ಕರ್ನಾಟಕ

karnataka

ETV Bharat / entertainment

'ಕಣ್ಣಪ್ಪ' ಶೂಟಿಂಗ್​ ಸೆಟ್​ನಲ್ಲಿ ಅವಘಡ: ನಟ ವಿಷ್ಣು ಮಂಚುಗೆ ಗಾಯ!

Vishnu Manchu Injured: 'ಕಣ್ಣಪ್ಪ' ಶೂಟಿಂಗ್​ ಸೆಟ್​ನಲ್ಲಿ ಅವಘಡ ಸಂಭವಿಸಿ, ನಟ ವಿಷ್ಣು ಮಂಚು ಗಾಯಗೊಂಡಿದ್ದಾರೆ.

Vishnu Manchu Injured
ನಟ ವಿಷ್ಣು ಮಂಚುಗೆ ಗಾಯ

By ETV Bharat Karnataka Team

Published : Oct 30, 2023, 10:20 AM IST

Updated : Oct 30, 2023, 10:38 AM IST

ಸೌತ್​ ಸಿನಿಮಾ ಇಂಡಸ್ಟ್ರಿಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಕಣ್ಣಪ್ಪ'. ಸ್ಟೋರಿ, ಬಿಗ್ ಸ್ಟಾರ್ ಕಾಸ್ಟ್, ಬಿಗ್ ಬಜೆಟ್​​ ಮೂಲಕ ಗಮನ ಸೆಳೆಯುತ್ತಿದೆ. ಆದರೆ, ನಟ ವಿಷ್ಣು ಮಂಚು ಅವರು ಶೂಟಿಂಗ್ ಸೆಟ್​ನಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

ಹೌದು, ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಣ್ಣಪ್ಪ' ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನ್ಯೂಜಿಲೆಂಡ್​ನಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಡ್ರೋನ್ ಕ್ಯಾಮರಾ ನಿಯಂತ್ರಣ ತಪ್ಪಿ ವಿಷ್ಣು ಮಂಚು ಅವರ ಮೇಲೆ ಅಪ್ಪಳಿಸಿದೆ ಎಂದು ವರದಿ ಆಗಿದೆ. ಸದ್ಯ ಚಿತ್ರೀಕರಣ ಸ್ಥಗಿತಗೊಂಡಿದೆ. ಆದರೆ, ಈ ಬಗ್ಗೆ ನಾಯಕ ನಟ ವಿಷ್ಣು ಮಂಚು ಅಥವಾ ಚಿತ್ರತಂಡ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ಕಣ್ಣಪ್ಪ' ಸಿನಿಮಾ ಕುರಿತು... ತೆಲುಗು ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ವಿಷ್ಣು ಮಂಚು ಅವರ ಕನಸಿನ ಯೋಜನೆ 'ಕಣ್ಣಪ್ಪ'. ಈ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿಸುತ್ತಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಮಾಡಿದ ಎಲ್ಲ ಕಲಾಕೃತಿಗಳನ್ನು (Art work) ಈಗಾಗಲೇ ನ್ಯೂಜಿಲೆಂಡ್‌ಗೆ ಸ್ಥಳಾಂತರಿಸಲಾಗಿದೆ. ಬಿಗ್​​ ಬಜೆಟ್‌ನಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಖ್ಯಾತ ನಟ ಮೋಹನ್ ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಬಿಗ್​​ ಬಜೆಟ್​ + ಬಿಗ್​ ಸ್ಟಾರ್ ಕಾಸ್ಟ್:ಕಣ್ಣಪ್ಪ ಸಿನಿಮಾಗೆ ಮೊದಲು ನಾಯಕಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್​​ ಸಹೋದರಿ ನೂಪುರ್ ಸನೋನ್ ಆಯ್ಕೆ ಆಗಿದ್ದರು. ಆದರೆ ಶೂಟಿಂಗ್​ ಡೇಟ್ಸ್ ವ್ಯತ್ಯಯ ಹಿನ್ನೆಲೆ, ಅವರು ಈ ಯೋಜನೆಯಿಂದ ಹೊರಗುಳಿದಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಲೇಡಿ ಸೂಪರ್ ಸ್ಟಾರ್ ನಯನತಾರಾ, ಕರುನಾಡ ಚಕ್ರವರ್ತಿ ಶಿವ ರಾಜ್​​ಕುಮಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪರುಚೂರಿ ಗೋಪಾಲ ಕೃಷ್ಣ, ಸಾಯಿ ಮಾಧವ್ ಬುರಾ ಮತ್ತು ತೋಟ ಪ್ರಸಾದ್ ಈ ಚಿತ್ರದ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಣಿ ಶರ್ಮಾ ಮತ್ತು ಮಲಯಾಳಂ ಸಂಗೀತ ನಿರ್ದೇಶಕ ಸ್ಟೀಫನ್ ದೇವಸಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ:ಟ್ರೋಲ್ಸ್​ಗೆ ಡೋಂಟ್​ ಕೇರ್: ಟ್ರೋಲರ್​ಗಳನ್ನೇ ಟ್ರೋಲ್ ಮಾಡಿದ ದೀಪಿಕಾ ಪಡುಕೋಣೆ!

ಭಕ್ತ ಕಣ್ಣಪ್ಪನ ಭಕ್ತಿ ಹಾಗೂ ಅವರ ಹಿರಿಮೆಯನ್ನು ಇಂದಿನ ಪೀಳಿಗೆಗೆ ರವಾನಿಸುವ ಉದ್ದೇಶದೊಂದಿಗೆ ಬಿಗ್​ ಬಜೆಟ್​ನಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಮಾಡುತ್ತಿದ್ದೇವೆ. ಆಧುನಿಕ ತಾಂತ್ರಿಕ ಸೌಲಭ್ಯ ಬಳಸಿಕೊಳ್ಳಲಿದ್ದೇವೆ. ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮುಗಿಸುತ್ತೇವೆ ಎಂದು ಸಿನಿಮಾ ಲಾಂಚ್ ಈವೆಂಟ್​ನಲ್ಲಿ ವಿಷ್ಣು ಮಂಚು ತಿಳಿಸಿದ್ದರು.

ಇದನ್ನೂ ಓದಿ:'ಟಗರು ಪಲ್ಯ'ಗೆ ಫುಲ್​ ಡಿಮ್ಯಾಂಡ್​​; ಸಿನಿಮಾ ರಿಮೇಕ್​ಗೂ ಹೆಚ್ಚಾಯ್ತು ಬೇಡಿಕೆ

Last Updated : Oct 30, 2023, 10:38 AM IST

ABOUT THE AUTHOR

...view details