ವಿಕ್ರಾಂತ್ ರೋಣ ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಕಿಚ್ಚ ಸುದೀಪ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಚಿತ್ರ. ಶೀರ್ಷಿಕೆಯಿಂದಲೇ ಬೇಜಾನ್ ಸೌಂಡ್ ಮಾಡುತ್ತಿರುವ ವಿಕ್ರಾಂತ್ ರೋಣ ಚಿತ್ರ, ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ.
ಕೆಲವು ದಿನಗಳ ಹಿಂದೆ ವಿದೇಶಗಳಲ್ಲಿ ಬಿಡುಗಡೆ ಆಗೋದಿಕ್ಕೆ ಬರೋಬ್ಬರಿ 10 ಕೋಟಿಗೆ ವಿತರಣೆ ಹಕ್ಕನ್ನು ಮಾರಾಟ ಮಾಡಲಾಯಿತು. ಇದೀಗ ಕಿಚ್ಚನ ವಿಕ್ರಾಂತ್ ರೋಣ ಚಿತ್ರಕ್ಕೆ ಬಾಲಿವುಡ್ನ ಸೂಪರ್ ಸ್ಟಾರ್ ಒಬ್ಬರು ಬಾಲಿವುಡ್ನಲ್ಲಿ ವಿತರಣೆ ಮಾಡಲು ಮುಂದೆ ಬಂದಿದ್ದಾರೆ. ಈ ಮೂಲಕ ವಿಕ್ರಾಂತ್ ರೋಣ ಸಿನಿಮಾಗೆ ಮತ್ತೊಂದು ಸ್ಟಾರ್ ಡಮ್ ಸೇರ್ಪಡೆ ಆಗಿದೆ.
ವಿಕ್ರಾಂತ್ ರೋಣ ಚಿತ್ರವನ್ನು ಉತ್ತರ ಭಾರತದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆ SKF ಪ್ರಸ್ತುತಪಡಿಸುತ್ತದೆ. ಈ ವಿಚಾರವನ್ನು ಚಿತ್ರತಂಡ ಖಚಿತ ಪಡಿಸಿದೆ. ಸಲ್ಮಾನ್ ಖಾನ್ ಹಾಗು ಸುದೀಪ್ ಆತ್ಮೀಯ ಗೆಳೆತನ ಸಿನಿಮಾ ದುನಿಯಾಕ್ಕೆ ಪರಿಚಯ ಇದೆ. ಈ ಗೆಳತನಕ್ಕೋಸ್ಕರ ಸಲ್ಮಾನ್ ಖಾನ್ ಹಿಂದಿಯಲ್ಲಿ ಸುದೀಪ್ ಸಿನಿಮಾವನ್ನು ಎಸ್ಕೆಎಫ್ ಸಂಸ್ಥೆಯ ಅಡಿ ಬಿಡುಗಡೆಗೆ ಮುಂದಾಗಿದ್ದಾರೆ.