ಮಾಜಿ ವಿಶ್ವಸುಂದರಿ, ಹಿಂದಿ ಚಿತ್ರರಂಗದ ಜನಪ್ರಿಯ, ಬಹುಬೇಡಿಕೆ ನಟಿ ಸುಶ್ಮಿತಾ ಸೇನ್ ಅವರು ತಮ್ಮ ಪುತ್ರಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಕಿರಿಯ ಮಗಳು ಆಲಿಶಾ ಅವರನ್ನು ಪ್ಯಾರೀಸ್ಗೆ ಕರೆದೊಯ್ದಿದ್ದಾರೆ. ಅಲಿಶಾ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲಿದ್ದಾರೆ. ಅದಕ್ಕೂ ಮುಂಚಿತವಾಗಿ ಮಗಳ ಮೂಡ್ ಚೇಂಚ್ ಮಾಡಲು ಹಾಗೂ ಆಕೆಯನ್ನು ಹುರಿದುಂಬಿಸಲು ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಅನ್ನು ತೋರಿಸಿದ್ದಾರೆ.
ಅಲಿಶಾ ಇದೇ ಮೊದಲ ಬಾರಿ ಪ್ಯಾರೀಸ್ ನೋಡುತ್ತಿರುವುದು. ಇಲ್ಲಿ ಸುಶ್ಮಿತಾ ತಮ್ಮ ಮಗಳೊಂದಿಗೆ ಸುಂದರ ಕ್ಷಣ ಕಳೆದಿದ್ದಾರೆ. ಸಾಕಷ್ಟು ಮೋಜು ಮಸ್ತಿ ಮಾಡಿದ್ದಾರೆ. ಮಗಳೊಂದಿಗೆ ಸೇರಿಕೊಂಡು ಐಫೆಲ್ ಟವರ್ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಆಲಿಶಾ ಇದೆಲ್ಲಾ ಕಂಡು ತುಂಬಾ ಖುಷಿಯಾಗಿದ್ದಾರೆ. ಪ್ಯಾರೀಸ್ ಪ್ರವಾಸದ ಸುಂದರ ನೋಟದ ವಿಡಿಯೋ ಮತ್ತು ಫೋಟೋಗಳನ್ನು ನಟಿ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಸುಶ್ಮಿತಾ ಸೇನ್ ಶೇರ್ ಮಾಡಿಕೊಂಡಿರುವ ಪೋಸ್ಟ್ನಲ್ಲಿ, ಅವರು ತಮ್ಮ ಮಗಳು ಆಲಿಶಾಳೊಂದಿಗೆ ಐಫೆಲ್ ಟವರ್ ಮುಂದೆ ನೃತ್ಯ ಮಾಡುತ್ತಿದ್ದಾರೆ. ಮಾಜಿ ಸುಂದರಿ ಎಂದಿನಂತೆ ಸುಂದರವಾಗಿಯೇ ಕಾಣುತ್ತಿದ್ದಾರೆ. ಸುಶ್ಮಿತಾ ಕಪ್ಪು ಮಿನಿ ಡ್ರೆಸ್ ಮೇಲೆ ಬಿಳಿ ಬ್ಲೇಜರ್ ಧರಿಸಿದ್ದಾರೆ. ಆಲಿಶಾ ಕೂಡ ಬಿಳಿ ಬಣ್ಣದ ಕಾಸ್ಟ್ಯೂಮ್ನಲ್ಲಿ ತುಂಬಾ ಮುದ್ದಾಗಿ ಕಂಡಿದ್ದಾರೆ.
"ನನ್ನ ಮಗಳ ಮೊದಲ ಪ್ಯಾರೀಸ್ ಪ್ರವಾಸ. ನಂತರ ಅವರು ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಸಮಯ ಎಷ್ಟು ಬೇಗನೆ ಹಾದು ಹೋಗುತ್ತದೆ. ಆದರೆ ನಾನು ಯಾವಾಗಲೂ ಈ ನೃತ್ಯವನ್ನು ನೋಡುತ್ತಿರುತ್ತೇನೆ. ಅವಳನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಸುಶ್ಮಿತಾ ಸೇನ್ ತಾವು ಹಂಚಿಕೊಂಡಿರುವ ಪೋಸ್ಟ್ಗೆ ಕ್ಯಾಪ್ಶನ್ ನೀಡಿದ್ದಾರೆ.