ಕರ್ನಾಟಕ

karnataka

ETV Bharat / entertainment

ವಿನೋದ್ ಪ್ರಭಾಕರ್ ಲಂಕಾಸುರನಿಗೆ ಸಿಕ್ತು ಕನಸಿನ ರಾಣಿಯ ಸಪೋರ್ಟ್ - ETV Bharat kannada News

ಜಬರ್​ದಸ್ತ್ ಆ್ಯಕ್ಷನ್​ಗಳಿಂದ ಕೂಡಿರುವ ಲಂಕಾಸುರ ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿದೆ.

Lancasura film team
ಲಂಕಾಸುರ ಚಿತ್ರ ತಂಡ

By

Published : Feb 13, 2023, 11:11 AM IST

ವಿಭಿನ್ನವಾಗಿ ಮಾಸ್ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿರೋ ನಟ ವಿನೋದ್ ಪ್ರಭಾಕರ್ ಅವರ ಬಹು ನಿರೀಕ್ಷಿತ ಚಿತ್ರ ಲಂಕಾಸುರ. ವಿನೋದ್ ಪ್ರಭಾಕರ್ ಅಭಿನಯದ ಚಿತ್ರಗಳು ಅಂದಮೇಲೆ ಮಾಸ್ ಪ್ರಿಯರಿಗೆ ಜಬರ್​ದಸ್ತ್ ಆ್ಯಕ್ಷನ್​​ಗಳಿಗೆ ಕೊರತೆ ಇರುವುದಿಲ್ಲ. ಜೊತೆಗೆ ರಗಡ್ ಲುಕ್ ಹಾಗೂ ಟೀಸರ್ ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿ ಟಾಕ್ ಆಗುತ್ತಿರುವ ಲಂಕಾಸುರ ಸಿನಿಮಾ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಮಾಡಿರೋ‌ ಚಿತ್ರ ತಂಡ ಮೊದಲ ರೊಮ್ಯಾಂಟಿಕ್ ಹಾಡೊಂದನ್ನು ರಿವೀಲ್ ಮಾಡಿದೆ.

ಸಾಂಗ್​ ರೀವಿಲ್​ ಮಾಡಿದ ನಟಿ ಮಾಲಶ್ರೀ :ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿರುವ ಈ ಚಿತ್ರದ ಹಾಡನ್ನು ಕನಸಿನ ರಾಣಿ ಮಾಲಾಶ್ರೀ ಚಿತ್ರದ ಹಾಡನ್ನು ಅನಾವರಣ ಮಾಡುವ ಮೂಲಕ ಸಾಥ್ ನೀಡಿದರು. A2 music ಮೂಲಕ ಈ ಹಾಡು ಬಿಡುಗಡೆಯಾಗಿದ್ದು, ಸಮಾರಂಭದಲ್ಲಿ ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಬಂದು ವಿನೋದ್ ಪ್ರಭಾಕರ್ ಚಿತ್ರಕ್ಕೆ ಸಾಥ್ ನೀಡಿದರು.

ನಟ ವಿನೋದ್ ಪ್ರಭಾಕರ್ ದಂಪತಿಗಳು

ನಂತರ ಮಾತನಾಡಿದ ನಟಿ ಮಾಲಾಶ್ರೀ ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಚಿತ್ರ ತಂಡಕ್ಕೆ ಶುಭಾಶಯ ಕೋರಿದ ನಟಿ ಶೃತಿ :ಇನ್ನೂ ಇದೇ ವೇಳೆ ವೇದಿಕೆ ಮೇಲೆ ಇದ್ದ ನಟಿ ಶೃತಿ ಅವರು ಮಾತನಾಡಿ ನಾನು ಪ್ರಭಾಕರ್ ಅವರ ಜೊತೆ ನಟಿಸಿದ್ದೆ. ಈಗ "ಮಾದೇಶ" ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದೇನೆ.‌ "ಲಂಕಾಸುರ" ಚಿತ್ರದ ಮೂಲಕ ವಿನೋದ್ ಹಾಗೂ ನಿಶಾ ನಿರ್ಮಾಪಕರು ಆಗಿದ್ದಾರೆ. ಇವರಿಗೆ ಒಳ್ಳೆಯದಾಗಲಿ ಅಂತಾ ಹಾರೈಸಿದರು. ಈ ಸಮಯದಲ್ಲಿ ನಟ ಶ್ರೀನಗರ ಕಿಟ್ಟಿ‌, ನಿರ್ಮಾಪಕ ಎಂ.ಜಿ. ರಾಮಮೂರ್ತಿ ಸೇರಿದಂತೆ ಅನೇಕ ಗಣ್ಯರು ತಮ್ಮ ಮಾತುಗಳ ಮೂಲಕ ಶುಭಾಶಯ ಕೋರಿದರು.

ಲಂಕಾಸುರ ಚಿತ್ರದ ಬಗ್ಗೆ ಮಾತನಾಡಿದ ನಟ ವಿನೋದ್ ಪ್ರಭಾಕರ್ ಕೊರೊನಾ ಬರುವ ಮುಂಚೆ ರಾಘವ ಮುನಿಸ್ವಾಮಿ ಅವರು ನನಗೆ ಅಡ್ವಾನ್ಸ್ ನೀಡಿ "ಲಂಕಾಸುರ" ಚಿತ್ರ ಆರಂಭಿಸಿದ್ದರು. ಆನಂತರ ಕಾರಣಾಂತರದಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೆವು. ಟೀಸರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಲೋಗೊ ಅನಾವರಣ ಮಾಡಿದರು. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ‌. ಎಲ್ಲರೂ ಇಷ್ಟಪಡುವ ಚಿತ್ರ ಮಾಡಿದ್ದೇವೆ‌. ಈ ಸಿನಿಮಾ ಎಲ್ಲಾ ವರ್ಗದ ಸಿನಿಮಾ ಪ್ರಿಯರಿಗೆ ಇಷ್ಟ ಆಗುತ್ತೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

ಸದ್ಯ ಅನಾವರಣಗೊಂಡಿರುವ ಲಂಕಾಸುರ ಚಿತ್ರದ ಮಾರ್ಡನ್‌ ಮಹಾಲಕ್ಷ್ಮಿ ಹಾಡನ್ನು, ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದು, ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲಾ ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದಾರೆ. ಮಾರ್ಡನ್ ಮಹಾಲಕ್ಷ್ಮಿ ಹಾಡನ್ನು ನಾನೇ ಹಾಡಿದ್ದೇನೆ ಅಂತಾ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹೇಳಿದರು.

ನಿರ್ದೇಶಕ ಪ್ರಮೋದ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಛಾಯಾಗ್ರಾಹಕ ಸುಜ್ಞಾನ್ ಕ್ಯಾಮರಾ ವರ್ಕ್ ಇದ್ದು, ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಈ ಸಿನಿಮಾಗೆ ಕೋರಿಯೋಗ್ರಾಫಿ ಮಾಡಿದ್ದಾರೆ‌. ಕೊನೆಯರಾಗಿ ಮಾತನಾಡಿದ ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್ ಇಡೀ ಚಿತ್ರತಂದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನಮ್ಮ ಚಿತ್ರದ ಹಾಡನ್ನು ಮಾಲಾಶ್ರೀ ಮೇಡಂ ಬಿಡುಗಡೆ ಮಾಡಿದ್ದು ನಮ್ಮ ಚಿತ್ರತಂಡಕ್ಕೆಕ್ಕೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಸದ್ಯದಲ್ಲೇ ಲಂಕಾಸುರ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್ ಹೇಳಿದರು. ಜೊತೆಗೆ ವಿನೋದ್ ಪ್ರಭಾಕರ್ ಗೆ ದೊಡ್ಡ ಮಟ್ಟದ ಹೆಸರು ತಂದುಕೊಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ :'ಕಾಂತಾರ 2'ನಲ್ಲಿ ನಟಿಸ್ತಾರಾ ಊರ್ವಶಿ ರೌಟೇಲಾ, ಅಸಲಿ ವಿಚಾರವೇನು?

ABOUT THE AUTHOR

...view details