ್ ಮೀಡಿಯಾದಲ್ಲಿ ಗೆಸ್ ಮಾಡಿರುವ ವ್ಯಕ್ತಿಗಳು ಬಿಗ್ ಬಾಸ್​​ನಲ್ಲಿ ಇದ್ದಾರೆ ಅಂತಾ ಹೇಳಲಾಗುತ್ತಿದೆ.

ಬಿಗ್ ಬಾಸ್ ಮನೆಯೊಳಗೆ ಹೋಗುವ ಸಂಭಾವ್ಯ ಸ್ಪರ್ಧಿಗಳು

ಸದ್ಯಕ್ಕೆ‌ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ, ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ಸಾನ್ಯಾ ಅಯ್ಯರ್, ಸಂಖ್ಯಾಶಾಸ್ತ್ರ ಖ್ಯಾತಿಯ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿವಾಡ, ಸ್ಪೂರ್ತಿ ಗೌಡ, ಕಿರಣ್ ಯೋಗಿಶ್ವರ್, ಅರ್ಜುನ್ ರಮೇಶ್ ಇಷ್ಟು ಸ್ಪರ್ಧಿಗಳು ಪಕ್ಕಾ ಎನ್ನಲಾಗ್ತಿದೆ.

ಬಿಗ್ ಬಾಸ್ ಮನೆಯೊಳಗೆ ಹೋಗುವ ಸಂಭಾವ್ಯ ಸ್ಪರ್ಧಿಗಳು

ಉಳಿದಂತೆ ಗಾನ ಬಜಾನ, ಲವ್ ಗುರು ಚಿತ್ರಗಳ ನಾಯಕ ನಟ‌ ತರುಣ್ ಚಂದ್ರ, ಹುಚ್ಚ ಹಾಗೂ ಚೆಲ್ಲಾಟ ಸಿನಿಮಾದ ನಟಿ ರೇಖಾ, ನಟ ನವೀನ್ ಕೃಷ್ಣ, ಕಿರುತೆರೆ ನಟಿ ನಮ್ರತಾ ಗೌಡ, ನಿರ್ದೇಶಕ ರವಿ ಶ್ರೀವತ್ಸ, ಕಾಫಿ ನಾಡು ಚಂದು, ರಾಬರ್ಟ್ ಚಿತ್ರದಲ್ಲಿ ನಟಿಸಿದ ತಾರೆ ಆಶಾ ಭಟ್,‌ ಡ್ರೋನ್ ಪ್ರತಾಪ್ ಸೇರಿದಂತೆ ಹೀಗೆ ಸಾಕಷ್ಟು ಜನರ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಇಷ್ಟು ಜನ ಸ್ಪರ್ಧಿಗಳಲ್ಲಿ ಯಾರೆಲ್ಲ ದೊಡ್ಮನೆಯಲ್ಲಿ ಇರ್ತಾರೆ ಅನ್ನೋದು ಇಂದೇ ಗೊತ್ತಾಗಲಿದೆ.

ಬಿಗ್ ಬಾಸ್ ಮನೆಯೊಳಗೆ ಹೋಗುವ ಸಂಭಾವ್ಯ ಸ್ಪರ್ಧಿಗಳು

ABOUT THE AUTHOR

...view details