ಕಿಚ್ಚ ಸುದೀಪ್ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರವು ಸದ್ಯ 'ರಾ ರಾ ರಕ್ಕಮ್ಮ' ಹಾಡಿನ ಮೂಲಕ ಸಾಕಷ್ಟು ಕ್ರೇಜ್ ಹುಟ್ಟಿಸಿದೆ. ಸದ್ಯ ಕಿಚ್ಚ ಸಿನಿಮಾ ಟ್ರೈಲರ್ ಬಿಡುಗಡೆ ಅಪ್ಡೇಟ್ಸ್ ನೀಡಿದ್ದಾರೆ. ಸಣ್ಣ ವಿಡಿಯೋ ಮೂಲಕ ವಿಕ್ರಾಂತ್ ರೋಣ ಟ್ರೈಲರ್ ದಿನಾಂಕ ಅನಾವರಣಗೊಳಿಸಲಾಗಿದೆ.
ಇದೇ ಜೂನ್ 23ರಂದು ವಿಕ್ರಾಂತ್ ರೋಣನ ಅವತಾರ ಟ್ರೈಲರ್ ಮೂಲಕ ಅನಾವರಣವಾಗಲಿದೆ. 'ರಂಗಿತರಂಗ' ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣನಾಗಿ ಕಾಣಿಸಿಕೊಳ್ಳಲಿದ್ದು, ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಸೇರಿ ಅನೇಕರು ಚಿತ್ರದಲ್ಲಿದ್ದಾರೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ರಾ ರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿರೋದು ಸಿನಿಮಾ ಹೈಲೆಟ್ಸ್ನಲ್ಲೊಂದಾಗಿದೆ.