ಕರ್ನಾಟಕ

karnataka

ETV Bharat / entertainment

'ಅನುಷ್ಕಾ ನನ್ನ ಸ್ಫೂರ್ತಿ, ಶಕ್ತಿ': ಪತ್ನಿ ಬಗ್ಗೆ ವಿರಾಟ್​ ಕೊಹ್ಲಿ ಹೃದಯಸ್ಪರ್ಶಿ ಮಾತು - virat anushka love

ಇತ್ತೀಚಿನ ಸಂದರ್ಶನವೊಂದರಲ್ಲಿ ಕ್ರಿಕೆಟಿಗ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಗುಣಗಾನ ಮಾಡಿದ್ದಾರೆ.

virat kohli anushka sharma
ಅನುಷ್ಕಾ ಶರ್ಮಾ - ವಿರಾಟ್​ ಕೊಹ್ಲಿ

By

Published : Mar 1, 2023, 2:24 PM IST

Updated : Mar 1, 2023, 2:52 PM IST

ವಿರಾಟ್​ ಕೊಹ್ಲಿ ಭಾರತ ತಂಡದ ಶ್ರೇಷ್ಠ ಕ್ರಿಕೆಟಿಗ. ಅನುಷ್ಕಾ ಶರ್ಮಾ ಸಿನಿಮಾ ಲೋಕದ ಸಾಧಕಿ. ಈ ತಾರಾ ದಂಪತಿಗಿದೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ. ಪ್ರೀತಿಸಿ, ವೈವಾಹಿಕ ಬಂಧನಕ್ಕೊಳಗಾಗಿರುವ ಈ ಸ್ಟಾರ್​ ಕಪಲ್​ ಅದೆಷ್ಟೋ ಮಂದಿಗೆ ಮಾದರಿ. ಇವರ ಪ್ರೀತಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಇದೀಗ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಗುಣಗಾನ ಮಾಡುವ ಮೂಲಕ ಅಭಿಮಾನಿಗಳ ಮನ ಸೆಳೆದಿದ್ದಾರೆ.

ಅನುಷ್ಕಾ ಬಗ್ಗೆ ಹೃದಯಸ್ಪರ್ಶಿ ಮಾತು: ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ. ತಮ್ಮ ಜೀವನದಲ್ಲಿ ಪ್ರೀತಿ ತುಂಬಿದ್ದಕ್ಕಾಗಿ ತಮ್ಮ ಪತ್ನಿ ಅನುಷ್ಕಾ ಶರ್ಮಾರಿಗೆ ನಾನು ಎಂದೆಂದಿಗೂ ಕೃತಜ್ಞರಾಗಿರುತ್ತೇನೆ ಎಂದು ತಿಳಿಸಿದ್ದಾರೆ. ಸಂದರ್ಶನದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಬಗ್ಗೆ ಮಾತನಾಡಿದ್ದು, ಪತ್ನಿ ಅನುಷ್ಕಾ ಶರ್ಮಾ ಬಗೆಗಿನ ಮಾತು ಅಭಿಮಾನಿಗಳ ಹೃದಯ ಕದ್ದಿದೆ.

ವಿರಾಟ್​ ಕೊಹ್ಲಿ - ಅನುಷ್ಕಾ ಶರ್ಮಾ

ಅನುಷ್ಕಾ ನನ್ನ ಸ್ಫೂರ್ತಿ, ಶಕ್ತಿ:ಅನುಷ್ಕಾ ಶರ್ಮಾ ಅವರ ಗರ್ಭಾವಸ್ಥೆ ಪ್ರಯಾಣವು ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡಿತು. ತನ್ನ ಪಿತೃತ್ವದ ಪ್ರಯಾಣವು ತುಂಬಾ ವಿಶೇಷವಾಗಿದೆ. ಆದರೆ ಅನುಷ್ಕಾರಿಗೆ ಹೆಚ್ಚು ವಿಶೇಷ. ತಮ್ಮ ಮಗುವನ್ನು ಜಗತ್ತಿಗೆ ಪರಿಚಯಿಸುವುದು ಪೋಷಕರಿಗೆ ಒಂದು ವಿಶೇಷ ಭಾವನೆ. ಆದರೆ ನಿರ್ದಿಷ್ಟವಾಗಿ, ತಾಯಿಯಾದವಳಿಗೆ ಇದು ಜೀವನವನ್ನೇ ಬದಲಾಯಿಸುತ್ತದೆ. ಇದು ನನ್ನ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸಿದ ಪ್ರಕ್ರಿಯೆ ಎಂದು ವಿರಾಟ್​ ಕೊಹ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಸಾಗರದಾಚೆ ಭಾರತೀಯ ಸಿನಿಮಾ​ ಸದ್ದು: ಅಮೆರಿಕದ ಥಿಯೇಟರ್​ನಲ್ಲಿಂದು ಆರ್​ಆರ್​ಆರ್​ ಶೋ!

ತಾಯಿಯ (ಅನುಷ್ಕಾ) ಸಂಪೂರ್ಣ ಜೀವನ ಶೈಲಿ ಬದಲಾಗಿದೆ. ಅನುಷ್ಕಾ ತಮ್ಮ ಹಾದಿಯಲ್ಲಿ ಬರುವ ಪ್ರತಿ ಅಡೆತಡೆಗಳನ್ನು ನಿಭಾಯಿಸುತ್ತಾ ಚೇತರಿಸಿಕೊಳ್ಳುತ್ತಾರೆ. ನಾನು ಎಲ್ಲದಕ್ಕೂ ಸಾಕ್ಷಿಯಾಗಿದ್ದೇನೆ. ನಾನು ಪರಿವರ್ತನೆಗೆ ಸಾಕ್ಷಿಯಾಗಿದ್ದೇನೆ. ಅನುಷ್ಕಾ ಸಹಿಸಿಕೊಂಡದ್ದನ್ನು ಹೋಲಿಸಿದರೆ ನನ್ನ ಹೋರಾಟಗಳು ಕ್ಷುಲ್ಲಕ ಎಂದು ಹೇಳಿಕೊಳ್ಳಲು ನನಗೆ ಧೈರ್ಯ ಮತ್ತು ಪ್ರೇರಣೆ ನೀಡಿದೆ ಎಂದು ಹೇಳಿದರು. ಅನುಷ್ಕಾ ಮಾಡಿದ ತ್ಯಾಗವನ್ನು ಕಣ್ಣಾರೆ ಕಂಡಾಗ ಅದು ತನ್ನ ಜೀವನದ ದೃಷ್ಟಿಕೋನವನ್ನೇ ಬದಲಿಸಿದೆ ಎಂದು ಸಹ ತಳಿಸಿದರು.

2017ರಲ್ಲಿ ದಾಂಪತ್ಯ ಜೀವನ ಆರಂಭ:ತಾರಾಲೋಕದಲ್ಲಿ ಅತ್ಯಂತ ಜನಪ್ರಿಯ ಜೋಡಿಗಳಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರ ಡಿಸೆಂಬರ್ 11 ರಂದು ಇಟಲಿಯಲ್ಲಿ ವಿವಾಹವಾದರು. ಈ ದಂಪತಿ 2021ರ ಜನವರಿ 11 ರಂದು ವಮಿಕಾ ಎಂಬ ಹೆಣ್ಣು ಮಗುವಿನ ಪೋಷಕರಾಗಿ ಬಡ್ತಿ ಪಡೆದಿದ್ದಾರೆ.

ಇದನ್ನೂ ಓದಿ:ಆಸ್ಕರ್​ನಲ್ಲೂ ನಾಟು ನಾಟು ರಂಗು.. ವೇದಿಕೆಯಲ್ಲಿ ಮೊಳಗಲಿದೆ ಕಾಲಭೈರವ, ರಾಹುಲ್ ಗಾಯನ

ಇನ್ನೂ ಸಖತ್​ ಸುದ್ದಿಯಲ್ಲಿರುವ "ಚಕ್ಡಾ ಎಕ್ಸ್‌ಪ್ರೆಸ್" ಚಲನಚಿತ್ರದಲ್ಲಿ ಅನುಷ್ಕಾ ಭಾರತದ ಬೌಲರ್ ಜೂಲನ್ ಗೋಸ್ವಾಮಿ ಪಾತ್ರ ನಿರ್ವಹಿಸುತ್ತಿದ್ದಾರೆ. ಕಾಲಾ ಚಿತ್ರದಲ್ಲಿಯೂ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಆಸ್ಕರ್​ನಲ್ಲೂ ನಾಟು ನಾಟು ರಂಗು.. ವೇದಿಕೆಯಲ್ಲಿ ಮೊಳಗಲಿದೆ ಕಾಲಭೈರವ, ರಾಹುಲ್ ಗಾಯನ

Last Updated : Mar 1, 2023, 2:52 PM IST

ABOUT THE AUTHOR

...view details