ಹೈದರಾಬಾದ್: ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಟ್ವಿಟರ್‌ನಲ್ಲಿ ಸಕ್ರಿಯವಾಗಿ ಯಾರ ಮುಲಾಜೂ ಇಲ್ಲದೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ವೊಂದನ್ನು ಪೋಸ್ಟ್ ಮಾಡಿ, 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ನಟ ನವಾಜುದ್ದಿನ್ ಸಿದ್ದಿಕಿ ಅವರನ್ನು ಪ್ರಶ್ನೆ ಮಾಡಿದ್ದರು. ನಂತರ ಅದೇನ್ ಅನ್ನಿಸಿತೋ ಏನೋ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು.
ಸಂದರ್ಶನದಲ್ಲಿ ನವಾಜುದ್ದೀನ್ ಸಿದ್ದಕಿ ಹೇಳಿದ್ದೇನು?:ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ 'ದಿ ಕೇರಳ ಸ್ಟೋರಿ' ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ನವಾಜುದ್ದಿನ್ ಸಿದ್ದಿಕಿ , ಒಂದು ಚಲನಚಿತ್ರವು 'ಯಾರನ್ನಾದರೂ ನೋಯಿಸಿದರೆ ಅದು ತಪ್ಪು ಮತ್ತು ಪ್ರೇಕ್ಷಕರಿಗೆ ಅಥವಾ ಅವರ ಭಾವನೆಗಳಿಗೆ ಧಕ್ಕೆ ತರುವ ಚಲನಚಿತ್ರಗಳನ್ನು ಮಾಡುವುದು ಸಮಂಜಸವಲ್ಲ, ಅಂಥ ಚಿತ್ರಗಳನ್ನು ಮಾಡುವುದು ತರವಲ್ಲ ಎಂದು ಹೇಳಿಕೊಂಡಿದ್ದರು.
ನವಾಜುದ್ದಿನ್ ಹೇಳಿಕೆಯನ್ನು ಖಂಡಿಸುವ ರೀತಿ ವಿವೇಕ್ ಆಗ್ನಿಹೋತ್ರಿ ಅವರು ತಮ್ಮ ಟೀಟ್ದಲ್ಲಿ ಬರೆದುಕೊಂಡಿದ್ದರು.' ಬಹುತೇಕ ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ಅನಗತ್ಯ ನಿಂದನೆ, ಹಿಂಸಾಚಾರದ ಸಂಬಂಧಿಸಿದ ಚಿತ್ರಗಳು OTT ಶೋಗಳಲ್ಲಿ ವಿಕೃತಿ ಅನುಭವಿಸುತ್ತವೆ, ಅವರ ಮಕ್ಕಳಿಗೆ ನೋವುಂಟು ಮಾಡುತ್ತವೆ… ನವಾಜ್ ಅವರ ಹೆಚ್ಚಿನ ಬಹುತೇಕ ಚಲನಚಿತ್ರಗಳು ಇಂತಹವುಗಳೇ ಹೆಚ್ಚು, OTT ಯಲ್ಲಿ ಸಿದ್ದಕಿ ಚಿತ್ರದ ಪ್ರದರ್ಶನಗಳನ್ನು ನಿಷೇಧಿಸಬೇಕೇ? ನಿಮ್ಮ ಅಭಿಪ್ರಾಯಗಳೇನು?” ಎಂದು ಟ್ವೀಟ್ ಮಾಡಿದ್ದರು. ನಂತರ ಆ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದರು.
ನಂತರ ಅದನ್ನು ವೀಕ್ಷಕರು ಸ್ಕ್ರೀನ್ಶಾಟ್ನಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆಗ ನವಾಜುದ್ದೀನ್ ಸಿದ್ದಿಕಿ ಅವರು 'ದಿ ಕೇರಳ ಸ್ಟೋರಿ' ಬ್ಯಾನ್ ಕುರಿತಾದ ಹೇಳಿಕೆಗಳು ವೈರಲ್ ಆಗಲು ಪ್ರಾರಂಭಿಸಿದ ತಕ್ಷಣ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಸಿನಿಮಾವನ್ನು ಬ್ಯಾನ್ ಮಾಡುವುದನ್ನು ನಾನು ಎಂದಿಗೂ ಬಯಸುವುದಿಲ್ಲ ಎಂದು ನವಾಜ್ ಕೂಡಾ ತಿಳಿಸಿದ್ದರು.