ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿಯ ಬದುಕಿನ ಪ್ರತಿ ಸಣ್ಣ ವಿಷಯವೂ ಕೂಡ ವೈರಲ್ ಆಗುವುದು ಸಾಮಾನ್ಯವಾಗಿಬಿಟ್ಟಿದೆ. ಈ ತಾರಾ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಲು ಅವರ ಅಭಿಮಾನಿಗಳಂತೂ ಬಹಳ ಉತ್ಸುಕರಾಗಿರುತ್ತಾರೆ. ಇದೀಗ ಇವರಿಬ್ಬರ 'ಮುಂಬೈ ಏರ್ಪೋರ್ಟ್ ಲುಕ್' ವೈರಲ್ ಆಗಿದೆ. ವಿಡಿಯೋದಲ್ಲಿ ಪತ್ನಿ ಅನುಷ್ಕಾ ಶರ್ಮಾ ಮೇಲೆ ಪತಿ ವಿರಾಟ್ ಕೊಹ್ಲಿ ಕೋಪಗೊಂಡರಾ? ಎನ್ನುವ ಅನುಮಾನ ಮೂಡಿದೆ.
ಯುರೋಪ್ ಪ್ರವಾಸದಿಂದ ಅನುಷ್ಕಾ, ವಿರಾಟ್ ಮತ್ತು ಪುಟಾಣಿ ವಮಿಕಾ ಕಳೆದ ರಾತ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಎಂದಿನಂತೆ ಸಿಂಪಲ್ ಹಾಗು ಕ್ಯೂಟ್ ಆಗಿ ದಂಪತಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅನುಷ್ಕಾ ಅವರ ನಡೆಯಿಂದ ವಿರಾಟ್ ಕೋಪಗೊಂಡರು ಎಂದು ತಿಳಿದುಬಂದಿದೆ.