ಕರ್ನಾಟಕ

karnataka

ETV Bharat / entertainment

ದೀಪಿಕಾ ಪಡುಕೋಣೆ ಹೊಗಳಿದ ವಿವೇಕ್ ಅಗ್ನಿಹೋತ್ರಿ: ಶುರುವಾಯ್ತು 'ಡಬಲ್ ಸ್ಟ್ಯಾಂಡರ್ಡ್' ಚರ್ಚೆ! - Vivek Agnihotri on deepika

ನಟಿ ದೀಪಿಕಾ ಪಡುಕೋಣೆ ಬಗ್ಗೆ ಗುಣಗಾನ ಮಾಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಟೀಕೆ ವ್ಯಕ್ತವಾಗಿದೆ.

Vivek Agnihotri praises deepika padukone
ದೀಪಿಕಾ ಪಡುಕೋಣೆ ಗುಣಗಾನ ಮಾಡಿದ ವಿವೇಕ್ ಅಗ್ನಿಹೋತ್ರಿ

By

Published : Mar 5, 2023, 1:28 PM IST

ಬಾಲಿವುಡ್‌ 'ಮಸ್ತಾನಿ' ದೀಪಿಕಾ ಪಡುಕೋಣೆ ಮಾರ್ಚ್ 12ರಂದು ಯುಎಸ್‌ನಲ್ಲಿ ನಡೆಯಲಿರುವ ಆಸ್ಕರ್ 2023ರಲ್ಲಿ ಭಾಗಿಯಾಗಲಿದ್ದಾರೆ. ವಿಜೇತರಿಗೆ 95ನೇ ಆಸ್ಕರ್ ಪ್ರಶಸ್ತಿ ಹಸ್ತಾಂತರಿಸಲಿದ್ದಾರೆ. ಈ ಬಗ್ಗೆ ಚಿತ್ರ ನಿರ್ಮಾಪಕ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಟಿ ದೀಪಿಕಾ ಪಡುಕೋಣೆ ಅವರನ್ನು ಹೊಗಳಿದ್ದಾರೆ. ಇದು ಮೆಚ್ಚುಗೆ ಜೊತೆಗೆ ಟೀಕೆಯನ್ನೂ ಆಹ್ವಾನಿಸಿದೆ.

ದೀಪಿಕಾ ಪಡುಕೋಣೆ ಗುಣಗಾನ: 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ ಪ್ರೆಸೆಂಟರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಜೇತರಿಗೆ ಅವಾರ್ಡ್ ನೀಡುವ ಸಲುವಾಗಿ ವೇದಿಕೆ ಮೇಲೇರಲಿದ್ದಾರೆ ಬಾಲಿವುಡ್​ನ ಪದ್ಮಾವತ್​. ಈ ಹಿನ್ನೆಲೆಯಲ್ಲಿ ಟ್ವಿಟರ್​ನಲ್ಲಿ ವರದಿಯೊಂದಕ್ಕೆ ಪ್ರತಿಕ್ರಿಯಿಸಿ, ದೀಪಿಕಾ ಪಡುಕೋಣೆ ಅವರನ್ನು ಶ್ಲಾಘಿಸಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ನಟ ಅನುಪಮ್ ಖೇರ್ ಕೂಡ ದೀಪಿಕಾ ಅವರನ್ನು ಹೊಗಳಿದ್ದರು.

ಡಬಲ್ ಸ್ಟ್ಯಾಂಡರ್ಡ್:ಹೊಸ ಜಗತ್ತಿನಲ್ಲಿ ನೀವು ಯಾವುದನ್ನಾದರು ಅಥವಾ ಯಾರನ್ನಾದರು ಒಪ್ಪದಿದ್ದಾಗ ಟೀಕಿಸುವುದು ಮತ್ತು ಅವರ ಕೆಲಸವನ್ನು ನೀವು ಇಷ್ಟಪಟ್ಟಾಗ ಪ್ರಶಂಸಿಸುವುದನ್ನು ಡಬಲ್ ಸ್ಟ್ಯಾಂಡರ್ಡ್ ಎಂದು ಕರೆಯಲಾಗುತ್ತದೆ. ಇದು 'ನ್ಯಾಯ'ಸಮ್ಮತ ಎಂದು ಭಾವಿಸುತ್ತೇನೆ. ಯಾರು ನಮ್ಮ ಭಾರತದ ಹೆಸರನ್ನು ಜನಪ್ರಿಯಗೊಳಿಸುತ್ತಾರೋ ಅವರು ಸರ್ವಾನುಮತದ ಪ್ರಶಂಸೆಗೆ ಅರ್ಹರು ಎಂದು ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಲ್ಲದೇ ನಿರ್ದೇಶಕ ಅನುಪಮ್ ಖೇರ್ ಕೂಡ ದೀಪಿಕಾ ಪಡುಕೋಣೆ ಅವರನ್ನು ಹೊಗಳಿದ್ದಾರೆ. ಅನುಪಮ್ ಖೇರ್ ಅವರು ತಮ್ಮ ಸಂಸ್ಥೆಯಲ್ಲಿ ದೀಪಿಕಾ ಅವರ ಆರಂಭಿಕ ದಿನಗಳ ಹಳೇ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಅಭಿನಂದಿಸಿದ್ದಾರೆ.

ಬಾಲಿವುಡ್​ ಸೂಪರ್​ ಹಿಟ್ ಪಠಾಣ್​ ಚಿತ್ರದ ಬೇಶರಂ ರಂಗ್​ ಹಾಡು ವಿವಾದಕ್ಕೆ ಒಳಗಾಗಿದ್ದು ನಿಮಗೆಲ್ಲರಿಗೂ ತಿಳಿದಿದೆ. ಜನರು ಸೇರಿದಂತೆ ಚಿತ್ರರಂಗದವರಿಂದಲೂ ವಿರೋಧ ಇತ್ತು. ವಿವೇಕ್ ಅಗ್ನಿಹೋತ್ರಿ ಸಹ ಅಸಮಧಾನ ಹೊರಹಾಕಿದ್ದರು. ಆದ್ರೀಗ ಏಕಾಏಕಿ ನಟಿಯ ಬಗ್ಗೆ ಗುಣಗಾನ ಮಾಡಿರುವುದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. ಕೆಲವರು ವಿವೇಕ್ ಅಗ್ನಿಹೋತ್ರಿ ಅವರನ್ನು ಟೀಕಿಸಿದ್ದಾರೆ. ಬಳಿಕ ಡಬಲ್​ ಸ್ಟ್ಯಾಂಡರ್ಡ್​ ಬಗ್ಗೆ ವಿವೇಕ್ ಅಗ್ನಿಹೋತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:'ವಿರುಷ್ಕಾ ಪವರ್​ಫುಲ್ ಕಪಲ್​': ಕಂಗನಾ ರಣಾವತ್ ಗುಣಗಾನ

ದೀಪಿಕಾ ಪಡುಕೋಣೆ ಆಸ್ಕರ್ 2023ರ ಪ್ರೆಸೆಂಟರ್​​ ಆಗಿ ಆಯ್ಕೆ ಆಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇತ್ತೀಚೆಗೆ ವಿಶ್ವದ 9ನೇ ಸುಂದರಿ ಖ್ಯಾತಿಯ ದೀಪಿಕಾ ಪಡುಕೋಣೆ, ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಆಸ್ಕರ್ 2023ರ ಪ್ರೆಸೆಂಟರ್​​ ಪಟ್ಟಿಯನ್ನು ಶೇರ್ ಮಾಡಿದ್ದರು. ಈ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರು ಸಹ ಇದೆ. ಆಸ್ಕರ್ ಪ್ರಶಸ್ತಿ ಹಸ್ತಾಂತರ ಮಾಡುವವರ ಪೈಕಿ ಓರ್ವರಾಗಿ ಆಯ್ಕೆಯಾಗಿದ್ದು, ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ. ಇದೇ ಮಾರ್ಚ್ 12ರಂದು ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಭಾರತದ ಕಣ್ಣು ಈ ಕಾರ್ಯಕ್ರಮದ ಮೇಲೆ ನೆಟ್ಟಿದೆ. ನಾಟು ನಾಟು ಹಾಡು ಸೇರಿದಂತೆ ಎರಡು ಕಿರುಚಿತ್ರಗಳು ಆಸ್ಕರ್​ಗೆ ನಾಮನಿರ್ದೇಶನಗೊಂಡಿದೆ.

ಇದನ್ನೂ ಓದಿ:ಆಸ್ಕರ್ ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ: ಹೆಮ್ಮೆ ವ್ಯಕ್ತಪಡಿಸಿದ ಪತಿ ರಣ್​​ವೀರ್

ABOUT THE AUTHOR

...view details