ಕರ್ನಾಟಕ

karnataka

ETV Bharat / entertainment

ವಿರಾಟ್​ ಡಕ್​ ಔಟ್​ ಬಗ್ಗೆ ಕಾಲೆಳೆದ ಅನುಷ್ಕಾ: ಸಿನಿಮೀಯ ಡೈಲಾಗ್​ನಲ್ಲಿ ಪ್ರತ್ಯುತ್ತರ ನೀಡಿದ ವಿರಾಟ್​.. ಸಂಭಾಷಣೆ ಇಲ್ಲಿದೆ ನೋಡಿ - ETV Bharath Kannada news

ಫೇಮಸ್​ ಸ್ಟಾರ್​ ಕಪಲ್​ಗಳಾದ ವಿರಾಟ್​ ಮತ್ತು ಅನುಷ್ಕಾ ಅವರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕೊಟ್ಟ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Virat Kohli earns a kiss, hug from Anushka Sharma as he surprises her with dialogue from Band Baaja Baaraat
ವಿರಾಟ್​ ಡಕ್​ ಔಟ್​ ಬಗ್ಗೆ ಕಾಲೆಳೆದ ಅನುಷ್ಕಾ

By

Published : May 27, 2023, 3:45 PM IST

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯವಾಗಿರುವ ಸ್ಟಾರ್​ ಜೋಡಿಗಳಲ್ಲಿ ವಿರಾಟ್ ಕೊಹ್ಲಿ​ ಮತ್ತು ಅನುಷ್ಕಾ ಶರ್ಮಾ ಸಹ ಸೇರುತ್ತಾರೆ. ಒಬ್ಬರಿಗೊಬ್ಬರು ಪ್ರೋತ್ಸಾಹಿಸುತ್ತಾ, ಒಬ್ಬರನ್ನೊಬ್ಬರು ಬೆಂಬಲಿಸುತ್ತಾ ಬಂದಿದ್ದಾರೆ. ವಿರುಷ್ಕಾ ಎಂದೇ ಈ ಜೋಡಿಗೆ ಉಪನಾಮ ಹುಟ್ಟಿಕೊಂಡಿದೆ. ಈ ದಂಪತಿಗೆ ಮುದ್ದಾದ ಮಗಳೂ ಇದ್ದು, ವಮಿಕಾ ಎಂದು ಹೆಸರಿಟ್ಟಿದ್ದಾರೆ.

ಈ ವರ್ಷ ಕ್ರಿಕೆಟ್​ನಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿರುವ ವಿರಾಟ್​ ಸೋಷಿಯಲ್​ ಮೀಡಿಯಾದಲ್ಲೂ ಉತ್ತಮ ಲಯ ಕಂಡುಕೊಂಡಿದ್ದಾರೆ. ವಿರಾಟ್​ ಇನ್​ಸ್ಟಾಗ್ರಾಂ ಖಾತೆ 250 ಮಿಲಿಯನ್​ ಹಿಂಬಾಲಕರನ್ನು ಪಡೆಯುವ ಮೂಲಕ ದಾಖಲೆ ನಿರ್ಮಾಣವಾಗಿದೆ.

ಇತ್ತಿಚೆಗೆ ನಡೆದ ವಿರಾಟ್​ ಮತ್ತು ಅನುಷ್ಕಾ ಅವರ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕಳೆದ ತಿಂಗಳು ಪೂಮಾದ 'ಲೆಟ್ ದೇರ್ ಬಿ ಸ್ಪೋರ್ಟ್ಸ್' ಅಭಿಯಾನದಲ್ಲಿ ಇಬ್ಬರೂ ಕಾಣಿಸಿಕೊಂಡರು. ಇದರಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಲ್ಲದೇ ಕೆಲ ಚಟುವಟಿಕೆಗಳನ್ನು ವಿರುಷ್ಕಾ ಜೋಡಿ ಮಾಡಿದೆ. ಅನುಷ್ಕಾ ವಿರಾಟ್​ ಅವರನ್ನು ತಮಾಷೆ ಮಾಡಿ ಕಾಲೆಳೆದ ಹಾಸ್ಯ ದೃಶ್ಯಗಳು ವೈರಲ್​ ಆಗುತ್ತಿದೆ.

ಸೋಷಿಯಲ್​ ಮೀಡಿಯಾದಲ್ಲಿ ಹರಿದಾಟುತ್ತಿರುವ ವಿಡಿಯೋದಲ್ಲಿ, ವಿರಾಟ್​ ಅವರ ಫೋನ್​ ಬಂದಾಗ ಯಾವ ರೀತಿ ಕರೆಯನ್ನು ಸ್ವೀಕರಿಸುತ್ತೀರಿ ಎಂದು ಅನುಷ್ಕಾಗೆ ಕೇಳಲಾದ ಪ್ರಶ್ನೆಗೆ, ಅವರು ನಕ್ಕು "ಪತಿ ಪರಮೇಶ್ವರ್ (ಗಂಡ)", ಮತ್ತು "ಓಜಿ ಮತ್ತು ಸುನಿಯೇ ಜಿ" ಎಂದು ಹೇಳಿದರು.

ಏಪ್ರಿಲ್ 23, 2023 ರಂದು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್ ಅವರ ಗೋಲ್ಡನ್ ಡಕ್ ಬಗ್ಗೆ ಅನುಷ್ಕಾ ಕಾಲೆಳೆದಿದ್ದಾರೆ. "ಆಜ್ 24 ಏಪ್ರಿಲ್ ಹೈ, ಆಜ್ ತೋ ರನ್ ಬನಾ ಲೆ ಕೊಹ್ಲಿ (ಇಂದು ಏಪ್ರಿಲ್ 24, ಇಂದು ಕನಿಷ್ಠ ರನ್ ಸ್ಕೋರ್ ಮಾಡಿ)," ಎಂದು ಅನುಷ್ಕಾ ಹೇಳುತ್ತಾರೆ. ಇದಕ್ಕೆ ನಕ್ಕ ವಿರಾಟ್​ ಕೊಹ್ಲಿ ಕಮ್​ಬ್ಯಾಕ್​ ಮಾಡಲಾದರೂ ಅವಕಾಶ ಕೊಡು ಎಂದು ಪತ್ನಿಗೆ ಹೇಳಿದ್ದಾರೆ.

ಇದಾದ ನಂತರ ವಿರಾಟ್​ "ಇಡೀ ಟೀಮ್​ ಎಪ್ರಿಲ್​, ಮೇ, ಜೂನ್​, ಜುಲೈನಲ್ಲಿ ಮಾಡಿದ ರನ್​ಗಳನ್ನು ನಾನು ಮ್ಯಾಚ್​ ಆಡಿದ್ದೇನೆ" ಎಂದು ಸಿನಿಮಾ ರೀತಿಯ ಪಂಚ್​ ಡೈಲಾಗ್​ ಹೊಡೆದಿದ್ದಾರೆ. ನಂತರ ಬೌಲರ್​ ವಿಕೆಟ್​ ತೆಗೆದಾಗ ವಿರಾಟ್​ ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನೂ ಸಹ ಅನುಷ್ಕಾ ನಟಿಸಿ ತೋರಿಸಿ, ಕೆಲವೊಮ್ಮ ಬೌಲರ್​ ಕೂಡಾ ವಿರಾಟ್​ ಅಷ್ಟು ಸಂಭ್ರಮಿಸುವುದಿಲ್ಲ ಎಂದಿದ್ದಾರೆ. ಇದಕ್ಕೆ ವಿರಾಟ್​, ಅದು ಸಮಯಕ್ಕೆ ಉತ್ಸಾಹದಲ್ಲಿ ಮಾಡಿರುತ್ತೇನೆ. ಆಗಾಗ ಅದನ್ನೇ ತೋರಿಸಬೇಡಿ ನನಗೆ ಮುಜುಗರ ಆಗುತ್ತದೆ ಎಂದಿದ್ದಾರೆ.

ವಿರಾಟ್​ ಕೊಹ್ಲಿಗೆ ಸಿನಿಮಾದ ಡೈಲಾಗ್​ ಹೇಳುವಂತೆ ಹೇಳಲಾಗುತ್ತದೆ. ಬ್ಯಾಂಡ್ ಬಾಜಾ ಬಾರಾತ್‌ನ ಅತ್ಯಂತ ಪ್ರಸಿದ್ಧ ದೃಶ್ಯದ ಡೈಲಾಗ್​ ಒಂದನ್ನು ಅನುಷ್ಕಾ ಹೇಳುತ್ತಾರೆ. ಇದನ್ನು ವಿರಾಟ್​ ಮತ್ತೆ ಹೇಳಬೇಕು ಎನ್ನಲಾಗಿತ್ತು. ಆದರೆ, ವಿರಾಟ್​ ಸಂಭಾಷಣೆ ಮುಂದಿನ ಸಾಲನ್ನು ಪೂರ್ತಿ ಮಾಡಿದ್ದರು. ಇದನ್ನು ಕೇಳಿ ಅನುಷ್ಕಾಗೆ ಇಮ್ಮಡಿ ಸಂತೋಷವಾಗಿದ್ದು, ಅವರು ವೇದಿಕೆಯಲ್ಲಿ "ಮುಝೆ ಐಸಿ ಫೀಲಿಂಗ್ ಆಯಿ ಜೈಸೆ ಮೆರೆಕೊ ಕರ್ ದಿಯಾ ಹೋ ಪ್ರೊಪೋಸ್. (ಅವನು ನನಗೆ ಪ್ರಪೋಸ್ ಮಾಡಿದ ಹಾಗೆ ಅನಿಸುತ್ತಿದೆ.)" ಎಂದು ಹೇಳಿದರು. ಇವರ ಈ ಸಂಭಾಷಣೆಯ ವಿಡಿಯೋ ಜಾಲತಾಣಗಳನ್ನು ಭರ್ಜರಿ ವೀಕ್ಷಣೆ ಪಡೆಯುತ್ತಿದೆ. ಅಲ್ಲದೇ ಈ ಜೋಡಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಗಿಲ್​ ಅಬ್ಬರ... ಮೋಹಿತ್ ಮೋಡಿ.. ಸತತ ಎರಡನೇ ಬಾರಿ ಐಪಿಎಲ್ ಫೈನಲ್​ಗೆ ಗುಜರಾತ್​ ಎಂಟ್ರಿ

ABOUT THE AUTHOR

...view details