ಕರ್ನಾಟಕ

karnataka

ETV Bharat / entertainment

'ಪರ್ವ' ಕಾದಂಬರಿ ಸಿನಿಮಾವಾಗಿ ತೆರೆಗೆ; ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದೇನು? - ಈಟಿವಿ ಭಾರತ ಕನ್ನಡ

ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ 'ಪರ್ವ' ಕಾದಂಬರಿಯನ್ನಾಧರಿಸಿ ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಸಿನಿಮಾ ಮಾಡುತ್ತಿದ್ದಾರೆ.

vivek agnihotri next movie parva
'ಪರ್ವ' ಕಾದಂಬರಿ ಸಿನಿಮಾವಾಗಿ ತೆರೆಗೆ; ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದೇನು?

By ETV Bharat Karnataka Team

Published : Oct 23, 2023, 12:45 PM IST

ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ 'ಪರ್ವ' ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 'ಪರ್ವ'ವನ್ನು ಸಿನಿಮಾ ಮಾಡಲಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಯಿತು. 'ದಿ ಕಾಶ್ಮೀರ್ ಫೈಲ್ಸ್', 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ 'ಪರ್ವ' ಕೃತಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಅಗ್ನಿಹೋತ್ರಿ, 'ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನೋಡಿ ಅವರು 'ಪರ್ವ' ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನು ಈ ಕಾದಂಬರಿಯಲ್ಲಿ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ಬರುತ್ತದೆ' ಎಂದು ತಿಳಿಸಿದರು.

ಬಳಿಕ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, ನಿರ್ಮಾಪಕಿ ಪಲ್ಲವಿ ಜೋಶಿ ಮಾತನಾಡಿ, 'ಪರ್ವ' ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. 'ಪರ್ವ' ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ" ಎಂದರು.

ಇದನ್ನೂ ಓದಿ:ಹಲವಾರು ಊರುಗಳನ್ನು ಸುತ್ತಿ ಬರೆದಿರುವ ಕಥನ 'ಪರ್ವ' ಕಾದಂಬರಿ: ಸಾಹಿತಿ ಎಸ್ ಎಲ್ ಭೈರಪ್ಪ

ನಂತರದಲ್ಲಿ ಮಾತನಾಡಿದ 'ಪರ್ವ' ಕಾದಂಬರಿಕಾರ ಎಸ್.ಎಲ್.ಭೈರಪ್ಪ, 'ಪರ್ವ' ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲಿಷ್​ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನು ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಆದರೆ ಕನ್ನಡದ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರಲಿಲ್ಲ ಎಂಬುದು ನೋವಿನ ಸಂಗತಿ" ಎಂದು ಹೇಳಿದರು.

'ಪರ್ವ' ಸಿನಿಮಾ ಎಸ್​.ಎಲ್​ ಭೈರಪ್ಪ ಅವರ ಕಾದಂಬರಿಯ ರೂಪಾಂತರ. ಸಂಸ್ಕೃತ ಮಹಾಕಾವ್ಯ 'ಮಹಾಭಾರತ' ಬಗೆಗಿನ ಕುರಿತಾದ ಕಾದಂಬರಿ. ಪ್ರಮುಖ ಪಾತ್ರಗಳ ಆಂತರಿಕ ಆಲೋಚನೆಗಳು ಮತ್ತು ದೃಷ್ಟಿಕೋನಗಳ ಸುತ್ತ ಕಥೆ ಸಾಗಿದೆ. ಎಸ್​.ಎಲ್​ ಭೈರಪ್ಪ ಅವರ ಬರಹ 'ಆಧುನಿಕ ಕ್ಲಾಸಿಕ್' ಎಂದು ಗುರುತಿಸಲ್ಪಟ್ಟಿದೆ. ವ್ಯಾಪಕ ಮೆಚ್ಚುಗೆಯನ್ನೂ ಸ್ವೀಕರಿಸಿದೆ. ಈ ಮೊದಲೇ ತಮ್ಮ ಹೊಸ ಸಿನಿಮಾ ಘೋಷಿಸಿದ್ದ ನಿರ್ದೇಶಕರು, ಚಿತ್ರದ ಫಸ್ಟ್ ಲುಕ್ ಅನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ:ಎಸ್.​ಎಲ್​​ ಭೈರಪ್ಪ ಅವರ 'ಪರ್ವ' ತೆರೆಮೇಲೆ: ಸಿನಿಮಾ ಘೋಷಿಸಿದ ಕಾಶ್ಮೀರ್ ಫೈಲ್ಸ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ABOUT THE AUTHOR

...view details